ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದ ರಫ್ತುಗಳ ಮೇಲಿನ ಸುಂಕವನ್ನು ಶೇ. 104 ರಿಂದ ಶೇ. 145ಕ್ಕೆ ಹೆಚ್ಚಿಸಿದ್ದಾದೆ.ಇದಕ್ಕೆ ಪ್ರತಿಯಾಗಿ ಚೀನಾ ಕೂಡ ಅಮೆರಿಕದಿಂದ ಬರುವ ಎಲ್ಲಾ ಸರಕುಗಳ ಮೇಲೆ ಶುಕ್ರವಾರ ಮತ್ತೊಮ್ಮೆ ಸುಂಕವನ್ನು ಶೇ.125ಕ್ಕೆ ಹೆಚ್ಚಳ ಮಾಡಿದೆ.
ಹೌದು,ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದ ರಫ್ತುಗಳ ಮೇಲಿನ ಸುಂಕವನ್ನು ಶೇ.104 ರಿಂದ ಶೇ.145ಕ್ಕೆ ಹೆಚ್ಚಿಸಿದ್ದು,ಇದಕ್ಕೆ ಪ್ರತಿಯಾಗಿ ಚೀನಾ ಸಹ, ಅಮೆರಿಕದಿಂದ ಬರುವ ಎಲ್ಲಾ ಸರಕುಗಳ ಮೇಲಿನ ಸುಂಕವನ್ನು ಇಂದಿನಿಂದ ಮತ್ತೊಮ್ಮೆ ಹೆಚ್ಚಳ ಮಾಡಿದ್ದು,ಈಗ ಶೇ.125ಕ್ಕೆ ಹೆಚ್ಚಳ ಮಾಡಿದೆ.

ಅಮೆರಿಕಾ ಮತ್ತು ಚೀನಾ ನಡುವೆ ನಡೆದಿರುವ ವಾಣಿಜ್ಯ ಯುದ್ಧ (trade war) ಮತ್ತಷ್ಟು ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಚೀನಾ ಇದಕ್ಕೂ ಮುನ್ನ ಅಮೆರಿಕದ ಸರಕುಗಳ ಮೇಲೆ ಶೇ.34 ರಷ್ಟು ಸುಂಕ ವಿಧಿಸುವುದಾಗಿ ಹೇಳಿಕೆ ಮಾಡಿತ್ತು.ಇದು ಆದ ನಂತರ ಶೇ.84ಕ್ಕೆ ಹೆಚ್ಚಿಸುವ ಮೂಲಕ ಅಮೆರಿಕಕ್ಕೆ ಟಕ್ಕರ್ ಕೊಟ್ಟಿತ್ತು.
ಆದೇ ರೀತಿ ವಿಶ್ವದ ದೊಡ್ಡಣ್ಣ ಅಮೆರಿಕ ಸಹ ಚೀನಾದ ರಫ್ತುಗಳ ಮೇಲೆ ಶೇ.104 ರಷ್ಟು ಸುಂಕ ವಿಧಿಸುವುದಾಗಿ ಹೇಳಿಕೆ ನೀಡಿದೆ. ಆದರೆ ಅದನ್ನು ದಿಢೀರ್ ಅಂತ 145ಕ್ಕೆ ಹೆಚ್ಚಳ ಮಾಡಿದೆ.ಜಾಗತಿಕ ಮಟ್ಟದಲ್ಲಿ ವ್ಯಾಪಾರ ಯುದ್ಧಗಳು ತೀವ್ರ ಸ್ವರೂಪವನ್ನು ಕಂಡಿದೆ.ಇದರಿಂದ ಸಿಡಿದೆದ್ದು ಚೀನಾ ಈಗ ಅಮೆರಿಕದ ರಫ್ತುಗಳ ಮೇಲಿನ ಸುಂಕವನ್ನು125ಕ್ಕೆ ಹೆಚ್ಚಳ ಮಾಡಿದೆ.
ಅಂತರರಾಷ್ಟ್ರೀಯ ವಾಣಿಜ್ಯ ನಿಯಮಗಳ ಉಲ್ಲಂಘನೆ ಕುರಿತು ವಿವಾದಗಳು ಮತ್ತಷ್ಟು ಗಂಭೀರವಾಗಬಹುದು.ಡಬ್ಲ್ಯೂಟಿಒ ಇದರ ವಿಚಾರಣೆ ನಡೆಸಿ,ಇವೆರಡೂ ದೇಶಗಳಿಗೆ ನಂಬಿಕೊಳ್ಳಬಹುದಾದ ತೀರ್ಪು ನೀಡಲು ಪ್ರಯತ್ನಿಸಬಹುದು.ಈ ವಿಚಾರವು ಅಮೆರಿಕ-ಚೀನಾ ಸಂಬಂಧಗಳು ಮತ್ತು ಜಾಗತಿಕ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರುವ ಹೆಚ್ಚಿನ ಸಾಧ್ಯತೆ ಇದೆ.
ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ಹೆಚ್ಚುವರಿ ಸುಂಕವನ್ನು ಶೇ.125 ಕ್ಕೆ ಹೆಚ್ಚಳ ಮಾಡಿದೆ ಎಂದು ಬೀಜಿಂಗ್‌ನಲ್ಲಿರುವ ಚೀನಾ ವಾಣಿಜ್ಯ ಸಚಿವಾಲಯ ಮಾಹಿತಿಯನ್ನುತಿಳಿಸಿದೆ.ಅಮೆರಿಕ ಸುಂಕ ಏರಿಕೆಯ ನಂತರ ಚೀನಾ ಡಬ್ಲ್ಯೂಟಿಒಗೆ ದೂರು ದಾಖಲಿಸಿದೆ ಎಂದು ವಾಣಿಜ್ಯ ಸಚಿವಾಲಯ ಮಾಹಿತಿಯನ್ನು ತಿಳಿಸಿದೆ.
