ಸೆನ್ಸೆಕ್ಸ್, ನಿಫ್ಟಿ ಇಂದು ಲಾಭದೊಂದಿಗೆ ವಹಿವಾಟು ಆರಂಭ ಮಾಡುವ ಸಾಧ್ಯತೆಯಿದೆ, ಆದರೂ ಕೂಡ ಜಾಗತಿಕ ಸೂಚನೆಗಳ ನಡುವೆ ಸ್ಥಿತಿ ಅಸ್ಥಿರವಾಗಿದೆ. ಯುಎಸ್ ಷೇರುಗಳು ರಾತ್ರಿ ವಹಿವಾಟಿನಲ್ಲಿ ಭಾರೀ ಕುಸಿತ ಕಂಡಿದೆ. ಇದರ ಪರಿಣಾಮ ಭಾರತೀಯ ಷೇರುಗಳ ಮೇಲೆ ಇಂದು ಉಂಟಾಗುವ ನಿರೀಕ್ಷೆಯಿದೆ.
ಮಂಗಳವಾರ ಆಗಸ್ಟ್ 22 ರಂದು ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ 3.94 ಅಂಕಗಳು ಅಥವಾ ಶೇಕಡ 0.01 ರಷ್ಟು ಏರಿಕೆಯಾಗಿ, 65,220.03 ಕ್ಕೆ ತಲುಪಿದೆ. ಇನ್ನು ನಿಫ್ಟಿ 2.90 ಪಾಯಿಂಟ್ ಅಥವಾ ಶೇಕಡ 0.01 ರಷ್ಟು ಜಿಗಿತ ಕಂಡು 19,396.50 ಕ್ಕೆ ವಹಿವಾಟು ಅಂತ್ಯ ಮಾಡಿದೆ. ಆಗಸ್ಟ್ 23 ರಂದು ಯಾವೆಲ್ಲ ಸ್ಟಾಕ್‌ಗಳ ಮೇಲೆ ನಿಮ್ಮ ಗಮನವಿರಬೇಕು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ.....

ಜಿಯೋ ಹಣಕಾಸು ಸೇವೆಗಳು
ಜಿಯೋ ಫಿನಾನ್ಶಿಯಲ್ ಸರ್ವಿಸಸ್ ಷೇರುಗಳು ಮಂಗಳವಾರ ಶೇಕಡ 5ರಷ್ಟು ಕುಸಿದು 236.45 ರೂಪಾಯಿಗೆ ತಲುಪಿದೆ. ಷೇರುಪೇಟೆಗೆ ಎಂಟ್ರಿ ನೀಡಿದ ಸತತ ಎರಡು ದಿನಗಳಿಂದ ಸ್ಟಾಕ್ ಕುಸಿತ ಕಂಡಿದೆ. ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಅನ್ನು ಈಗ ಬಿಎಸ್‌ಇ ಸೂಚ್ಯಂಕಗಳಿಂದ ಆಗಸ್ಟ್ 24, 2023 ರ ಹಿಂದಿನ ಗಡುವಿನ ಬದಲಿಗೆ ಆಗಸ್ಟ್ 29, 2023 ರಂದು ತೆಗೆದುಹಾಕಲಾಗುತ್ತದೆ.
ಅದಾನಿ ಗ್ರೀನ್ ಎನರ್ಜಿ
ಷೇರು ವಿನಿಮಯ ಕೇಂದ್ರಗಳಾದ ಬಿಎಸ್‌ಇ ಮತ್ತು ಎನ್‌ಎಸ್‌ಇ ಮಂಗಳವಾರ ಅದಾನಿ ಗ್ರೀನ್ ಎನರ್ಜಿ ಸಂಸ್ಥೆ ಮೇಲೆ 2,24,200 ರೂಪಾಯಿ ದಂಡವನ್ನು ವಿಧಿಸಿದೆ. "ಮಹಿಳಾ ನಿರ್ದೇಶಕರ ಅಕಾಲಿಕ ಮರಣ ಮತ್ತು ಸ್ವತಂತ್ರ ನಿರ್ದೇಶಕರ ನಿರ್ಗಮನದಿಂದಾಗಿ ನಿಯಮ ಉಲ್ಲಂಘಣೆಯಾಗಿದೆ," ಎಂದು ಅದಾನಿ ಗ್ರೀನ್ ಎನರ್ಜಿ ಸ್ಟಾಕ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ಹೇಳಿದೆ.
ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶುರೆನ್ಸ್ ಕಂಪನಿ
ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶುರೆನ್ಸ್ ಕಂಪನಿಯು ನಾನ್ ಎಕ್ಸಿಕ್ಯೂಟಿವ್ ಆಫೀಸರ್ ಆಗಿದ್ದ ಬೆಂಜಮಿನ್ ಬುಲ್ಮರ್ ರಾಜೀನಾಮೆ ನೀಡಿದ್ದು, ಆಗಸ್ಟ್ 22, 2023 ರಿಂದ ಜಾರಿಗೆ ಬರುವಂತೆ ನಿರ್ದೇಶಕರ ಮಂಡಳಿಯು ಸೋಲ್ಮಾಜ್ ಅಲ್ಟಿನ್‌ರನ್ನು ನಾನ್ ಎಕ್ಸಿಕ್ಯೂಟಿವ್ ಆಫೀಸರ್ ಆಗಿ ನೇಮಿಸಿದ ಎಂದು ಸ್ಟಾಕ್ ಎಕ್ಸ್ಚೇಂಜ್‌ಗಳಿಗೆ ಮಾಹಿತಿ ನೀಡಿದೆ. ಸೋಲ್ಮಾಜ್ ಅಲ್ಟಿನ್ ಭಾರತ, ಇಂಡೋನೇಷ್ಯಾ, ಫಿಲಿಪೈನ್ಸ್, ಲಾವೋಸ್, ಮ್ಯಾನ್ಮಾರ್, ಕಾಂಬೋಡಿಯಾ, ಆಫ್ರಿಕಾ ಮತ್ತು ಮಲೇಷ್ಯಾದಲ್ಲಿ ಪ್ರುಡೆನ್ಶಿಯಲ್ ಗ್ರೂಪ್‌ನ ಕಾರ್ಯತಂತ್ರದ ವ್ಯವಹಾರದ ಉಸ್ತುವಾರಿ ವಹಿಸಿದ್ದಾರೆ.
ಬಿಇಎಂಎಲ್
101 ಕೋಟಿ ಕೋಟಿ ರೂಪಾಯಿಗಳ ಕಮಾಂಡ್ ಪೋಸ್ಟ್ ವೆಹಿಕಲ್‌ಗಳ ತಾತ್ಕಾಲಿಕ ಒಪ್ಪಂದಕ್ಕಾಗಿ ಬಿಇಎಂಎಲ್ ಲಿಮಿಟೆಡ್ ಮಂಗಳವಾರದಂದು ರಕ್ಷಣಾ ಸಚಿವಾಲಯದಿಂದ (ಸೇನೆ) ಆದೇಶವನ್ನು ಸ್ವೀಕರಿಸಿದೆ.
ವಿಪ್ರೋ
ಐಟಿ ದೈತ್ಯ ವಿಪ್ರೋ ಮಂಗಳವಾರ ಭಾರತದಲ್ಲಿ ಡಿಜಿಟಲ್ ಕೌಶಲ್ಯ ರುಜುವಾತು ಮತ್ತು ಪರಿಶೀಲನೆ ಉಪಕ್ರಮವನ್ನು ಪ್ರಾರಂಭಿಸಿದೆ. ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಶಿಕ್ಷಣ ಕ್ಷೇತ್ರವು ದ್ವಿಗುಣಗೊಳ್ಳುವ ನಿರೀಕ್ಷೆಯಿದೆ ಎಂದು ವಿಪ್ರೋ ಲಿಮಿಟೆಡ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ ಸುಭಾ ತಟವರ್ತಿ ಹೇಳಿದ್ದಾರೆ.
ಎಲ್‌ಐಸಿ
ಎಲ್‌ಐಸಿ ಕಂಪನಿಯು ಮಂಗಳವಾರ ಎಂಫಾಸಿಸ್‌ನಲ್ಲಿ ತನ್ನ ಷೇರುಗಳನ್ನು 94,12,589 ರಿಂದ 95,30,789 ಈಕ್ವಿಟಿ ಷೇರುಗಳಿಗೆ ಹೆಚ್ಚಿಸಿದೆ ಎಂದು ಘೋಷಿಸಿದೆ. ಅಂದರೆ ಎಂಫಾಸಿಸ್‌ನಲ್ಲಿ ಎಲ್‌ಐಸಿ ಷೇರುಗಳು ಶೇಕಡ 4.991ರಿಂದ ಶೇಕಡ 5.054ಕ್ಕೆ ಏರಿಕೆಯಾಗಿದೆ.
