For Quick Alerts
ALLOW NOTIFICATIONS  
For Daily Alerts

ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಚೀನಾದ ಉದ್ಯಮಿ ಜಾಕ್ ಮಾ

By ಅನಿಲ್ ಆಚಾರ್
|

ಚೀನಾದ ಶತಕೋಟ್ಯಧಿಪತಿ ಜಾಕ್ ಮಾ ಬಗ್ಗೆ ಕಳೆದ ಎರಡ್ಮೂರು ತಿಂಗಳಿಂದ ಕೇಳಿಬರುತ್ತಿದ್ದ ಊಹಾಪೋಹಕ್ಕೆ ಬುಧವಾರ (ಜನವರಿ 20, 2021) ಶುಭಂ ಅನ್ನೋ ತೆರೆ ಬಿದ್ದಿದೆ. ಅಕ್ಟೋಬರ್ 24ರಂದು ಕೊನೆಯ ಸಲ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಆ ನಂತರ ಅವರ ಸುಳಿವೇ ಇರಲಿಲ್ಲ. ಇಂದು ಕಾರ್ಯಕ್ರಮವೊಂದರಲ್ಲಿ ವಿಡಿಯೋ ಕಾನ್ಫರೆನ್ಸ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಹಲವು ವದಂತಿಗಳಿಗೆ ಉತ್ತರ ಸಿಕ್ಕಂತಾಗಿದೆ.

ಅಲಿಬಾಬ ಮತ್ತು ಅದರ ಹಣಕಾಸು ಸಂಸ್ಥೆಯಾದ ಆಂಟ್ ಸಮೂಹದ ಸ್ಥಾಪಕ ಜಾಕ್ ಮಾ ಅವರು ಶಿಕ್ಷಕರ ಗುಂಪನ್ನು ಉದ್ದೇಶಿಸಿ ಮಾತನಾಡಿದರು. ಇದು ಗ್ರಾಮೀಣ ಭಾಗದ ಶಿಕ್ಷಕರಿಗೆ ಏರ್ಪಡಿಸುವಂಥ ವಾರ್ಷಿಕ ಸಮಾವೇಶ. ಇದರಲ್ಲಿ ವಿಡಿಯೋ ಕಾನ್ಫರೆನ್ಸ್ ಪ್ಲಾಟ್ ಫಾರ್ಮ್ ಮೂಲಕ ಅವರು ಕಾಣಿಸಿಕೊಂಡರು.

 

ಚೀನಾದಲ್ಲಿ ಜಾಕ್ ಮಾಗೆ ಚಳಿಯಾದರೆ ಭಾರತದ ಕಾರ್ಪೊರೇಟ್ ನಡುಗುವುದ್ಯಾಕೆ?

ಇದಕ್ಕೂ ಮುನ್ನ ಕೊನೆಯ ಸಲ ಸಾರ್ವಜನಿಕವಾಗಿ ಜಾಕ್ ಮಾ ಕಾಣಿಸಿಕೊಂಡಿದ್ದು ಅಕ್ಟೋಬರ್ ನಲ್ಲಿ. ಶಾಂಘೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಚೀನಾದ ರೆಗ್ಯುಲೇಟರಿ ವ್ಯವಸ್ಥೆ ವಿರುದ್ಧ ಮಾತನಾಡಿದ್ದರು. ಅಲ್ಲಿ ಆಗಬೇಕಿರುವ ಸುಧಾರಣೆ ಹಾಗೂ ತರಬೇಕಾದ ಹೊಸತನದ ಬಗ್ಗೆ ಹೇಳಿದ್ದರು.

ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಚೀನಾದ ಉದ್ಯಮಿ ಜಾಕ್ ಮಾ

ಆ ನಂತರ ಅಲ್ಲೋಲ ಕಲ್ಲೋಲವೇ ಆಯಿತು. 3700 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಆಂಟ್ ಸಮೂಹದ ಐಪಿಒಗೆ ತಡೆ ಬಿತ್ತು. ಅಲಿಬಾಬ ವಿರುದ್ಧ ತನಿಖೆಗೆ ಸರ್ಕಾರ ಆದೇಶ ನೀಡಿತು. ಒಂದು ಕಾಲಕ್ಕೆ ಇಂಗ್ಲಿಷ್ ಹೇಳಿಕೊಡುವ ಶಿಕ್ಷಕ ಆಗಿದ್ದ ಜಾಕ್ ಮಾ, ಆ ನಂತರ ಇ ಕಾಮರ್ಸ್ ಮೂಲಕ ಚೀನಾದಲ್ಲಿ ಮಾಡಿದ ಕ್ರಾಂತಿಯಿಂದ ಇಡೀ ವಿಶ್ವದಲ್ಲೇ ಚಿರಪರಿಚಿತರಾದರು. ಆದರೆ ಈಚಿನ ಜಾಕ್ ಮಾ ಹೇಳಿಕೆಗಳಿಂದ ಸರ್ಕಾರದೊಂದಿಗೆ ಹಳಸುವುದಕ್ಕೆ ಕಾರಣ ಆಗಿದೆ.

English summary

Chinese Billionaire Jack Ma Back; His Last Public Appearance On October 24

Chinese billionaire Jack Ma appears publicly on January 20, 2021. His last public appearance was on October 24, 2020.
Story first published: Wednesday, January 20, 2021, 23:43 [IST]
Company Search
COVID-19