For Quick Alerts
ALLOW NOTIFICATIONS  
For Daily Alerts

ಷೇರು ಮಾರುಕಟ್ಟೆ ಡೌನ್: ಯಾವೆಲ್ಲ ಸ್ಟಾಕ್‌ಗಳು ಇಳಿಕೆ?

|

ಷೇರುಪೇಟೆಯು ಈ ವಾರದ ಕೊನೆಯ ವಹಿವಾಟಿನ ಅಂತ್ಯದಲ್ಲಿ ನಷ್ಟ ಕಂಡಿದೆ. ಗುರುವಾರ ಆರಂಭಿಕ ವಹಿವಾಟಿನಲ್ಲಿ ಚೇತರಿಕೆ ಕಂಡಿದ್ದ ಸ್ಟಾಕ್ ಮಾರುಕಟ್ಟೆಯು ವಹಿವಾಟಿನ ಕೊನೆಗೆ ಕೆಳಕ್ಕೆ ಕುಸಿದಿತ್ತು. ಆ ಬಳಿಕ ಯಾವುದೇ ಚೇತರಿಕೆ ಕಂಡಿಲ್ಲ. ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ ಹಾಗೂ ವಹಿವಾಟಿನ ಅಂತ್ಯ ಎರಡರಲ್ಲೂ ಸ್ಟಾಕ್ ಮಾರುಕಟ್ಟೆ ನಷ್ಟದೊಂದಿಗೆ ಸಾಗಿದೆ.

 

ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ ಸೂಚ್ಯಂಕಗಳಾದ ನಿಫ್ಟಿ 17,800 ಮಟ್ಟಗಳ ಕೆಳಗೆ ವಹಿವಾಟು ನಡೆಸುತ್ತಿದ್ದರೆ, 100 ಪಾಯಿಂಟ್‌ಗಳಿಗಿಂತಲೂ ಕಡಿಮೆ ಪ್ರಾರಂಭ ಪಡೆದುಕೊಂಡಿದೆ. ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್ 400 ಪಾಯಿಂಟ್‌ಗಳಿಗಿಂತ ಹೆಚ್ಚು ಕುಸಿದು 59,533 ಮಟ್ಟದಲ್ಲಿ ವಹಿವಾಟು ನಡೆಸಿದೆ.

 

ಷೇರುಪೇಟೆ ಆರಂಭಿಕ ವಹಿವಾಟು: ಯಾವ ಷೇರುಗಳು ಕುಸಿತ ಕಂಡಿವೆಷೇರುಪೇಟೆ ಆರಂಭಿಕ ವಹಿವಾಟು: ಯಾವ ಷೇರುಗಳು ಕುಸಿತ ಕಂಡಿವೆ

ವಹಿವಾಟಿನ ಅಂತ್ಯದಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 1,093.22 ಅಂಕ ಅಥವಾ ಶೇಕಡ 1.82ರಷ್ಟು ಕುಸಿದು 58,840.79 ಇಳಿದಿದೆ. ಇನ್ನು ನಿಫ್ಟಿ 346.60 ಅಂಕ ಕುಸಿದು 17,530.80ಕ್ಕೆ ವಹಿವಾಟು ಅಂತ್ಯ ಮಾಡಿದೆ. ಇನ್ನು 952 ಷೇರುಗಳು ಏರಿಕೆಯಾಗಿದ್ದರೆ, 2455 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 100 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿದೆ.

 ಷೇರು ಮಾರುಕಟ್ಟೆ ಡೌನ್: ಯಾವೆಲ್ಲ ಸ್ಟಾಕ್‌ಗಳು ಇಳಿಕೆ?

ಪ್ರಮುಖವಾಗಿ ಐಟಿ ಹಾಗೂ ರಿಯಾಲಿಟಿ ಸೆಕ್ಟರ್‌ಗಳು ಭಾರೀ ಇಳಿಕೆಯನ್ನು ಕಂಡಿದೆ. ಸ್ಟಾಕ್ ಶೇಕಡ 3ರಷ್ಟು ಇಳಿದಿದೆ. ಮಿಡ್‌ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ ಸುಮಾರು ಶೇಕಡ 2.5ರಷ್ಟು ಇಳಿದಿದೆ. ಐಟಿ ಹಾಗೂ ಆಟೋ ಸ್ಟಾಕ್ ಕೂಡಾ ಇಳಿದಿದೆ. ಟೆಕ್ ಮಹೀಂದ್ರಾ, ಇನ್ಫೋಸಿಸ್, ಎಂ&ಎಂ ಸ್ಟಾಕ್ ಭಾರೀ ಇಳಿಕೆಯಾಗಿದೆ.