ಪಿರಮಲ್ ಎಂಟರ್‌ಪ್ರೈಸಸ್
ಪಿರಮಲ್ ಎಂಟರ್‌ಪ್ರೈಸಸ್ ಕಂಪನಿಯ ನಿರ್ದೇಶಕರ ಮಂಡಳಿಯು ಮಂಗಳವಾರದಂದು ಅನ್ವಯವಾಗುವಂತೆ, 1,000 ರೂಪಾಯಿಗಳ ಮುಖಬೆಲೆಯ ಎನ್‌ಸಿಡಿ ಗಳನ್ನು ಸಾರ್ವಜನಿಕ ವಿತರಣೆಯ ಮೂಲಕ ಒಂದು ಅಥವಾ ಹೆಚ್ಚಿನ ಹಂತಗಳಲ್ಲಿ 3,000 ಕೋಟಿ ರೂಪಾಯಿಗಳ ಮೊತ್ತಕ್ಕೆ ಸಾರ್ವಜನಿಕ ವಿತರಣೆಯ ಮೂಲಕ ನಿಯಂತ್ರಕ ಮತ್ತು ಶಾಸನಬದ್ಧ ಅನುಮೋದನೆಗಳಿಗೆ ಒಳಪಟ್ಟು ಅನುಮೋದಿಸಿದೆ.
ಪೆರ್ಸಿಸ್‌ಟೆಂಟ್ ಸಿಸ್ಟಮ್ಸ್
ಪೆರ್ಸಿಸ್‌ಟೆಂಟ್ ಸಿಸ್ಟಮ್ಸ್ ಕಂಪನಿಯು ಮಂಗಳವಾರ ಸಾರ್ವಜನಿಕ ಕ್ಲೌಡ್ ಐಟಿ ಟ್ರಾನ್ಸ್‌ಫರ್ಮೇಷನ್ ಸೇವೆಗಳಿಗಾಗಿ 2023 ರ ಗಾರ್ಟ್‌ನರ್ ಮ್ಯಾಜಿಕ್ ಕ್ವಾಡ್ರಾಂಟ್‌ನಲ್ಲಿ ಚಾಲೆಂಜರ್ ಆಗಿ ತನ್ನ ಮಾನ್ಯತೆಯನ್ನು ಘೋಷಿಸಿದೆ.
ಅಸ್ಟೆಕ್ ಲೈಫ್ ಸೈನ್ಸಸ್
ಅಸ್ಟೆಕ್ ಲೈಫ್ ಸೈನ್ಸಸ್ ಕಂಪನಿಯ ನಿರ್ದೇಶಕರ ಮಂಡಳಿಯು ಮಂಗಳವಾರ ಅರ್ಹ ಹೂಡಿಕೆದಾರರಿಗೆ 1,00,000 ರೂಪಾಯಿ ಮುಖಬೆಲೆಯ (ಒಟ್ಟಾಗಿ 49 ಕೋಟಿ ರೂಪಾಯಿ) 4,900 ಎನ್‌ಸಿಡಿಗಳ ಹಂಚಿಕೆಯನ್ನು ಅನುಮೋದಿಸಿದೆ. ನೀಡಲಾಗುವ ಕೂಪನ್ ಪ್ರತಿ ವರ್ಷಕ್ಕೆ ಶೇಕಡ 8.40 ರಂತಿದ್ದು, ರಿಡೆಂಪ್ಶನ್ ಆಗಸ್ಟ್ 21, 2026 ರಂದು ಇರುತ್ತದೆ. ಎನ್‌ಸಿಡಿ ಹಂಚಿಕೆಯ ದಿನಾಂಕದಿಂದ 3 ವರ್ಷಗಳ ಅವಧಿ ಇದೆ.
ವೊಡಾಫೋನ್ ಐಡಿಯಾ
ವೊಡಾಫೋನ್ ಐಡಿಯಾ ಕಂಪನಿಯು ಸೆಪ್ಟೆಂಬರ್‌ನೊಳಗೆ ಸುಮಾರು 2,400 ಕೋಟಿ ರೂಪಾಯಿ ಸರ್ಕಾರಿ ಸಾಲವನ್ನು ಪಾವತಿಸುವ ಗುರಿಯನ್ನು ಹೊಂದಿದೆ ಎಂದು ಷೇರು ವಿನಿಮಯ ಕೇಂದ್ರಗಳಿಗೆ ತಿಳಿಸಿದೆ. ಇದು ಇತ್ತೀಚೆಗೆ 2022-23ರ ಮಾರ್ಚ್ ತ್ರೈಮಾಸಿಕಕ್ಕೆ ಪರವಾನಗಿ ಶುಲ್ಕ ಮತ್ತು ಸ್ಪೆಕ್ಟ್ರಮ್ ವೆಚ್ಚಗಳಾಗಿ 450 ಕೋಟಿ ರೂಪಾಯಿ ಪಾವತಿಸಿದೆ.


Click it and Unblock the Notifications