ಪೇರುಮಾರುಕಟ್ಟೆಯು ಗುರುವಾರ ಆರಂಭಿಕ ವಹಿವಾಟಿನಲ್ಲಿ ಏರಿಕೆಯಾಗಿದ್ದರೆ, ವಹಿವಾಟಿನ ಅಂತ್ಯದ ವೇಳೆಗೆ ಕುಸಿತವಾಗಿದೆ. ಗುರುವಾರ ವಹಿವಾಟಿನ ಅಂತ್ಯದ ವೇಳೆಗೆ ನಿಫ್ಟಿ, ಸೆನ್ಸೆಕ್ಸ್ ಎರಡು ಡೌನ್ ಆಗಿದೆ. ಪ್ರಮುಖವಾಗಿ ಅದಾನಿ ಪೋರ್ಟ್ಸ್ ಸ್ಟಾಕ್ ಭಾರೀ ಇಳಿಕೆಯಾಗಿದೆ.
ಗುರುವಾರ ವಹಿವಾಟಿನ ಆರಂಭದಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 252.88 ಅಂಕ ಅಥವಾ ಶೇಕಡ 0.43ರಷ್ಟು ಏರಿದ್ದು 59338.31ಕ್ಕೆ ತಲುಪಿತ್ತು. ನಿಫ್ಟಿ 69.90 ಅಂಕ ಅಥವಾ ಶೇಕಡ 0.40ರಷ್ಟು ಏರಿಕೆ ಕಂಡು 17674.90ಕ್ಕೆ ವಹಿವಾಟು ಆರಂಭ ಮಾಡಿತ್ತು. 1551 ಷೇರುಗಳು ಏರಿಕೆಯನ್ನು ಕಂಡಿದ್ದರೆ, 380 ಷೇರುಗಳು ಕುಸಿತವಾಗಿದೆ. 93 ಷೇರುಗಳು ಸ್ಥಿರವಾಗಿತ್ತು.
ವಹಿವಾಟಿನ ಕೊನೆಯಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 310.71 ಅಂಕ ಅಥವಾ ಶೇಕಡ 0.53ರಷ್ಟು ಕುಸಿತ ಕಂಡು 58,774.72ಕ್ಕೆ ತಲುಪಿದೆ. ನಿಫ್ಟಿ 82.50 ಅಂಕ ಅಥವಾ ಶೇಕಡ 0.47ರಷ್ಟು ಇಳಿಕೆಯಾಗಿ 17,522.50ಕ್ಕೆ ವಹಿವಾಟು ಅಂತ್ಯ ಮಾಡಿದೆ. 1865 ಷೇರುಗಳು ಏರಿಕೆಯನ್ನು ಕಂಡಿದ್ದರೆ, 1462 ಷೇರುಗಳು ಕುಸಿತವಾಗಿದೆ. 132 ಷೇರುಗಳು ಸ್ಥಿರವಾಗಿದೆ. ಒಟ್ಟಿನಲ್ಲಿ ಷೇರು ಪೇಟೆಯಲ್ಲಿ ಯಾವೆಲ್ಲ ಷೇರುಗಳು ಹೆಚ್ಚಳವಾಗಿದೆ. ಯಾವೆಲ್ಲ ಸ್ಟಾಕಗಳು ಕುಸಿತವಾಗಿದೆ. ಯಾವುದು ಟಾಪ್ ಸೆಕ್ಟರ್ ಎಂಬ ಮಾಹಿತಿ ಇಲ್ಲಿದೆ ಮುಂದೆ....

ಅದಾನಿ ಪೋರ್ಟ್ಸ್ ಸ್ಟಾಕ್ ಭಾರೀ ಕುಸಿತ
ಷೇರು ಮಾರುಕಟ್ಟೆಯಲ್ಲಿ ಗುರುವಾರ ವಹಿವಾಟಿನ ಅಂತ್ಯದಲ್ಲಿ ಕರಡಿ ಕುಣಿತ ಕಂಡು ಬಂದಿದೆ. ಅದಾನಿ ಪೋರ್ಟ್ಸ್ ಸ್ಟಾಕ್ ಭಾರೀ ಇಳಿಕೆಯಾದ ಷೇರು ಆಗಿದೆ. ಅದಾನಿ ಪೋರ್ಟ್ಸ್ ಸ್ಟಾಕ್ ಶೇಕಡ 2.43ರಷ್ಟು ಇಳಿಕೆಯಾಗಿ, ರೂಪಾಯಿ 816ಕ್ಕೆ ಇಳಿದಿದೆ. ಇನ್ನು ಶ್ರೀ ಸಿಮೆಂಟ್ ಸ್ಟಾಕ್ ಬೆಸ್ಟ್ ಷೇರು ಆಗಿದೆ. ಶ್ರೀ ಸಿಮೆಂಟ್ ಷೇರು ಸುಮಾರು ಶೇಕಡ 1.71ರಷ್ಟು ಹೆಚ್ಚಳವಾಗಿ ರೂಪಾಯಿ 21,712.60ಕ್ಕೆ ಸ್ಥಿರವಾಗಿದೆ. ಇನ್ನು ನಿಫ್ಟಿ ಪಿಎಸ್‌ಯು ಬ್ಯಾಂಕ್ ಬೆಸ್ಟ್ ಸೆಕ್ಟರ್ ಆಗಿದೆ. ನಿಫ್ಟಿ ಐಟಿ ತೀರಾ ಇಳಿಕೆಯಾಗಿದೆ.
ಯಾವೆಲ್ಲ ಸ್ಟಾಕ್ ಏರಿಕೆ, ಇಳಿಕೆ?
ಮಾರುತಿ, ಎಸ್‌ಬಿಐ ಇನ್ಶೂರೆನ್ಸ್, ಡಾ ರೆಡ್ಡೀಸ್, ಟೈಟಾನ್, ವಿಪ್ರೋ ಸ್ಟಾಕ್‌ಗಳು ಏರಿಕೆಯಾಗಿದೆ. ಟೆಕ್ ಮಹೀಂದ್ರಾ, ಭಾರ್ತಿ ಏರ್‌ಟೆಲ್, ಐಸಿಐಸಿಐ ಬ್ಯಾಂಕ್, ರಿಲಯನ್ಸ್, ಟಾಟಾ ಸ್ಟೀಲ್ಸ್, ಕೋಟಕ್ ಮಹೀಂದ್ರಾ, ಎಂ&ಎಂ, ಎಚ್‌ಸಿಎಲ್ ಟೆಕ್, ಹಿಂದೂಸ್ತಾನ್ ಯೂನಿಲಿವರ್, ಐಟಿಸಿ, ಏಷ್ಯನ್ ಪೇಂಟ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಸನ್‌ಫಾರ್ಮಾ, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಫಿನ್‌ಸರ್ವ್, ನೆಸ್ಲೆ ಇಂಡಿಯಾ, ಎಚ್‌ಡಿಎಫ್‌ಸಿ, ಎಲ್‌ಟಿ, ಎನ್‌ಟಿಪಿಸಿ, ಪವರ್ ಗ್ರಿಡ್, ಆಕ್ಸಿಸ್ ಬ್ಯಾಂಕ್, ಟಿಸಿಎಸ್, ಇನ್ಫೋಸಿಸ್, ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್ ಸ್ಟಾಕ್‌ಗಳು ಇಳಿಕೆಯಾಗಿದೆ.


Click it and Unblock the Notifications