ಷೇರುಪೇಟೆ ಮತ್ತೆ ಕುಸಿತ: ನಿಫ್ಟಿ ಐಟಿ ಟಾಪ್ ಲೂಸರ್ಷೇರುಪೇಟೆ ಮತ್ತೆ ಕುಸಿತ: ನಿಫ್ಟಿ ಐಟಿ ಟಾಪ್ ಲೂಸರ್

ಯಾವೆಲ್ಲ ಸ್ಟಾಕ್‌ಗಳು ಇಳಿಕೆ?

30 ಷೇರುಗಳ ಪೈಕಿ 2 ಷೇರು ಮಾತ್ರ ಏರಿಕೆಯಾಗಿದೆ. ಇಂಡಸ್‌ಇಂಡ್ ಬ್ಯಾಂಕ್, ಸಿಪ್ಲಾ ಸ್ಟಾಕ್‌ಗಳು ಹೆಚ್ಚಳವಾಗಿದೆ. ಎಸ್‌ಬಿಐ ಇನ್ಶೂರೆನ್ಸ್, ಈಚರ್ ಮೋಟರ್ಸ್, ಎಚ್‌ಡಿಎಫ್‌ಸಿ, ಬಜಾಜ್ ಫೈನಾನ್ಸ್, ಬಜಾಜ್ ಆಟೋ, ಹಿಂಡಾಲ್ಕೊ, ಎಚ್‌ಸಿಎಲ್‌ ಟೆಕ್, ಏಷ್ಯನ್ ಪೇಂಟ್ಸ್, ಡಾ ರೆಡ್ಡೀಸ್, ರಿಲಯನ್ಸ್, ಬ್ರಿಟಾನಿಯಾ, ಟಿಸಿಎಸ್, ಅದಾನಿ ಪೋರ್ಟ್ಸ್, ವಿಪ್ರೋ, ನೆಸ್ಲೆ ಇಂಡಿಯಾ, ಬಿಪಿಸಿಎಲ್‌, ಟಾಟಾ ಮೋಟರ್ಸ್, ಡಾಬರ್, ಎಂ&ಎಂ, ಎಚ್‌ಡಿಎಫ್‌ಸಿ ಲೈಫ್, ಗ್ರಾಸಿಮ್, ಇನ್ಫೋಸಿಸ್, ಹಿರೋ ಮೋಟೊ, ಅಲ್ಟ್ರಾಟೆಕ್ ಸಿಮೆಂಟ್, ಟೆಕ್ ಎಂ, ಟಾಟಾ ಕನ್ಸ್ಯೂಮರ್, ಯುಪಿಎಲ್ ಸ್ಟಾಕ್ ಭಾರೀ ಇಳಿಕೆಯನ್ನು ಕಂಡ ಸ್ಟಾಕ್‌ಗಳು ಆಗಿದೆ.

ಯುಪಿಎಲ್ ಸ್ಟಾಕ್ ಭಾರೀ ಇಳಿಕೆ

ಯುಪಿಎಲ್ ಸ್ಟಾಕ್ ಭಾರೀ ಇಳಿಕೆಯಾದ ಸ್ಟಾಕ್ ಆಗಿದೆ. ಷೇರು ಶೇಕಡ 5.28ರಷ್ಟು ಇಳಿಕೆಯಾಗಿ ರೂಪಾಯಿ 703.40ಕ್ಕೆ ತಲುಪಿದೆ. ಇನ್ನು ಇಂಡಸ್‌ಇಂಡ್ ಬ್ಯಾಂಕ್ ಟಾಪ್ ಸ್ಟಾಕ್ ಆಗಿದೆ. ಶೇಕಡ 2.63ರಷ್ಟು ಏರಿಕೆಯಾಗಿ ರೂಪಾಯಿ 1,227.35ಕ್ಕೆ ತಲುಪಿದೆ.

English summary

Closing Bell: Sensex Crashes 1000 Points, Nifty Settles Below 17,500

Closing Bell: Sensex Crashes 1000 Points, Nifty Settles Below 17,500. Here's Details. Read on.
Story first published: Friday, September 16, 2022, 16:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X