ಬುಧವಾರ ಆರಂಭಿಕ ವಹಿವಾಟಿನಲ್ಲಿ ಕುಸಿತ ಕಂಡಿದ್ದ ಷೇರು ಮಾರುಕಟ್ಟೆ ಇಂದು ವಹಿವಾಟಿನ ಅಂತ್ಯದ ವೇಳೆಗೂ ನಷ್ಟವನ್ನು ಕಂಡಿದೆ. ಸತತ ನಾಲ್ಕು ಸೆಷನ್‌ಗಳಲ್ಲಿ ಲಾಭವನ್ನು ಕಂಡಿದ್ದ ಷೇರು ಮಾರುಕಟ್ಟೆ ಬುಧವಾರ ವಹಿವಾಟಿನ ಅಂತ್ಯದಲ್ಲಿ ನಷ್ಟದಲ್ಲಿ ವಹಿವಾಟು ಅಂತ್ಯ ಮಾಡಿದೆ.
ಏಷ್ಯನ್ ಷೇರುಗಳು ಕೆಳಕ್ಕೆ ಇಳಿದಿದೆ. ಬ್ರೆಂಟ್ ಕಚ್ಚಾ ತೈಲ ಬೆಲೆಯು ಬ್ಯಾರೆಲ್‌ಗೆ 118 ಡಾಲರ್‌ಗೆ ಏರಿಕೆ ಕಂಡಿದೆ. ಇದು ಹೂಡಿಕೆದಾರರ ಮೇಲೆ ಪ್ರಭಾವ ಬೀರಿದ್ದು, ಷೇರು ಮಾರುಕಟ್ಟೆ ಕುಸಿದಿದೆ. ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ನಷ್ಟವನ್ನು ಕಂಡಿದ್ದ ಷೇರು ಮಾರುಕಟ್ಟೆ ವಹಿವಾಟಿನ ಅಂತ್ಯದಲ್ಲಿ ಲಾಭ ಕಂಡಿದೆ. ಆದರೆ ಬುಧವಾರ ವಹಿವಾಟಿನ ಅಂತ್ಯದಲ್ಲೂ ನಷ್ಟ ಕಂಡಿದೆ.
30 ಷೇರುಗಳು ಬಿಎಸ್‌ಇ ಸೆನ್ಸೆಕ್ 150 ಅಂಕ ಅಥವಾ ಶೇಕಡ 0.28ರಷ್ಟು ಕುಸಿತ ಕಂಡಿದ್ದು 53,027ಕ್ಕೆ ತಲುಪಿದೆ. ಇನ್ನು ಎನ್‌ಎಸ್‌ಇ ನಿಫ್ಟಿ 51 ಅಂಕ ಅಥವಾ ಶೇಕಡ 0.32ರಷ್ಟು ಕೆಳಕ್ಕೆ ಇಳಿದು 15,799ರಲ್ಲಿ ಸ್ಥಿರವಾಗಿದೆ.
ನಿಫ್ಟಿ ಮಿಡ್ ಕ್ಯಾಪ್ 100 ಶೇಕಡ 0.44 ಕುಸಿತ ಕಂಡಿದ್ದು, ಸ್ಮಾಲ್ ಕ್ಯಾಪ್ ಶೇಕಡ 0.56ರಷ್ಟು ಕೆಳಕ್ಕೆ ಇಳಿದಿದೆ. ನಿಫ್ಟಿ ಐಟಿ, ನಿಪ್ಟಿ ಎಫ್‌ಎಂಸಿಜಿ ಕ್ರಮವಾಗಿ ಶೇಕಡ 1.29 ಹಾಗೂ ಶೇಕಡ 1.27ರಷ್ಟು ಕೆಳಕ್ಕೆ ಇಳಿದಿದೆ. ಈ ನಡುವೆ ನಿಫ್ಟಿ ಆಯಿಲ್ ಹಾಗೂ ಗ್ಯಾಸ್ ಶೇಕಡ 1.02ರಷ್ಟು ಹೆಚ್ಚಾಗಿದೆ.
ಎಚ್‌ಡಿಎಫ್‌ಸಿ ಲೈಫ್ ಟಾಪ್ ನಿಫ್ಟಿ ಲೂಸರ್
ಎಚ್‌ಡಿಎಫ್‌ಸಿ ಲೈಫ್ ಟಾಪ್ ನಿಫ್ಟಿ ಲೂಸರ್ ಆಗಿದೆ. ಎಚ್‌ಡಿಎಫ್‌ಸಿ ಲೈಫ್ ಶೇಕಡ 4.67ರಷ್ಟು ಕೆಳಕ್ಕೆ ಕುಸಿದು, ರೂಪಾಯಿ 539.50ಕ್ಕೆ ತಲುಪಿದೆ. ಈ ನಡುವೆ ಹಿಂದೂಸ್ತಾನ್ ಯೂನಿಲಿವರ್, ಅಪೋಲೋ ಹಾಸ್ಪಿಟಲ್, ಆಕ್ಸಿಸ್ ಬ್ಯಾಂಕ್, ಟಾಟಾ ಕನ್ಸ್ಯೂಮರ್ ಪ್ರೊಡೆಕ್ಟ್ ಕೂಡಾ ನಷ್ಟವನ್ನು ಕಂಡಿದೆ. ಬಿಎಸ್‌ಇಯಲ್ಲಿ 1,518 ಷೇರುಗಳು ಲಾಭವನ್ನು ಕಂಡಿದ್ದರೆ 1,784 ಷೇರುಗಳು ನಷ್ಟವನ್ನು ಕಂಡಿದೆ.
ಯಾವ ಷೇರಿಗೆ ನಷ್ಟ, ಯಾವ ಷೇರಿಗೆ ಲಾಭ?
30 ಷೇರುಗಳು ಬಿಎಸ್‌ಇ ಸೂಚ್ಯಂಕದಲ್ಲಿ ಎಚ್‌ಯುಎಲ್, ಆಕ್ಸಿಸ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ವಿಪ್ರೋ, ಎಚ್‌ಸಿಎಲ್ ಟೆಕ್, ಟೈಟಾನ್, ಕೋಟಕ್ ಮಹೀಂದ್ರ ಬ್ಯಾಂಕ್, ಬಜಾಜ್ ಫಿನಾನ್ಸ್, ಏಷ್ಯನ್ ಪೇಂಟ್ಸ್, ಎಸ್‌ಬಿಐ, ಇನ್ಫೋಸಿಸ್, ಐಸಿಐಸಿಐ ಟಾಪ್ ಲೂಸರ್ ಸ್ಟಾಕ್‌ಗಳು ಆಗಿದೆ. ಈ ನಡುವೆ ಎನ್‌ಟಿಪಿಸಿ, ರಿಲಯನ್ಸ್, ಸನ್ ಫಾರ್ಮಾ, ಅಲ್ಟ್ರಾಟೆಕ್ ಸಿಮೆಂಟ್, ಐಟಿಸಿ, ಪವರ್ ಗ್ರಿಡ್, ಭಾರ್ತಿ ಏರ್‌ಟೆಲ್, ನೆಸ್ಟ್ಲೆ ಇಂಡಿಯಾ, ಟಾಟಾ ಸ್ಟೀಲ್, ಮಾರುತಿ ಲಾಭವನ್ನು ಕಂಡಿದೆ.
ಎಲ್‌ಐಸಿ ಷೇರುಗಳು ಏರಿಕೆ
ಈ ನಡುವೆ ದೇಶದ ಅತಿದೊಡ್ಡ ವಿಮಾ ಸಂಸ್ಥೆ ಮತ್ತು ಅತಿದೊಡ್ಡ ದೇಶೀಯ ಹಣಕಾಸು ಹೂಡಿಕೆದಾರರಾದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಶೇಕಡ ಶೇಕಡ 2.34ರಷ್ಟು ಏರಿಕೆಯಾಗಿ ರೂಪಾಯಿ 678.90ಕ್ಕೆ ತಲುಪಿದೆ. ಬುಧವಾರ ಆರಂಭಿಕ ವಹಿವಾಟಿನಲ್ಲಿ ಎಲ್‌ಐಸಿ ಷೇರುಗಳು ಶೇ 0.67 ರಷ್ಟು ಕುಸಿದು ರೂಪಾಯಿ 658.90ಕ್ಕೆ ವಹಿವಾಟು ಆಗಿದೆ. ಮಂಗಳವಾರ ಸೆನ್ಸೆಕ್ಸ್ 16 ಪಾಯಿಂಟ್ ಅಥವಾ ಶೇಕಡಾ 0.03 ರಷ್ಟು ಏರಿಕೆ ಕಂಡು 53,177 ಕ್ಕೆ ತಲುಪಿದ್ದರೆ, ನಿಫ್ಟಿ 18 ಪಾಯಿಂಟ್ ಅಥವಾ 0.11 ರಷ್ಟು ಏರಿಕೆ ಕಂಡು 15,850 ಕ್ಕೆ ಸ್ಥಿರವಾಯಿತು.


Click it and Unblock the Notifications