ಪಾಕಿಸ್ತಾನದಲ್ಲಿ ವಿಪರೀತ ಮಿಡತೆಗಳ ಕಾಟ: ಪಾಕ್ ಸಹಾಯಕ್ಕೆ ಮುಂದಾದ ಚೀನಾ

ಪಾಕಿಸ್ತಾನದಲ್ಲಿ ಕೀಟಗಳ ಕಾಟ ವಿಪರೀತ ಕೈ ಮೀರಿ ಹೋಗಿದೆ. ದೇಶದಲ್ಲಿ ಮಿಡತೆಗಳ ಸಮಸ್ಯೆಯನ್ನು ಎದುರಿಸಲು ಚೀನಾ ಸಹಾಯವನ್ನು ಕೋರಿದೆ.

ಪಾಕಿಸ್ತಾನ ದಶಕದಲ್ಲೇ ಅತ್ಯಂತ ಕೆಟ್ಟ ಮಿಡತೆ ದಾಳಿಯನ್ನು ಎದುರಿಸುತ್ತಿದೆ. ಹೀಗಾಗಿ ಪರಿಣಾಮಕಾರಿ ಕೀಟ ನಿಯಂತ್ರಣ ವ್ಯವಸ್ಥೆಯನ್ನು ಸ್ಥಾಪಿಸಲು ಪಾಕಿಸ್ತಾನಕ್ಕೆ ಸಹಾಯ ಮಾಡುವುದಾಗಿ ಚೀನಾ ಹೇಳಿದೆ.

ಪಾಕಿಸ್ತಾನದಲ್ಲಿ ವಿಪರೀತ ಮಿಡತೆಗಳ ಕಾಟ: ಪಾಕ್ ಸಹಾಯಕ್ಕೆ ಮುಂದಾದ ಚೀನಾ

ಮಿಡತೆಗಳ ಕಾಟಕ್ಕೆ ಬೇಸತ್ತು ಫೆಬ್ರವರಿ 1ರಂದು ಪಾಕಿಸ್ತಾನ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನೇ ಘೋಷಿಸಿತು.ದೇಶದ ಪ್ರಮುಖ ಕೃಷಿ ಉತ್ಪಾದನಾ ಪ್ರದೇಶವಾದ ಪಂಜಾಬ್ ಪ್ರಾಂತ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಗಳನ್ನು ನಾಶಪಡಿಸುವ ಕೀಟಗಳನ್ನು ನಿಭಾಯಿಸಲು ಪಾಕಿಸ್ತಾನ ತಲೆಕೆಡಿಸಿಕೊಂಡಿತು. ಯಾವಾಗ ಪರಿಸ್ಥಿತಿ ಕೈ ಮೀರುತ್ತಿದೆ ಎಂದು ತಿಳಿಯಿತೋ, ಈ ವೇಳೆ ಚೀನಾದ ಸಹಾಯವನ್ನು ಕೋರಿತ್ತು.

"ಪಾಕಿಸ್ತಾನ ತೀವ್ರ ಮಿಡತೆ ಕಾಟದಿಂದ ಬಳಲುತ್ತಿದೆ. ಪಾಕಿಸ್ತಾನಕ್ಕೆ ಸಹಾಯ ಮಾಡುವ ಸಲುವಾಗಿ, ಚೀನಾದ ಕೃಷಿ ಮತ್ತು ಗ್ರಾಮೀಣ ವ್ಯವಹಾರಗಳ ಸಚಿವಾಲಯವು ಫೆಬ್ರವರಿ 23 ರಿಂದ ಮಾರ್ಚ್ 5 ರವರೆಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿದ ಕಾರ್ಯಪಡೆಗಳನ್ನು ಒಟ್ಟುಗೂಡಿಸಿದೆ "ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಮಾಧ್ಯಮಕ್ಕೆ ತಿಳಿಸಿದರು.

ಚೀನಾ ಪರಿಸ್ಥಿತಿಯನ್ನು ನಿಭಾಯಿಸುವ ಯೋಜನೆಗಳನ್ನು ಮುಂದಿಟ್ಟಿದ್ದು, 50,000 ಲೀಟರ್ ಕೀಟನಾಶಕಗಳು ಮತ್ತು 15 ಉನ್ನತ ಶಕ್ತಿಯ ಸಿಂಪಡಿಸುವ ಉಪಕರಣಗಳನ್ನು ಪಾಕಿಸ್ತಾನಕ್ಕೆ ಸಾಗಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+