ಮಂಗಳವಾರ ವಹಿವಾಟಿನ ಅಂತ್ಯದ ವೇಳೆಗೆ ಷೇರು ಮಾರುಕಟ್ಟೆಯು ನಷ್ಟದೊಂದಿಗೆ ವಹಿವಾಟು ಅಂತ್ಯ ಮಾಡಿದೆ. ಸತತ ಮೂರನೇ ಸೆಷನ್‌ನಲ್ಲಿ ಷೇರು ಮಾರುಕಟ್ಟೆಯು ನಷ್ಟವನ್ನು ಕಂಡಿದೆ. ಮಂಗಳವಾರ ಆರಂಭಿಕ ವಹಿವಾಟಿನಲ್ಲೇ ಷೇರು ಮಾರುಕಟ್ಟೆಯು ನಷ್ಟವನ್ನು ಕಂಡಿದೆ.
ಬಿಎಸ್‌ಇ ಸೆನ್ಸೆಕ್ಸ್ 153.13 ಅಂಕ ಕುಸಿತ ಕಂಡು 52,693.57ಕ್ಕೆ ವಹಿವಾಟು ಅಂತ್ಯ ಮಾಡಿದೆ. ನಿಫ್ಟಿ 30 ಅಂಕ ಕುಸಿದು, 15,741.95ಕ್ಕೆ ವಹಿವಾಟು ಅಂತ್ಯ ಮಾಡಿದೆ. ಟಾಪ್ ಗೇನರ್ ಆಗಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಮಂಗಳವಾರದ ವಹಿವಾಟಿನಲ್ಲಿ ನಷ್ಟವನ್ನು ಅನುಭವಿಸಿದೆ.
ಇಂಡಸ್‌ಇಂಡ್ ಬ್ಯಾಂಕ್, ಟೆಕ್ ಮಹೀಂದ್ರಾ, ರಿಲಯನ್ಸ್ ಇಂಡಸ್ಟ್ರೀಸ್, ಮಾರುತಿ, ಹಿಂದೂಸ್ತಾನ್ ಯೂನಿಲಿವರ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಏಷ್ಯನ್ ಬ್ಯಾಂಕ್ ಭಾರೀ ನಷ್ಟವನ್ನು ಕಂಡಿದೆ. ಈ ಸಂದರ್ಭದಲ್ಲಿ ಎನ್‌ಟಿಪಿಸಿ, ಅಲ್ಟ್ರಾಕೆಟ್ ಸಿಮೆಂಟ್, ಭಾರ್ತಿ ಏರ್‌ಟೆಲ್, ಎಂ&ಎಂ ಲಾಭವನ್ನು ಕಂಡಿದೆ.

ಉಕ್ರೇನ್ ಮೇಲೆ ರಷ್ಯಾವು ಫೆಬ್ರವರಿಯಲ್ಲಿ ದಾಳಿ ನಡೆಸಿದ ಬಳಿಕ ಜಾಗತಿಕವಾಗಿ ಕಚ್ಚಾ ತೈಲ ಬೆಲೆ, ಇತರೆ ವಸ್ತುಗಳ ಬೆಲೆಯು ಹೆಚ್ಚಳವಾಗಿದೆ. ವಿಶ್ವದ ಹಲವಾರು ಭಾಗಗಳಲ್ಲಿ ಹಣದುಬ್ಬರವಿದೆ. ಕೇಂದ್ರ ಬ್ಯಾಂಕುಗಳು ಹಣದುಬ್ಬರ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತಾಗಿದೆ.
ಯಾವುದಕ್ಕೆ ಅತೀ ಹೆಚ್ಚು ಲಾಭ, ಯಾವುದಕ್ಕೆ ಅತೀ ಹೆಚ್ಚು ನಷ್ಟ?
ಎನ್‌ಟಿಪಿಸಿ ಅತೀ ಅಧಿಕ ಲಾಭವನ್ನು ಪಡೆದ ಷೇರಾಗಿದೆ. ಇದರ ಷೇರುಗಳು ಶೇಕಡ 1.68ರಷ್ಟು ಹೆಚ್ಚಳವಾಗಿದೆ. ಈ ಸಂದರ್ಭದಲ್ಲೇ ಬಜಾಜ್ ಆಟೋ ನಷ್ಟವನ್ನು ಕಂಡಿದೆ. ಶೇಕಡ 5.14ರಷ್ಟು ಇಳಿಕೆ ಕಂಡಿದೆ. ಈ ಸಂದರ್ಭದಲ್ಲೇ ಯುಎಸ್ ಟಾಲರ್ ಎದುರು ರೂಪಾಯಿ ಕೊಂಚ ಚೇತರಿಕೆ ಕಂಡಿದೆ.
ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಷೇರು ಮಾರುಕಟ್ಟೆಯು ಭಾರೀ ಕುಸಿತವನ್ನು ಕಂಡಿದೆ. ಬಿಎಸ್‌ಇ ಸೆನ್ಸೆಕ್ಸ್ ಸುಮಾರು ನೂರು ಅಂಕ ಕುಸಿದು 52,757ರಲ್ಲಿ ವಹಿವಾಟು ಆರಂಭಿಸಿದೆ. ನಿಫ್ಟಿ ಕೂಡಾ ಇಳಿದಿದೆ. ಸುಮಾರು 30 ಅಂಕ ಕುಸಿತ ಕಂಡಿದೆ.


Click it and Unblock the Notifications