ಟ್ರಾಫಿಕ್‌ ಫೈನ್‌ ತೆರವುಗೊಳಿಸುವ ನೆಪದಲ್ಲಿ ವಂಚನೆ: ನಂಬಿ 5.6 ಲಕ್ಷ ಹಣ ಕಳೆದುಕೊಂಡ ಬೆಂಗಳೂರು ನಿವಾಸಿ..!

ಈಗೀಗ ಆನ್‌ಲೈನ್‌ ಸ್ಕ್ಯಾಮ್‌ಗಳ ಹಾವಳಿ ಹೆಚ್ಚಾಗಿದೆ. ಮೊಬೈಲ್‌ ಅಪ್ಲಿಕೇಷನ್‌ಗಳನ್ನು ಡೌನ್‌ಲೋಡ್ ಮಾಡಿಸಿ ಹೇಗೆಲ್ಲ ವಂಚನೆ ಮಾಡುತ್ತಾರೆ ಎಂದರೆ, ಖಾತೆಯಲ್ಲಿರುವ ಪೂರ್ತಿ ಹಣ ಖಾಲಿಯಾಗಿಬಿಡುತ್ತದೆ. ಕೆಲಸ ಕೊಡಿಸುವ ನೆಪದಲ್ಲಿ ವಂಚನೆ ಕೇಳಿದ್ದಾಯ್ತು, ಸಾಲ ಕೊಡಿಸುವ ನೆಪದಲ್ಲೂ ಆಯ್ತು, ಇದರ ಜೊತೆಗೆ ಹಣ ದುಪ್ಪಟ್ಟು ಮಾಡುವ ನೆಪದಲ್ಲಿ, ಸಿನಿಮಾ ಇಂಡಸ್ಟ್ರಿಯಲ್ಲಿ ಚಾನ್ಸ್ ಕೊಡಿಸುವ ನೆಪದಲ್ಲಿ ಹೀಗೆ ಎಲ್ಲಾ ರೀತಿಯಲ್ಲೂ ವಂಚನೆಗಳಾದವು. ಇವುಗಳ ಬಗ್ಗೆ ಜನರಿಗೆ ಮಾಹಿತಿ ಸಿಕ್ಕಿ ಇನ್ನೇನು ತಮ್ಮನ್ನು ತಾವು ಸುರಕ್ಷಿತಗೊಳಿಸಿಕೊಳ್ತಿದ್ದಾರೆ ಎನ್ನುವಷ್ಟರಲ್ಲಿ, ಬೆಂಗಳೂರಿನಲ್ಲಿ ಮತ್ತೊಂದು ರೀತಿಯ ವಂಚನೆ ಬೆಳಕಿಗೆ ಬಂದಿದೆ. ಟ್ರಾಫಿಕ್ ಫೈನ್ ತೆರವುಗೊಳಿಸುವ ನೆಪದಲ್ಲಿ ಈ ವಂಚನೆ ಮಾಡಲಾಗಿದ್ದು ಬ್ಯಾಟರಾಯನಪುರದ 46 ವರ್ಷದ ವ್ಯಕ್ತಿ 5.6 ಲಕ್ಷ ಹಣ ಕಳೆದುಕೊಂಡಿದ್ದಾರೆ.

ತನ್ನ ವಾಹನಕ್ಕೆ ಬಾಕಿಯಿದ್ದ ಟ್ರಾಫಿಕ್ ಚಲನ್‌ಗೊಳಿಸಲು, ವಂಚನೆಕೋರರು ಕಳಿಸಿದ ಅಪ್ಲಿಕೇಷನ್‌ನ ಬೆಂಗಳೂರು ಟ್ರಾಫಿಕ್ ಪೊಲೀಸ್‌ನ ಅಧಿಕೃತ ಅಪ್ಲಿಕೇಷನ್ ಎಂದು ನಂಬಿ, ಅದನ್ನು ಡೌನ್‌ಲೋಡ್ ಮಾಡಿದ್ದಾರೆ. ಬಳಿಕ ಆತ ತನ್ನ ಎರಡು ಕ್ರೆಡಿಟ್ ಕಾರ್ಡ್‌ಗಳಿಂದ 5.6 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಅಂದರೆ ಕಳೆದ ಫೆಬ್ರವರಿ 20ರ ಮಧ್ಯಾಹ್ನ ಒಂದು ಅಜ್ಞಾತ ಮೊಬೈಲ್ ಸಂಖ್ಯೆಯಿಂದ, ಹಣ ಕಳೆದುಕೊಂಡ ವ್ಯಕ್ತಿ ವಾಟ್ಸಾಪ್‌ಗೆ ಮೆಸೇಜ್ ಬರುತ್ತದೆ. ಅದರಲ್ಲಿ ಅವರ ವಾಹನದ ವಿರುದ್ಧ ಟ್ರಾಫಿಕ್ ಚಲನ್ ಜಾರಿಯಾಗಿದೆ ಎಂದು ಉಲ್ಲೇಖವಾಗಿತ್ತು. ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಿಳಿಯಲು, ಲಿಂಕ್ ಕ್ಲಿಕ್ ಮಾಡಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಂತೆ ತಿಳಿಸಿದರು. ಅಂದರೆ ನಿಮ್ಮ ವಾಹನದ ಸಂಖ್ಯೆಗೆ ಟ್ರಾಫಿಕ್ ಟಿಕೆಟ್ APK (No. KA153588159070) ಜಾರಿಯಾಗಿದೆ. CCTV ಕ್ಯಾಮರಾದಲ್ಲಿ ಸಾಕ್ಷ್ಯವನ್ನು ಸೆರೆಹಿಡಿಯಲಾಗಿದೆ. ಈ ಟಿಕೆಟ್ ತಪ್ಪಾಗಿ ಜಾರಿಯಾಗಿದೆ ಎಂದಾದರೆ, ಕೆಳಗಿನ ಲಿಂಕ್ ಮೂಲಕ VAHAN PARIVAHAN ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಎಂದು ಕಳಿಸಿದ್ದರು.

ಟ್ರಾಫಿಕ್ ತೆರವುಗೊಳಿಸುವ ನೆಪದಲ್ಲಿ ಆನ್‌ಲೈನ್ ವಂಚನೆ..!

ಅದರಂತೆ ವಂಚನೆಕೋರರು ಕಳುಹಿಸಿದ ಮೆಸೇಜ್‌ನಲ್ಲಿ ತಮ್ಮ ವಾಹನ ಸಂಖ್ಯೆ ತಾಳೆಯಾಗಿರುವುದನ್ನು ಕಂಡು, ಆ ವ್ಯಕ್ತಿ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದಾರೆ. APK ಫೈಲ್ ಅನ್ನು ತಮ್ಮ ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿದ್ದಾರೆ. ಇದಾಗಿ 24 ಗಂಟೆಗಳ ಒಳಗೆ, ಅವರ ಎರಡು ಕ್ರೆಡಿಟ್ ಕಾರ್ಡ್‌ಗಳಿಂದ ರೂ. 5.6 ಲಕ್ಷ ವಂಚನಾತ್ಮಕವಾಗಿ ಡೆಬಿಟ್ ಮಾಡಲಾಗಿದೆ. ಇದು ಅವರಿಗೆ ತಿಳಿದೇ ಇರಲಿಲ್ಲ. ಬಳಿಕ ತಮ್ಮ ಫೋನ್ ಹ್ಯಾಕ್ ಆಗಿರುವ ಬಗ್ಗೆ ಅನುಮಾನ ಬಂದ ತಕ್ಷಣ ಅವರು, ಫೆಬ್ರವರಿ 22 ರಂದು ಪಶ್ಚಿಮ CEN ಪೊಲೀಸ್ ಠಾಣೆಗೆ ದೂರು ನೀಡಿ ಎಫ್‌ಐಆರ್ ದಾಖಲಿಸಿದ್ದಾರೆ.

ಸದ್ಯ ಈ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು, ಈ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ APK ಫೈಲ್‌ನಲ್ಲಿ ಮಾಲ್‌ವೇರ್ ಇರಬಹುದೆಂದು ಅನುಮಾನವಿದೆ. ಇದರಲ್ಲಿ ರಿಮೋಟ್ ಆಕ್ಸೆಸ್ ಟ್ರೋಜನ್ ಇರಬಹುದು. ಇದರ ಮೂಲಕ ವಂಚಕರು ಕ್ರೆಡಿಟ್ ಕಾರ್ಡ್ ವಿವರಗಳನ್ನು ಹ್ಯಾಕ್ ಮಾಡಿ ಹಣ ಕದಿಯುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಇಂತಹ ಕೃತ್ಯಗಳಿಂದ ವಂಚನೆಗೊಳಗಾಗುವರಿಗೆ ಕಾನೂನು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರು ಟ್ರಾಫಿಕ್ ಪೊಲೀಸರು ವಾಟ್ಸಾಪ್ ಅಥವಾ ಎಸ್‌ಎಂಎಸ್‌ ಮೂಲಕ ಚಲನ್ ಕಳುಹಿಸುವುದಿಲ್ಲ. ಆದ್ದರಿಂದ ಜನತೆ ಎಚ್ಚರದಿಂದ ಇರಬೇಕು. ಮತ್ತು ಗೊತ್ತಿರದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ. ಅಲ್ಲದೇ ವಾಸ್ತವಿಕ ಮಾಹಿತಿಗಾಗಿ ಸದಾ https://btp.gov.in ಅಥವಾ Astram App ಅನ್ನು ಮಾತ್ರ ಬಳಸಿರಿ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+