ಅಮೆರಿಕದ ಕೋಳಿ ಮಾಂಸ ಪೂರೈಕೆ ಟಾಪ್ ಕಂಪೆನಿಗೆ ಚೀನಾದಲ್ಲಿ ನಿಷೇಧ

ಯು.ಎಸ್.ನ ಟಾಪ್ ಪೌಲ್ಟ್ರಿ ಫಾರ್ಮ್ ನಿಂದ ಕೋಳಿ ಮಾಂಸ ಆಮದು ಮಾಡುವುದನ್ನು ಚೀನಾದಲ್ಲಿ ನಿಷೇಧ ಮಾಡಲಾಗಿದೆ. ಇನ್ನು ಬೀಜಿಂಗ್ ನಲ್ಲಿ ಇರುವ ಪೆಪ್ಸಿ ಕಾರ್ಖಾನೆ ಘಟಕವನ್ನು ಮುಚ್ಚುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಬೀಜಿಂಗ್ ನಲ್ಲಿ ಇಪ್ಪತ್ತೆರಡು ಕೊರೊನಾ ಪ್ರಕರಣಗಳನ್ನು ಆರೋಗ್ಯ ಅಧಿಕಾರಿಗಳು ಹೊಸದಾಗಿ ವರದಿ ಮಾಡಿದ್ದಾರೆ.

ಟೈಸನ್ ಫುಡ್ಸ್ ನಿಂದ ಫ್ರೋಜನ್ ಕೋಳಿ ಮಾಂಸದ ಆಮದನ್ನು "ತಾತ್ಕಾಲಿಕವಾಗಿ ಅಮಾನತು" ಮಾಡಲಾಗಿದೆ ಎಂದು ಸೀಮಾ ಸುಂಕದ ಜನರಲ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ. ಏಕೆಂದರೆ, ಯು.ಎಸ್.ನಲ್ಲಿನ ಕಂಪೆನಿಯ ಒಂದು ಉತ್ಪಾದನಾ ಕೇಂದ್ರದಲ್ಲಿ ಕೊರೊನಾ ಕಾಣಿಸಿಕೊಂಡಿತ್ತು. ಆ ನಿಟ್ಟಿನಲ್ಲಿ ಈ ನಿರ್ಧಾರ ಬಂದಿದೆ.

ಇನ್ನು ಈಗಾಗಲೇ ಟೈಸನ್ ಫುಡ್ಸ್ ನಿಂದ ಬಂದಿರುವ ಎಲ್ಲ ಉತ್ಪನ್ನಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಚೀನಾದ ವರದಿಯಲ್ಲಿ ತಿಳಿಸಲಾಗಿದೆ. ಬೀಜಿಂಗ್ ನಲ್ಲಿ ಹಲವು ಉದ್ಯೋಗಿಗಳಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದ ಮೇಲೆ ಪೆಪ್ಸಿಕೋ ಸ್ನ್ಯಾಕ್ ಮಾಡುವ ಘಟಕವನ್ನು ಮುಚ್ಚಲು ಸೂಚಿಸಲಾಗಿದೆ ಎಂದು ಕಂಪೆನಿ ವಕ್ತಾರರು ತಿಳಿಸಿದ್ದಾರೆ.

ಅಮೆರಿಕದ ಕೋಳಿ ಮಾಂಸ ಪೂರೈಕೆ ಟಾಪ್ ಕಂಪೆನಿಗೆ ಚೀನಾದಲ್ಲಿ ನಿಷೇಧ

ಅತಿ ಹೆಚ್ಚು ಅಪಾಯ ಇರುವ ದೇಶಗಳಿಂದ ಬರು ಹೊಸ ಉತ್ಪನ್ನಗಳನ್ನು ಪರಿಶೀಲನೆ ನಡೆಸಲು ರಾಷ್ಟ್ರವ್ಯಾಪಿ ಅಭಿಯಾನ ಆರಂಭಿಸಲಾಗಿದೆ ಎಂದು ಶುಕ್ರವಾರ ಅಧಿಕಾರಿಗಳು ಹೇಳಿದ್ದಾರೆ. ಏಕೆಂದರೆ ಜರ್ಮನಿ, ಯು.ಎಸ್. ಕ್ಲಸ್ಟರ್ಸ್ ಘಟಕಗಳಲ್ಲಿ ಹೊಸದಾಗಿ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+