ಸಾಲ ಮರುಪಾವತಿಸಲು ವಿಫಲ-ಅನಿಲ್ ಅಂಬಾನಿ ಮೇಲೆ ಕೇಸ್

ರಿಲಯನ್ಸ್ ಕಮ್ಯುನಿಕೇಷನ್ಸ್ ಅಧ್ಯಕ್ಷ ಅನಿಲ್ ಅಂಬಾನಿ ಅವರ ವಿರುದ್ಧ ಚೀನಾದ 3 ಬ್ಯಾಂಕುಗಳು ಮೊಕದ್ದಮೆ ಹೂಡಿವೆ. 680 ಮಿಲಿಯನ್ ಅಮೆರಿಕನ್ ಡಾಲರ್(ಭಾರತದ ರುಪಾಯಿಗಳಲ್ಲಿ 4,853 ಕೋಟಿ, 63 ಲಕ್ಷದ 60 ಸಾವಿರ) ಸಾಲವನ್ನು ಮರುಪಾವತಿ ಮಾಡಲು ವಿಫಲವಾಗಿದ್ದರಿಂದ ಚೀನಾದ ಬ್ಯಾಂಕುಗಳು ಲಂಡನ್‌ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿವೆ ಎಂದು 'ದಿ ಎಕನಾಮಿಕ್ಸ್ ಟೈಮ್ಸ್' ವರದಿ ಮಾಡಿದೆ.

ಚೀನಾದ ಕೈಗಾರಿಕಾ ಮತ್ತು ವಾಣಿಜ್ಯ ಬ್ಯಾಂಕ್ ಲಿಮಿಟೆಡ್‌, ಚೀನಾ ಅಭಿವೃದ್ಧಿ ಬ್ಯಾಂಕ್, ಚೀನಾ ರಫ್ತು-ಆಮದು ಬ್ಯಾಂಕ್ 2012ರಲ್ಲಿ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಶನ್ ಲಿಮಿಟೆಡ್‌ಗೆ 925.2 ಮಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 6,603 ಕೋಟಿ 80 ಲಕ್ಷದ 400) ಸಾಲವನ್ನು ನೀಡಲು ಒಪ್ಪಿಕೊಂಡಿದ್ದವು.

ಸಾಲ ಮರುಪಾವತಿಸಲು ವಿಫಲ-ಅನಿಲ್ ಅಂಬಾನಿ ಮೇಲೆ ಕೇಸ್

ಐಸಿಬಿಸಿಯ ವಕೀಲ ಬಂಕಿಮ್ ಥಾಂಕಿ ಪ್ರಕಾರ, ಅಂಬಾನಿ ವೈಯಕ್ತಿಕ ಖಾತರಿ ನೀಡುವ ಷರತ್ತಿನ (Personal guarantee condition) ಮೇಲೆ ಸಾಲವನ್ನು ನೀಡಲಾಗಿದೆ. ಆದರೆ ರಿಲಯನ್ಸ್ ಕಮ್ಯುನಿಕೇಶನ್ ಲಿಮಿಟೆಡ್ ಕೆಲವು ಪಾವತಿಗಳನ್ನು ಮಾಡಿದ್ದು, 2017 ಫೆಬ್ರವರಿ ಬಳಿಕ ಉಳಿದ ಸಾಲ ಮರುಪಾವತಿಸಲು ವಿಫಲವಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+