For Quick Alerts
ALLOW NOTIFICATIONS  
For Daily Alerts

Market Close: ಯಾವೆಲ್ಲ ಸ್ಟಾಕ್ಸ್ ಏರಿಕೆ, ಇಳಿಕೆ?

|

ಆರಂಭಿಕ ವಹಿವಾಟಿನಲ್ಲಿ ಕೊಂಚ ಚೇತರಿಕೆ ಕಂಡಿದ್ದ ಷೇರು ಮಾರುಕಟ್ಟೆ ವಹಿವಾಟಿನ ಅಂತ್ಯದಲ್ಲಿ ಕುಸಿದಿದೆ. ಆದರೆ ಭಾರಿ ಪ್ರಮಾಣದಲ್ಲಿ ಷೇರುಪೇಟೆ ಕುಸಿತ ಕಂಡಿಲ್ಲ. ಕೆಲವೇ ಅಂಕಗಳಷ್ಟು ಇಳಿದಿದೆ. ಕಳೆದ ಐದು ಸೆಷನ್‌ಗಳಲ್ಲಿ ಷೇರು ಪೇಟೆಯು ಪಾತಾಳಕ್ಕೆ ಇಳಿದಿದೆ. ಮಂಗಳವಾರ ವಹಿವಾಟಿನ ಆರಂಭದಲ್ಲಿ ಕೊಂಚ ಏರಿಕೆಯಾಗಿದೆ.

30 ಷೇರುಗಳ ಬಿಎಸ್‌ಇ ಸೂಚ್ಯಂಕ 37.70 ಅಂಕ ಅಥವಾ ಶೇಕಡ 0.07ರಷ್ಟು ಕುಸಿದು 57,107.52ಕ್ಕೆ ವಹಿವಾಟು ಅಂತ್ಯ ಮಾಡಿದೆ. ಇನ್ನು ನಿಫ್ಟಿ 8.90 ಅಂಕ ಅಥವಾ ಶೇಕಡ 0.05ರಷ್ಟು ಕುಸಿದು 17,007.40ಕ್ಕೆ ವಹಿವಾಟು ಅಂತ್ಯ ಮಾಡಿದೆ. ಇನ್ನು 1836 ಷೇರುಗಳು ಏರಿಕೆಯಾಗಿದ್ದರೆ, 1483 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 125 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿತ್ತು.

ಷೇರುಪೇಟೆ ಮತ್ತೆ ಪತನ: ಐಟಿ ಹೊರತಾಗಿ ಎಲ್ಲ ಸೆಕ್ಟರ್ ಡೌನ್ಷೇರುಪೇಟೆ ಮತ್ತೆ ಪತನ: ಐಟಿ ಹೊರತಾಗಿ ಎಲ್ಲ ಸೆಕ್ಟರ್ ಡೌನ್

ಆರಂಭಿಕ ವಹಿವಾಟಿನಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 461.82 ಅಂಕ ಏರಿಕೆಯಾಗಿ 57,607.04ಕ್ಕೆ ತಲುಪಿದೆ. ಇನ್ನು ನಿಫ್ಟಿ 144.15 ಅಂಕ ಹೆಚ್ಚಳವಾಗಿ 17,160.45ಕ್ಕೆ ವಹಿವಾಟು ಆರಂಭ ಮಾಡಿದೆ. ಐಟಿಸಿ, ಪವರ್ ಗ್ರಿಡ್, ಹಿಂದೂಸ್ತಾನ್ ಯೂನಿಲಿವರ್, ವಿಪ್ರೋ, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ನೆಸ್ಲೆ, ಎನ್‌ಟಿಪಿಸಿ ಸ್ಟಾಕ್ ಆರಂಭಿಕವಾಗಿ ಏರಿಕೆಯಾಗಿದೆ.

Market Close: ಯಾವೆಲ್ಲ ಸ್ಟಾಕ್ಸ್ ಏರಿಕೆ, ಇಳಿಕೆ?

ಯಾವ ಸ್ಟಾಕ್ ಏರಿಕೆ, ಇಳಿಕೆ?

