ಆಷಾಢ ಮಾಸವು ಜೂನ್ 19ರಿಂದ ಆರಂಭವಾಗಿದ್ದು, ಇಂದು ಆಷಾಢ ಮಾಸದ ಕೊನೆಯ ಶುಕ್ರವಾರವಾಗಿದೆ. ಸಾಮಾನ್ಯವಾಗಿ ಈ ತಿಂಗಳಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡಲಾಗುವುದಿಲ್ಲ. ಆಷಾಢ ಮಾಸದಲ್ಲಿ ಚಿನ್ನದ ದರವು ಸಾಮಾನ್ಯವಾಗಿ ಕಡಿಮೆಯಾಗುತ್ತದೆ. ಈ ತಿಂಗಳಿನಲ್ಲಿ ಯಾವುದೇ ಶುಭ ಸಮಾರಂಭ ನಡೆಯುವುದಿಲ್ಲ. ಆದ್ದರಿಂದಾಗಿ ಚಿನ್ನಕ್ಕೆ ಅಧಿಕ ಬೇಡಿಕೆ ಇರುವುದಿಲ್ಲ. ಬೇಡಿಕೆ ಕಡಿಮೆ ಇರುವಾಗ ದರವು ಕಡಿಮೆಯಾಗುತ್ತದೆ.
ಆದರೆ ಈ ಆಷಾಢ ಮಾಸದಲ್ಲಿ ಚಿನ್ನದ ಬೆಲೆಯು ಕಡಿಮೆಯಾಗಿಲ್ಲ. ಆಷಾಢ ಮಾಸದಲ್ಲಿ ಬಂಗಾರ ಬೆಲೆಯು ನಿರಂತರವಾಗಿ ಏರಿಳಿತ ಕಾಣುತ್ತಿದೆ. ಆದರೆ 60 ಸಾವಿರ ರೂಪಾಯಿಯ ಆಸುಪಾಸಿನಲ್ಲಿ ಚಿನ್ನದ ಬೆಲೆ ಇದೆ. ಕಳೆದ ಎರಡು ದಿನಗಳಿಂದ ಚಿನ್ನದ ದರವು ಹೆಚ್ಚಳವಾಗಿದ್ದು, ಇಂದು ಸ್ಥಿರವಾಗಿದೆ. ಕಳೆದ ಹತ್ತು ದಿನಗಳ ಬೆಳವಣಿಗೆಯನ್ನು ನಾವು ನೋಡಿದಾಗ, ಇಳಿಕೆಗಿಂತ ಅಧಿಕ ದರವು ಏರಿಕೆಯಾಗಿದೆ. ನೀವು ಚಿನ್ನ ಖರೀದಿ ಮಾಡುವುದಾದರೆ ಇಲ್ಲಿದೆ ವಿವರ ಮುಂದೆ ಓದಿ....

ಬಂಗಾರ ದರ ಎಷ್ಟಿದೆ ನೋಡಿ
ನಿನ್ನೆ ಏರಿಕೆಯಾಗಿದ್ದ ಬಂಗಾರ ದರವು ಇಂದು ಸ್ಥಿರವಾಗಿದೆ. ಕಳೆದ ಐದು ದಿನದಲ್ಲಿ 1 ಬಾರಿ ಗೋಲ್ಡ್ ರೇಟ್ ಕುಸಿದಿದ್ದು 2 ಬಾರಿ ಮಾತ್ರ ಏರಿಕೆಯಾಗಿದೆ. 2 ಬಾರಿ ಸ್ಥಿರವಾಗಿದೆ. ಇನ್ನು ಕಳೆದ ಹತ್ತು ದಿನದಲ್ಲಿ ಬಂಗಾರ ದರ 2 ಬಾರಿ ಇಳಿಕೆಯಾಗಿದ್ದರೆ 4 ಬಾರಿ ಏರಿಕೆಯಾಗಿದೆ. 4 ಬಾರಿ ಸ್ಥಿರವಾಗಿದೆ. ಸತತ ಮೂರು ದಿನಗಳಿಂದ ಬಂಗಾರ ದರ ಏರಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 7 ಬಾರಿ ಬೆಳ್ಳಿ ಬೆಲೆ ಏರಿದ್ದು 1 ಬಾರಿ ಇಳಿದಿದೆ. 2 ಬಾರಿ ಸ್ಥಿರವಾಗಿದೆ.
ಜುಲೈ 14ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ ಸ್ಥಿರವಾಗಿದ್ದು ಪ್ರಸ್ತುತ 55,000 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಯಥಾಸ್ಥಿತಿಯನ್ನು ಕಾಯ್ದುಕೊಂಡಿದ್ದು ಪ್ರಸ್ತುತ 60,000 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಏರಿಕೆಯಾಗಿದೆ. ಇಂದು ಒಂದು ಕೆಜಿ ಬೆಳ್ಳಿ ದರ 1500 ರೂಪಾಯಿ ಏರಿಕೆ ಕಂಡಿದ್ದು ಪ್ರಸ್ತುತ 77,100 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ಜುಲೈ 14ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 59263.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 75640.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.0.11ರಷ್ಟು ಇಳಿಕೆಯಾಗಿದ್ದು 1,957.82 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.35ರಷ್ಟು ಕುಗ್ಗಿದ್ದು 24.78 ಯುಎಸ್ ಡಾಲರ್ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 55,000 ರೂಪಾಯಿ (---------)
24 ಕ್ಯಾರೆಟ್ ಚಿನ್ನ: 60,000 ರೂಪಾಯಿ (---------)
ಮುಂಬೈ
22 ಕ್ಯಾರೆಟ್ ಚಿನ್ನ: 55,000 ರೂಪಾಯಿ (---------)
24 ಕ್ಯಾರೆಟ್ ಚಿನ್ನ: 60,000 ರೂಪಾಯಿ (---------)
ದೆಹಲಿ
22 ಕ್ಯಾರೆಟ್ ಚಿನ್ನ: 55,150 ರೂಪಾಯಿ (---------)
24 ಕ್ಯಾರೆಟ್ ಚಿನ್ನ: 60,150 ರೂಪಾಯಿ (---------)
ಕೇರಳ
22 ಕ್ಯಾರೆಟ್ ಚಿನ್ನ: 55,000 ರೂಪಾಯಿ (---------)
24 ಕ್ಯಾರೆಟ್ ಚಿನ್ನ: 60,000 ರೂಪಾಯಿ (---------)
ಮಂಗಳೂರು
22 ಕ್ಯಾರೆಟ್ ಚಿನ್ನ: 55,000 ರೂಪಾಯಿ (---------)
24 ಕ್ಯಾರೆಟ್ ಚಿನ್ನ: 60,000 ರೂಪಾಯಿ (---------)
ಮೈಸೂರು
22 ಕ್ಯಾರೆಟ್ ಚಿನ್ನ: 55,000 ರೂಪಾಯಿ (---------)
24 ಕ್ಯಾರೆಟ್ ಚಿನ್ನ: 60,000 ರೂಪಾಯಿ (---------)


Click it and Unblock the Notifications