ಯೇಸು ಕ್ರಿಸ್ತ ಜನಿಸಿದ ದಿನವನ್ನು ಕ್ರಿಸ್‌ಮಸ್ ಹಬ್ಬವನ್ನಾಗಿ ಪ್ರತಿವರ್ಷ ಆಚರಿಸಲಾಗುತ್ತದೆ. ಈ ದಿನದಂದು ಜನರು ಚರ್ಚ್ಗೆ ಹೋಗಿ ವಿಶೇಷವಾಗಿ ಪಾರ್ಥನೆ ಸಲ್ಲಿಸುವುದರೊಂದಿಗೆ ಮನೆಯನ್ನು ಕ್ರಿಸ್ಮಸ್ ಟ್ರೀ ಹಾಗೂ ಹೂವುಗಳಿಂದ ಅಲಂಕರಿಸಿ ಹಬ್ಬವನ್ನು ಆಚರಣೆ ಮಾಡುತ್ತಾರೆ. ಕ್ರಿಸ್‌ಮಸ್ ಈವ್ಗೆ ಕೆಲವು ರಾಜ್ಯಗಳಲ್ಲಿ ಬ್ಯಾಂಕ್‌ಗಳಿ ರಜೆ ಇರುತ್ತದೆ.ಹಾಗಿದ್ರೆ ಯಾವೆಲ್ಲಾ ರಾಜ್ಯಗಳ ಬ್ಯಾಂಕ್ ಗಳಿಗೆ ನಾಳೆ ರಜೆ ಇರುತ್ತದೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.
ದು, ಬ್ಯಾಂಕ್ ಗ್ರಾಹಕರು ಯಾವುದೇ ಕೆಲಸಕ್ಕಾಗಿ ಬ್ಯಾಂಕ್‌ಗೆ ಭೇಟಿ ನೀಡುವ ಮೊದಲು ಬ್ಯಾಂಕ್ ತೆರೆದಿದೆಯೇ ಅಥವಾ ಇಲ್ಲವೇ ಎಂಬದನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಅದರಲ್ಲೂ ಬ್ಯಾಂಕ್ ರಜೆ ದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಯಾವ ರಾಜ್ಯಗಳಿಗೆ ನಾಳೆ ರಜೆ ಇರಲಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ...

ಕ್ರಿಸ್ಮಸ್ ಈವ್ ಎಂದರೇನು?
ಕ್ರಿಸ್ಮಸ್ ಈವ್ ಎಂದರೆ ಕ್ರಿಸ್‌ಮಸ್ ದಿನದ ಹಿಂದಿನ ದಿನ ಅಥವಾ ಸಂಜೆ, ಇದು ಯೇಸು ಕ್ರಿಸ್ತನ ಜನ್ಮದಿನ ನೆನಪಿಗಾಗಿ ಕ್ರಿಶ್ಚಿಯನ್ನರು ಆಚರಣೆ ಮಾಡುತ್ತಾರೆ.
ಕ್ರಿಸ್ಮಸ್ ಈವ್ ನ ರಜಾದಿನಗಳು
ಡಿಸೆಂಬರ್ 24, ಮಂಗಳವಾರ ಕ್ರಿಸ್ಮಸ್ ಈವ್ ಸಂದರ್ಭದಲ್ಲಿ ಮಿಜೋರಾಂ, ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಬ್ಯಾಂಕ್‌ಗಳಿಗೆ ರಜೆ ಇದೆ. ನಂತರ ಡಿಸೆಂಬರ್ 25 ರಂದು (ಬುಧವಾರ) ಕ್ರಿಸ್ಮಸ್ ರಜೆ ಮತ್ತು ಡಿಸೆಂಬರ್ 26 ರಂದು (ಗುರುವಾರ) ಕ್ರಿಸ್ಮಸ್ ಆಚರಣೆ ಇರುತ್ತದೆ.
ಡಿಸೆಂಬರ್ 2024 ರಲ್ಲಿ ಇತರ ಬ್ಯಾಂಕ್ ರಜಾದಿನಗಳು ಯು ಕಿಯಾಂಗ್ ನಂಗ್ಬಾ ಅವರನ್ನು ಗೌರವಿಸಲು ಮೇಘಾಲಯದಲ್ಲಿ ಡಿಸೆಂಬರ್ 30 ರಂದು (ಸೋಮವಾರ) ಬ್ಯಾಂಕ್‌ಗಳಿಗೆ ರಜೆ ನೀಡಲಾಗುತ್ತದೆ. ಹಾಗೂ ಹೊಸ ವರ್ಷದ ಮುನ್ನಾ ದಿನದಂದು ಲಾಸಾಂಗ್ ನಮ್‌ಸೂಂಗ್ ಸಂದರ್ಭದಲ್ಲಿ ಡಿಸೆಂಬರ್ 31 ರಂದು ಮಿಜೋರಾಂ ಮತ್ತು ಸಿಕ್ಕಿಂನಲ್ಲಿ ಬ್ಯಾಂಕ್‌ಗಳು ಬಂದ್ ಆಗಲಿವೆ.
ರಾಜ್ಯದ ಎಲ್ಲಾ ಶೆಡ್ಯೂಲ್ಡ್ ಮತ್ತು ನಾನ್ ಶೆಡ್ಯೂಲ್ಡ್ ಬ್ಯಾಂಕ್‌ಗಳು ಎರಡನೇ ಮತ್ತು ನಾಲ್ಕನೇ ಶನಿವಾರದಂದು ಸಾರ್ವಜನಿಕ ರಜಾದಿನಗಳನ್ನು ಆಚರಿಸುತ್ತವೆ. ಭಾರತದಲ್ಲಿನ ಬ್ಯಾಂಕ್‌ಗಳು ತಿಂಗಳ ಮೊದಲ, ಮೂರನೇ ಮತ್ತು ಐದನೇ (ಅನ್ವಯಿಸಿದರೆ) ಶನಿವಾರದಂದು ತೆರೆದಿರುತ್ತವೆ.
ಡಿಜಿಟಲ್ ಬ್ಯಾಂಕಿಂಗ್
ನಿರ್ದಿಷ್ಟ ರಜಾದಿನಗಳಲ್ಲಿ ಬ್ಯಾಂಕಿಂಗ್ ವಹಿವಾಟುಗಳು ಸಾಧ್ಯವಾಗುವುದಿಲ್ಲ ಮತ್ತು ನೇರವಾಗಿ ಹೋಗಿ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲಾಗುವುದಿಲ್ಲ. ಅದೇನೇ ಇದ್ದರೂ, ಗ್ರಾಹಕರು ಇಂಟರ್ನೆಟ್ ಬ್ಯಾಂಕಿಂಗ್, SMS ಬ್ಯಾಂಕಿಂಗ್ ಮತ್ತು WhatsApp ಬ್ಯಾಂಕಿಂಗ್ ಬಳಕೆ ಮಾಡಿಕೊಳ್ಳುತ್ತಾರೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications