ಷೇರು ಮಾರುಕಟ್ಟೆಯು ಸತತ ನಾಲ್ಕನೇ ಸೆಷನ್‌ನಲ್ಲಿ ನಷ್ಟವನ್ನು ಕಂಡಿದೆ. ಬಿಎಸ್‌ಇ ಸೆನ್ಸೆಕ್ಸ 152.18 ಅಂಕ ಅಥವಾ ಶೇಕಡ 0.29 ಕುಸಿದು, 52,541.39ಕ್ಕೆ ತಲುಪಿದೆ. ಇನ್ನು ನಿಫ್ಟಿ ಶೇಕಡ 0.25 ಕುಸಿದು, 15,692.15ಕ್ಕೆ ಇಳಿಕೆ ಕಂಡಿದೆ.
ಇನ್ನು ಎನ್‌ಟಿಪಿಸಿ ಭಾರೀ ನಷ್ಟವನ್ನು ಕಂಡಿದೆ. ಎನ್‌ಟಿಪಿಸಿ ಷೇರು ಶೇಕಡ 2.02ರಷ್ಟು ಕುಸಿತವಾಗಿದೆ. ಈ ನಡುವೆ ಇನ್ಫೋಸಿಸಿ, ರಿಲಯನ್ಸ್ ಇಂಡಸ್ಟ್ರೀಸ್, ವಿಪ್ರೋ, ಎಚ್‌ಯುಎಲ್, ಟೆಕ್ ಮಹೀಂದ್ರಾ, ಪವರ್ ಗ್ರಿಡ್, ಐಟಿಸಿ ಷೇರುಗಳು ಕೂಡಾ ಕುಸಿದಿದೆ.
ಈ ಸಂದರ್ಭದಲ್ಲೇ ಬಜಾಜ್ ಫಿನ್‌ಸರ್ವ್, ಬಜಾಜ್ ಫಿನಾನ್ಸ್, ಟಾಟಾ ಸ್ಟೀಲ್ಸ್, ಲಾರ್ಸೆನ್ & ಟಬ್ರೋ, ಎಸ್‌ಬಿಐ, ಏಷ್ಯನ್ ಪೇಂಟ್ಸ್, ಎಂ&ಎಂ ಶೇಕಡ 4.24ರಷ್ಟು ಹೆಚ್ಚಳವಾಗಿ, ಲಾಭವನ್ನು ಕಂಡಿದೆ. ಟೆಲಿಕಾಂ ಸ್ಟಾಕ್ ಸ್ಥಿರತೆಯನ್ನು ಕಾಯ್ದುಕೊಂಡಿದೆ.

ಆರಂಭಿಕ ವಹಿವಾಟಿನಲ್ಲಿಯೇ ಷೇರು ಪೇಟೆ ನಷ್ಟದೊಂದಿಗೆ ವಹಿವಾಟು ಆರಂಭ ಮಾಡಿದೆ. ಈಗ ವಹಿವಾಟಿನ ಅಂತ್ಯದಲ್ಲೂ ನಷ್ಟವನ್ನು ಕಂಡಿದೆ. ಪ್ರಸ್ತುತ ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಆರ್‌ಬಿಐ ರೆಪೋ ದರ ಏರಿಕೆ ಮಾಡಿರುವುದು ಹೂಡಿಕೆದಾರರ ಮೇಲೆ ಪ್ರಭಾವ ಬೀರಿದೆ.
ಯಾವ ಷೇರಿಗೆ ಲಾಭ, ಯಾವುದಕ್ಕೆ ನಷ್ಟ?
ಬಜಾಜ್ ಟ್ವೀನ್ಸ್, ಟಾಟಾ ಸ್ಟೀಲ್ಸ್, ಎಸ್‌ಬಿಐ, ಐಸಿಐಸಿಐ ಬ್ಯಾಂಕ್ ಲಾಭವನ್ನು ಕಂಡರೆ, ಎನ್‌ಟಿಪಿಸಿ, ಎಚ್‌ಯುಎಲ್, ಇನ್ಫೋಸಿಸ್, ವಿಪ್ರೋ, ಆರ್‌ಐಎಲ್ ಭಾರೀ ನಷ್ಟವನ್ನು ಕಂಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ತಜ್ಞರು, "ಹೂಡಿಕೆದಾರರು ಲಾಭದಾಯಕ ಹೂಡಿಕೆಯಿಂದ ಕೂಡಾ ಹಿಂದೆ ಸರಿಯುತ್ತಿದ್ದಾರೆ. ತೈಲ ಬೆಲೆಯು ಈಗಾಗಲೇ ಏರಿಕೆಯಾಗಿದೆ. ಈ ವೇಳೆ ಎನರ್ಜಿ ಸೆಕ್ಟರ್ ಸ್ಟಾಕ್‌ಗಳು ಡೌನ್ ಆಗಿದೆ," ಎಂದು ತಿಳಿಸಿದ್ದಾರೆ.
ಬುಧವಾರ ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 78 ಅಂಕ ಕುಸಿತ ಕಂಡು, 52,615.04ರಲ್ಲಿ ವಹಿವಾಟು ಆರಂಭ ಮಾಡಿದರೆ, ನಿಫ್ಟಿ ಐದು ಅಂಕ ಕುಸಿದು 15,725ರಲ್ಲಿ ವಹಿವಾಟು ಆರಂಭಿಸಿದೆ. ಈ ವೇಳೆಯೇ ಹೂಡಿಕೆದಾರರ ಚಿತ್ತವು ಹಿಂಡ್‌ಮೋಟರ್ಸ್, ಟಾಟಾ ಸ್ಟೀಲ್ಸ್, ರಿಲಾಯನ್ಸ್, ಅದಾನಿ ಪವರ್, ಎಚ್‌ಸಿಎಲ್ ಟೆಕ್ನಾಲಜೀಸ್ ಮೇಲೆ ಇದೆ.


Click it and Unblock the Notifications