ಚೀನಾದ ವಾಣಿಜ್ಯ ಸಚಿವಾಲಯದ ಹೇಳಿಕೆ ಹೀಗಿದೆ
ಯುನೈಟೆಡ್ ಸ್ಟೇಟ್ಸ್, ಚೀನಾದ ವಿರುದ್ಧ ಸುಂಕ ಏರಿಕೆ ಮಾಡುವ ಮೂಲಕ ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುತ್ತಿದೆ ಮತ್ತು ಚೀನಾದ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ತೀವ್ರವಾಗಿ ಉಲ್ಲಂಘಿಸುತ್ತಿದೆ ಎಂದು ಚೀನಾ ಸಚಿವಾಲಯ ಕಿಡಿ ಕಾರಿದೆ.
ಅಮೆರಿಕ-ಚೀನಾ ವ್ಯಾಪಾರ ಯುದ್ಧ: ಟ್ರಂಪ್ ಸುಂಕಗಳ ಬಗ್ಗೆ ಕ್ಸಿ ಜಿನ್‌ಪಿಂಗ್
ಶುಕ್ರವಾರ ಬೀಜಿಂಗ್‌ನಲ್ಲಿ ಸ್ಪ್ಯಾನಿಷ್ ಕೌಂಟರ್‌ಪಾರ್ಟ್ ಪೆಡ್ರೊ ಸ್ಯಾಂಚೆಜ್ ಅವರನ್ನು ಭೇಟಿಯಾದ ಕ್ಸಿ ಜಿನ್‌ಪಿಂಗ್, ಸುಂಕ ಯುದ್ಧಗಳಲ್ಲಿ "ಯಾವುದೇ ವಿಜೇತರು" ಇಲ್ಲ ಎಂದು ಒತ್ತಿ ಹೇಳಿದರು.
ಚೀನಾ ಅಧ್ಯಕ್ಷರು ಯುರೋಪಿಯನ್ ಒಕ್ಕೂಟಕ್ಕೆ ವಾಷಿಂಗ್ಟನ್ ಜೊತೆಗಿನ ಹೆಚ್ಚುತ್ತಿರುವ ವ್ಯಾಪಾರ ಯುದ್ಧದಿಂದ ಹೊರಬರಲು ಚೀನಾದೊಂದಿಗೆ ಸಹಕರಿಸುವ ಅಗತ್ಯವಿದೆ ಎಂದು ಎಚ್ಚರಿಸಿದ್ದಾರೆ ಎಂದು ಕ್ಸಿನ್ಹುವಾ ಮಾಹಿತಿಯನ್ನು ತಿಳಿಸಿದೆ.
ಚೀನಾ ಮತ್ತು ಯುರೋಪ್ ತಮ್ಮ ಅಂತರರಾಷ್ಟ್ರೀಯ ಜವಾಬ್ದಾರಿಗಳನ್ನು ಪೂರೈಸಬೇಕು.ಮತ್ತು ಏಕಪಕ್ಷೀಯ ಬೆದರಿಸುವ ಅಭ್ಯಾಸಗಳನ್ನು ಜಂಟಿಯಾಗಿ ವಿರೋಧಿಸಬೇಕು ಎಂದು ಅವರು ಹೇಳಿದರು, ಇದು ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಕಾಪಾಡುವುದಲ್ಲದೆ ಅಂತರರಾಷ್ಟ್ರೀಯ ನ್ಯಾಯ ಮತ್ತು ನ್ಯಾಯವನ್ನು ಸಹ ಕಾಪಾಡುತ್ತದೆ ಎಂದು ಪ್ರತಿವಾದವನ್ನು ಸಹ ಮಾಡಿದ್ದರು.
ಅಧ್ಯಕ್ಷ ಟ್ರಂಪ್ ತಮ್ಮ ಚೀನಾದ ಪ್ರತಿರೂಪವನ್ನು "ಬುದ್ಧಿವಂತ ವ್ಯಕ್ತಿ" ಎಂದು ಕರೆದ ಕೆಲವು ದಿನಗಳ ನಂತರ ಅಮೆರಿಕ-ಚೀನಾ ವ್ಯಾಪಾರ ಯುದ್ಧ ಶುರುವಾಗಿದೆ.
ಅಧ್ಯಕ್ಷ ಕ್ಸಿ ಅವರು ಏನು ಮಾಡಬೇಕೆಂದು ನಿಖರವಾಗಿ ತಿಳಿದಿರುವ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ. ಅವರು ತುಂಬಾ ಬುದ್ಧಿವಂತ ವ್ಯಕ್ತಿ. ಅವರು ತಮ್ಮ ದೇಶವನ್ನು ಪ್ರೀತಿಸುತ್ತಾರೆ. ಅದು ನನಗೆ ನಿಜಕ್ಕೂ ತಿಳಿದಿದೆ. ನನಗೆ ಅವರನ್ನು ಚೆನ್ನಾಗಿ ತಿಳಿದಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.


Click it and Unblock the Notifications