ಮಂಗಳವಾರ ವಹಿವಾಟಿನ ಅಂತ್ಯದ ವೇಳೆಗೆ ಸಿಪ್ಲಾ, ಟಾಟಾ ಕನ್ಸ್ಯೂಮರ್ಸ್ ಪ್ರೊಡಕ್ಟ್, ಬಿಪಿಸಿಎಲ್, ಪವರ್‌ ಗ್ರಿಡ್ ಕಾರ್ಪೋರೇಷನ್, ಶ್ರೀ ಸಿಮೆಂಟ್ ಸ್ಟಾಕ್ ಏರಿಕೆಯಾಗಿದೆ. ಇನ್ನು ಹಿರೋ ಮೋಟೋಕಾರ್ಪ್, ಅದಾನಿ ಪೋರ್ಟ್ಸ್, ಟೈಟಾನ್ ಕಂಪನಿ, ಟಾಟಾ ಸ್ಟೀಲ್ಸ್, ಕೋಟಕ್ ಮಹೀಂದ್ರ ಬ್ಯಾಂಕ್ ಸ್ಟಾಕ್ ಇಳಿಕೆಯಾಗಿದೆ.

ಇನ್ನು 30 ಷೇರುಗಳ ಸೆನ್ಸೆಕ್ಸ್‌ನಲ್ಲಿ 30ರ ಪೈಕಿ 18 ಸ್ಟಾಕ್‌ಗಳು ಏರಿಕೆಯನ್ನು ಕಂಡಿದೆ. ಪ್ರಮುಖವಾಗಿ ಇಂಡಸ್‌ಇಂಡ್ ಶೇಕಡ 2ರಷ್ಟು ಹೆಚ್ಚಾಗಿದ್ದರೆ ಟಾಟಾ ಸ್ಟೀಲ್ಸ್ ಭಾರಿ ಇಳಿಕೆ ಕಂಡ ಸ್ಟಾಕ್ ಆಗಿದೆ.

ಟಾಪ್ 10 ಕಂಪನಿಗಳ ಪೈಕಿ 7 ಕಂಪನಿಗಳಿಗೆ 1.34 ಟ್ರಿಲಿಯನ್ ನಷ್ಟ!ಟಾಪ್ 10 ಕಂಪನಿಗಳ ಪೈಕಿ 7 ಕಂಪನಿಗಳಿಗೆ 1.34 ಟ್ರಿಲಿಯನ್ ನಷ್ಟ!

ಇಂಡಸ್‌ಇಂಡ್ ಬ್ಯಾಂಕ್, ಪವರ್ ಗ್ರಿಡ್, ಎಚ್‌ಸಿಎಲ್ ಟೆಕ್, ಇನ್ಫೋಸಿಸ್, ಡಾ ರೆಡ್ಡೀಸ್, ವಿಪ್ರೋ, ನೆಸ್ಲೆ ಇಂಡಿಯಾ, ಏಷ್ಯನ್ ಪೇಂಟ್ಸ್, ಟಿಸಿಎಸ್, ಐಟಿಸಿ, ರಿಲಯನ್ಸ್, ಭಾರ್ತಿ ಏರ್‌ಟೆಲ್, ಬಜಾಜ್ ಫಿನ್‌ಸರ್ವ್, ಅಲ್ಟ್ರಾಟೆಕ್ ಸಿಮೆಂಟ್, ಹಿಂದೂಸ್ತಾನ್ ಯೂನಿಲಿವರ್, ಎಂ&ಎಂ, ಎನ್‌ಟಿಪಿಸಿ, ಬಜಾಜ್ ಫೈನಾನ್ಸ್ ಸ್ಟಾಕ್ ಏರಿಕೆಯಾದ ಸ್ಟಾಕ್ಸ್‌ಗಳು ಆಗಿದೆ. ಸನ್‌ಫಾರ್ಮಾ, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಲ್‌ಟಿ, ಮಾರುತಿ, ಟೆಕ್‌ ಎಂ, ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿ, ಎಸ್‌ಬಿಐ ಇನ್ಶೂರೆನ್ಸ್, ಕೋಟಕ್ ಬ್ಯಾಂಕ್, ಟೈಟಾನ್, ಟಾಟಾ ಸ್ಟೀಲ್ಸ್ ಸ್ಟಾಕ್ ಇಳಿಕೆಯಾಗಿದೆ.

English summary

Closing Bell: Sensex Crashes 37 Points, Nifty Settles Below 17,000

Closing Bell: Sensex Crashes 37 Points, Nifty Settles Below 17,000. Here's Details. Read on.
Story first published: Tuesday, September 27, 2022, 16:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X