ಭಾರತೀಯ ಷೇರು ಮಾರುಕಟ್ಟೆಯು ಶುಕ್ರವಾರ ಮಿಶ್ರವಾಗಿದೆ. ಆರಂಭಿಕ ವಹಿವಾಟಿನಿಂದ ವಹಿವಾಟಿನ ಅಂತ್ಯದವರೆಗೂ ಸ್ಟಾಕ್‌ಗಳು ಏರಿಳಿತ ಕಂಡಿದೆ. ಆರಂಭಿಕ ವಹಿವಾಟಿನಲ್ಲಿ 59,538.79 ರಷ್ಟಿದ್ದ ಸೆನ್ಸೆಕ್ಸ್ ನಿನ್ನೆಯ ವಹಿವಾಟಿನ ಅಂತ್ಯಕ್ಕಿಂತ ಕೆಳಕ್ಕೆ ಇಳಿದಿದೆ. ಆದರೆ ನಿಫ್ಟಿ ಮಾತ್ರ ಏರಿಕೆ ಕಂಡಿದೆ. ವಹಿವಾಟಿನ ಮಧ್ಯದಲ್ಲಿ ಸೆನ್ಸೆಕ್ಸ್ 59,781.36ಕ್ಕೆ ಏರಿಕೆಯಾಗಿದ್ದರೆ, 59,412.81ಕ್ಕೆ ಇಳಿಕೆಯಾಗಿದೆ.
ನಿಫ್ಟಿ 17,663.20ರಷ್ಟು ಗರಿಷ್ಠವಾಗಿ ಏರಿಕೆಯಾಗಿದ್ದರೆ, ಕನಿಷ್ಠವಾಗಿ 17,553.956ವರೆಗೆ ಇಳಿಕೆ ಕಂಡಿದೆ. ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ ಏರಿಕೆಯಾಗಿದೆ. ಈ ಹಿಂದಿನ ಸೆಷನ್‌ನಲ್ಲಿ 82.15ರಟ್ಟಿದ್ದ ರೂಪಾಯಿ ಶುಕ್ರವಾರ ವಹಿವಾಟಿನ ಅಂತ್ಯದಲ್ಲಿ 82.09ರಷ್ಟಿದೆ. ಒಟ್ಟಿನಲ್ಲಿ ಷೇರು ಮಾರುಕಟ್ಟೆಯು ಮಿಶ್ರವಾಗಿದೆ.

ಏಪ್ರಿಲ್ 21ರಂದು ವಹಿವಾಟಿನ ಆರಂಭದಲ್ಲಿ ಸೆನ್ಸೆಕ್ಸ್ 74.96 ಪಾಯಿಂಟ್ ಅಥವಾ ಶೇ.0.13ರಷ್ಟು ಏರಿಕೆಯಾಗಿ, 59,707.31ಕ್ಕೆ ತಲುಪಿದೆ. ನಿಫ್ಟಿ 23.20ರಷ್ಟು ಅಥವಾ ಶೇಕಡ 0.13ರಷ್ಟು ಏರಿಕೆಯಾಗಿ 17,647.70ಕ್ಕೆ ತಲುಪಿದೆ. 1,180 ಷೇರುಗಳು ಏರಿಕೆಯಾಗಿದ್ದರೆ, 846 ಷೇರುಗಳು ಇಳಿಕೆಯಾಗಿದೆ. 82 ಷೇರುಗಳು ಸ್ಥಿರವಾಗಿದೆ. ಆರಂಭಿಕವಾಗಿ ಎಚ್‌ಸಿಎಲ್ ಟೆಕ್ನಾಲಜೀಸ್, ಎಚ್‌ಡಿಎಫ್‌ಸಿ ಲೈಫ್, ಯುಪಿಎಲ್, ದಿವೀಸ್ ಲ್ಯಾಬ್ಸ್, ಪವರ್ ಗ್ರಿಡ್ ಕಾರ್ಪ್ ಸ್ಟಾಕ್ ಏರಿಕೆಯಾಗಿದೆ.
ಶುಕ್ರವಾರ, ಏಪ್ರಿಲ್ 20ರಂದು ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ 22.71 ಪಾಯಿಂಟ್ ಅಥವಾ ಶೇ.0.04ರಷ್ಟು ಏರಿಕೆಯಾಗಿ, 59,655.06ಕ್ಕೆ ತಲುಪಿದೆ. ಆದರೆ ನಿಫ್ಟಿ ಲಾಭದೊಂದಿಗೆ ವಹಿವಾಟು ಆರಂಭ ಮಾಡಿದೆ. ನಿಫ್ಟಿ ಶೇಕಡ 0.50ರಷ್ಟು ಇಳಿಕೆಯಾಗಿ 17,624ಕ್ಕೆ ತಲುಪಿದೆ. 1,498 ಷೇರುಗಳು ಏರಿಕೆಯಾಗಿದ್ದರೆ, 1,866 ಷೇರುಗಳು ಇಳಿಕೆಯಾಗಿದೆ. 135 ಷೇರುಗಳು ಸ್ಥಿರವಾಗಿದೆ. ವಹಿವಾಡಿನ ಅಂತ್ಯದಲ್ಲಿ ಟಿಸಿಎಸ್, ಐಟಿಸಿ, ಬ್ರಿಟಾನಿಯಾ ಇಂಡಸ್ಟ್ರೀಸ್, ವಿಪ್ರೋ, ಏಷ್ಯನ್ ಪೇಂಟ್ಸ್ ಸ್ಟಾಕ್‌ಗಳು ಏರಿಕೆಯಾಗಿದೆ.
