For Quick Alerts
ALLOW NOTIFICATIONS  
For Daily Alerts

ಭಾರತದಿಂದ ಹೊರನಡೆಯಲು ಸಿಟಿಬ್ಯಾಂಕ್ ನಿರ್ಧಾರ

|

ಭಾರತದಲ್ಲಿ ನೆಲೆಯೂರಿದ್ದ ಹಳೆಯ ಬ್ಯಾಂಕ್‌ಗಳಲ್ಲಿ ಒಂದಾದ ಅಮೆರಿಕಾ ಮೂಲಕ ಬ್ಯಾಂಕಿಂಗ್ ಸಂಸ್ಥೆ ಸಿಟಿ ಬ್ಯಾಂಕ್ ಭಾರತದಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.

 

ಅಮೆರಿಕಾದಲ್ಲಿ ಹೊರತುಪಡಿಸಿ ಭಾರತ ಅಷ್ಟೇ ಅಲ್ಲದೆ ಏಷ್ಯಾದ ಒಟ್ಟು 13 ರಾಷ್ಟ್ರಗಳು, ಯೂರೋಪ್‌ನ ಕೆಲವು ದೇಶಗಳು ಸೇರಿ ಗ್ರಾಹಕ ಬ್ಯಾಂಕಿಂಗ್ ಕಾರ್ಯಾಚರಣೆಯನ್ನು ಕೊನೆಗೊಳಿಸಲು ಮುಂದಾಗಿದೆ.

ಅಮೆರಿಕಾದ ಬ್ಯಾಂಕಿಂಗ್ ಕಂಪನಿಯಾದ ಸಿಟಿ ಬ್ಯಾಂಕ್‌ ದೇಶದಲ್ಲಿ ಒಟ್ಟು 35 ಶಾಖೆಗಳನ್ನು ಹೊಂದಿದ್ದು, ನೂರಾರು ವರ್ಷಗಳಿಂದ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆ ಸಲ್ಲಿಸುತ್ತಾ ಬಂದಿದೆ. ವಿವಿಧ ರೀತಿಯ ಸಾಲಗಳು, ಕ್ರೆಡಿಟ್ ಕಾರ್ಡ್‌, ನಾನಾ ಸಾಲ ವಿಭಾಗದಲ್ಲಿ ತನ್ನ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬಂದಿದೆ.

ಭಾರತದಿಂದ ಹೊರನಡೆಯಲು ಸಿಟಿಬ್ಯಾಂಕ್ ನಿರ್ಧಾರ

ಆದರೆ ಈಗ ದೇಶದಲ್ಲಿನ ತನ್ನ ಬ್ಯಾಂಕಿಂಗ್ ಸೇವೆಗಳ ಸ್ಥಗಿತಕ್ಕೆ ಸಿಟಿಬ್ಯಾಂಕ್‌ ನಿರ್ಧರಿಸಿದೆ. ಈ ಕುರಿತು ಅಧಿಕೃತವಾಗಿ ಪ್ರಕಟಣೆ ಕೂಡ ಹೊರಬಿದ್ದಿದೆ.

''ದೇಶದಲ್ಲಿ ಇತರ ಬ್ಯಾಂಕ್‌ಗಳಿಗೆ ಸ್ಪರ್ಧೆ ನೀಡಲು ಅಗತ್ಯವಿರುವಷ್ಟು ಪ್ರಮಾಣದಲ್ಲಿ ದೊಡ್ಡದಾಗಿ ಬೆಳೆದಿಲ್ಲದ ಕಾರಣವಾಗಿ ಬ್ಯಾಂಕಿಂಗ್ ಸೇವೆಗಳನ್ನ ಸ್ಥಗಿತಗೊಳಿಸಲು ನಿರ್ಧಾರಕ್ಕೆ ಬಂದಿದ್ದೇವೆ'' ಎಂದು ಸಿಟಿಬ್ಯಾಂಕ್‍ನ ಜಾಗತಿಕ ವಹಿವಾಟುಗಳ ಸಿಇಒ ಜೇನ್ ಫ್ರೇಸರ್ ಗುರುವಾರ ಹೇಳಿದ್ದಾರೆ.

ಇನ್ನು ತಕ್ಷಣಕ್ಕೆ ಬ್ಯಾಂಕಿಂಗ್ ಚಟುವಟಿಕೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಅಲ್ಲದೆ ಸದ್ಯ ಗ್ರಾಹಕರಿಗೆ ಸೇವೆ ಒದಗಿಸುವುದನ್ನು ಮುಂದುವರಿಸಲಿದೆ. ಏಕೆಂದರೆ ಬ್ಯಾಂಕ್ ತನ್ನ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲ ಆರ್‌ಬಿಐ ಅನುಮೋದನೆ ಅಗತ್ಯವಿರುತ್ತದೆ.

''ಈ ಪ್ರಕಟಣೆಯ ಪರಿಣಾಮವಾಗಿ ನಮ್ಮ ಕಾರ್ಯಾಚರಣೆಗಳಲ್ಲಿ ತಕ್ಷಣದ ಬದಲಾವಣೆಗಳಿಲ್ಲ ಮತ್ತು ನಮ್ಮ ಸಹೋದ್ಯೋಗಿಗಳಿಗೆ ತಕ್ಷಣದ ಪರಿಣಾಮವಿಲ್ಲ'' ಎಂದು ಸಿಟಿ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಶು ಖುಲ್ಲರ್ ಹೇಳಿದ್ದಾರೆ. ಈ ಮೂಲಕ ಭಾರತದಲ್ಲಿನ ತನ್ನ ನೌಕರರು ಮತ್ತು ಕಾರ್ಯಾಚರಣೆಗಳ ಮೇಲೆ ತಕ್ಷಣದ ಪರಿಣಾಮ ಬೀರುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

16 ಜೂನ್ 1812ರಲ್ಲಿ ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ಸ್ಥಾಪನೆಗೊಂಡ ಸಿಟಿಬ್ಯಾಂಕ್ 1902ರಲ್ಲಿ ಭಾರತಕ್ಕೆ ಪ್ರವೇಶಿಸಿತು. 1985ರಿಂದ ಗ್ರಾಹಕ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದೆ. ಮುಂಬೈ, ಪುಣೆ, ಬೆಂಗಳೂರು, ಚೆನ್ನೈ ಮತ್ತು ಗುರುಗ್ರಾಮದಲ್ಲಿ ಇರುವ ತನ್ನ ಕೇಂದ್ರಗಳಿಂದ ಜಾಗತಿಕ ವಾಣಿಜ್ಯ ವಹಿವಾಟುಗಳಿಗೆ ಬೆಂಬಲ ನೀಡುವ ಕೆಲಸವನ್ನು ಮುಂದುವರಿಸಲಿದೆ.

English summary

Citigroup To Exit Consumer Business In India

Citigroup on Thursday said it is closing retail banking operations in 13 countries across Asia, including India, and parts of Europe to concentrate more on wealth management outside the US.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X