ನಿರಂತರವಾಗಿ ಕುಸಿಯುತ್ತಿರುವ ಅದಾನಿ ಸ್ಟಾಕ್ ಹೇಗಿದೆ?
ಈ ಸಮಯಕ್ಕೆ ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಶೇಕಡ 2.22ರಷ್ಟು ಇಳಿಕೆಯಾಗಿ 1,802.00 ರೂಪಾಯಿಗೆ ತಲುಪಿದೆ. ಅದಾನಿ ವಿಲ್ಮಾರ್ ಸ್ಟಾಕ್ ಶೇಕಡ 1.86ರಷ್ಟು ಇಳಿಕೆಯಾಗಿ, 403.85 ರೂಪಾಯಿಗೆ ತಲುಪಿದೆ. ಅದಾನಿ ಪೋರ್ಟ್ಸ್ ಶೇಕಡ 0.77ರಷ್ಟು ಕುಸಿದು, 661.00 ರೂಪಾಯಿಗೆ ತಲುಪಿದೆ. ಅಂಬುಜಾ ಸಿಮೆಂಟ್ ಸ್ಟಾಕ್ ಶೇಕಡ 1.59ರಷ್ಟು ಇಳಿಕೆಯಾಗಿದ್ದು, 374.65 ರೂಪಾಯಿಗೆ ತಲುಪಿದೆ.
ಎಸಿಸಿ ಶೇಕಡ 1.05ರಷ್ಟು ಇಳಿದು, 1,719.80 ರೂಪಾಯಿಗೆ ತಲುಪಿದೆ. ಅದಾನಿ ಟ್ರಾನ್ಸ್‌ಮಿಷನ್ ಶೇಕಡ 1.00ರಷ್ಟು ಕುಸಿದು, 1,001.00 ರೂಪಾಯಿಗೆ ತಲುಪಿದೆ. ಅದಾನಿ ಟೋಟಲ್ ಗ್ಯಾಸ್ ಶೇ.1.21ರಷ್ಟು ಇಳಿಕೆಯಾಗಿ 917.00 ರೂಪಾಯಿ ಆಗಿದೆ. ಅದಾನಿ ಗ್ರೀನ್ ಎನರ್ಜಿ ಶೇ.1.84ರಷ್ಟು ಕುಸಿದು, 915.85ಕ್ಕೆ ತಲುಪಿದೆ. ಎನ್‌ಡಿಟಿವಿ ಶೇಕಡ 0.30ರಷ್ಟು ಇಳಿಕೆಯಾಗಿ 183.20 ರೂಪಾಯಿಗೆ ಮತ್ತು ಅದಾನಿ ಪವರ್ ಶೇಕಡ 0.97ರಷ್ಟು ಏರಿಕೆಯಾಗಿ 197.70 ರೂಪಾಯಿಗೆ ತಲುಪಿದೆ.
ಯಾವೆಲ್ಲ ಸ್ಟಾಕ್‌ಗಳು ಏರಿಕೆ, ಇಳಿಕೆ?
ಐಟಿಸಿ, ಟಿಸಿಎಸ್, ವಿಪ್ರೋ, ಏಷ್ಯನ್ ಪೇಂಟ್ಸ್, ಎಚ್‌ಸಿಎಲ್ ಟೆಕ್, ಎಚ್‌ಡಿಎಫ್‌ಸಿ, ಕೋಟಕ್ ಬ್ಯಾಂಕ್, ಬಜಾಜ್ ಫೈನಾನ್ಸ್, ಸನ್‌ಫಾರ್ಮಾ, ರಿಲಯನ್ಸ್, ಪವರ್‌ಗ್ರಿಡ್, ಹಿಂದೂಸ್ತಾನ್ ಯೂನಿಲಿವರ್, ಎಚ್‌ಡಿಎಫ್‌ಸಿ ಬ್ಯಾಂಕ್ ಸ್ಟಾಕ್ ಏರಿಕೆಯಾಗಿದೆ.
ಎನ್‌ಟಿಪಿಸಿ, ನೆಸ್ಲೆ ಇಂಡಿಯಾ, ಟೈಟಾನ್, ಎಸ್‌ಬಿಐ ಇನ್ಶೂರೆನ್ಸ್, ಎಂ&ಎಂ, ಐಸಿಐಸಿಐ ಬ್ಯಾಂಕ್, ಭಾರ್ತಿ ಏರ್‌ಟೆಲ್, ಎಲ್‌ಟಿ, ಆಕ್ಸಿಸ್ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಟಾಟಾ ಮೋಟರ್ಸ್, ಬಜಾಜ್ ಫಿನ್‌ಸರ್ವ್, ಅಲ್ಟ್ರಾಟೆಕ್ ಸಿಮೆಂಟ್, ಟಾಟಾ ಸ್ಟೀಲ್ಸ್, ಮಾರುತಿ, ಟೆಕ್ ಎಂ ಸ್ಟಾಕ್ ಇಳಿಕೆಯಾಗಿದೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications