For Quick Alerts
ALLOW NOTIFICATIONS  
For Daily Alerts

Closing bell: ಸೆನ್ಸೆಕ್ಸ್, ನಿಫ್ಟಿ ಕುಸಿತ: ಲೋಹದ ಷೇರಿಗೆ ಭಾರೀ ನಷ್ಟ

|

ಲೋಹದ ಷೇರುಗಳಲ್ಲಿನ ಭಾರೀ ನಷ್ಟದಿಂದ ವಹಿವಾಟಿನ ಅಂತ್ಯದ ವೇಳೆಗೆ ಸೆನ್ಸೆಕ್ಸ್, ನಿಫ್ಟಿ ಕುಸಿತ ಕಂಡಿದೆ. ಒಟ್ಟಾರೆಯಾಗಿ ಸೋಮವಾರ ಷೇರು ಮಾರುಕಟ್ಟೆಯಲ್ಲಿ ಲಾಭದಲ್ಲಿ ಏರಿಳಿತ ಕಂಡು ಬಂದಿದೆ.

ಕಬ್ಬಿಣದ ಅದಿರು ಮತ್ತು ಗೋಲಿಗಳಂತಹ ಉಕ್ಕಿನ ತಯಾರಿಕೆಯ ಕಚ್ಚಾ ವಸ್ತುಗಳ ಮೇಲೆ ಸರ್ಕಾರವು ಭಾರಿ ರಫ್ತು ಸುಂಕವನ್ನು ವಿಧಿಸಿದೆ. ಕಬ್ಬಿಣದ ಅದಿರುಗಳ ರಫ್ತಿನ ಮೇಲಿನ ತೆರಿಗೆಯನ್ನು ಶೇ.30ರಿಂದ ಶೇ.50ಕ್ಕೆ ಹೆಚ್ಚಿಸಲಾಗಿದೆ. ಕಬ್ಬಿಣದ ಉಂಡೆಗಳ ಮೇಲೆ ಶೇ.45ರಷ್ಟು ಸುಂಕ ವಿಧಿಸಲಾಗಿದೆ.

 ಸೆನ್ಸೆಕ್ಸ್, ನಿಫ್ಟಿ ಜಿಗಿತ: ಆಟೋಮೊಬೈಲ್ ಷೇರು ಏರಿಕೆ ಸೆನ್ಸೆಕ್ಸ್, ನಿಫ್ಟಿ ಜಿಗಿತ: ಆಟೋಮೊಬೈಲ್ ಷೇರು ಏರಿಕೆ

30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 38 ಪಾಯಿಂಟ್‌ಗಳು ಅಥವಾ ಶೇಕಡಾ 0.07 ರಷ್ಟು ಕುಸಿದು 54,289 ಕ್ಕೆ ತಲುಪಿತು. ಎನ್‌ಎಸ್‌ಇ ನಿಫ್ಟಿ 51 ಪಾಯಿಂಟ್ ಅಥವಾ 0.32 ರಷ್ಟು ಕುಸಿದು 16,215 ಕ್ಕೆ ವಹಿವಾಟು ಅಂತ್ಯ ಮಾಡಿದೆ.

 Closing bell:ಸೆನ್ಸೆಕ್ಸ್, ನಿಫ್ಟಿ ಕುಸಿತ: ಲೋಹದ ಷೇರಿಗೆ ನಷ್ಟ

ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 0.35 ರಷ್ಟು ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 0.80 ರಷ್ಟು ಕುಸಿದಿದ್ದರಿಂದ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ನಷ್ಟವನ್ನು ಕಂಡಿದೆ. ನಿಫ್ಟಿ ಮೆಟಲ್ ಶೇ 8.14 ರಷ್ಟು ಕುಸಿಯುವ ಮೂಲಕ ನಷ್ಟ ಕಂಡಿದೆ. ಆಟೋಮೊಬೈಲ್ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿನ ಲಾಭ ಕಂಡಿದೆ.

ಜೆಎಸ್‌ಡಬ್ಲ್ಯೂ ಸ್ಟೀಲ್ ನಿಫ್ಟಿಯು ಭಾರೀ ನಷ್ಟ ಕಂಡಿದೆ. ಸ್ಟಾಕ್ 13.21 ಶೇಕಡಾ ಅಂದರೆ 547.75 ರೂಪಾಯಿಗೆ ಕುಸಿದಿದೆ. ಟಾಟಾ ಸ್ಟೀಲ್, ದಿವಿಸ್ ಲ್ಯಾಬ್, ಒಎನ್‌ಜಿಸಿ ಮತ್ತು ಹಿಂಡಾಲ್ಕೊ ಕೂಡ ಹಿಂದುಳಿದಿವೆ.

ಯಾವ ಷೇರು ಟಾಪ್, ಯಾವ ಷೇರು ಲೀಸ್ಟ್?

ಬಿಎಸ್‌ಇಯಲ್ಲಿ 1,937 ಷೇರುಗಳು ಕುಸಿತ ಕಂಡರೆ, 1,452 ಷೇರುಗಳು ಲಾಭ ಗಳಿಸಿದೆ. 30-ಷೇರು ಬಿಎಸ್‌ಸಿ ಸೂಚ್ಯಂಕದಲ್ಲಿ, ಟಾಟಾ ಸ್ಟೀಲ್, ಅಲ್ಟ್ರಾಟೆಕ್ ಸಿಮೆಂಟ್, ಐಟಿಸಿ, ಪವರ್‌ಗ್ರಿಡ್, ಎಚ್‌ಡಿಎಫ್‌ಸಿ ಟ್ವಿನ್ಸ್ (ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್), ಎಚ್‌ಸಿಎಲ್ ಟೆಕ್, ರಿಲಯನ್ಸ್ ಇಂಡಸ್ಟ್ರೀಸ್, ಎಸ್‌ಬಿಐ ಮತ್ತು ಭಾರ್ತಿ ಏರ್‌ಟೆಲ್ ಭಾರೀ ನಷ್ಟವನ್ನು ಕಂಡಿದೆ.

ಈ ನಡುವೆ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಇಂದು ಶೇ 1.14 ರಷ್ಟು ಕುಸಿದು ರೂಪಾಯಿ 816.85 ಕ್ಕೆ ತಲುಪಿದೆ. ಎಲ್‌ಐಸಿ ಕಳೆದ ವಾರ ಷೇರು ಪೇಟೆಗೆ ಎಂಟ್ರಿ ನೀಡಿದ್ದು, ಮೊದಲ ವಹಿವಾಟಿನಲ್ಲೇ ನಿಗದಿತ ಬೆಲೆ ರೂಪಾಯಿ 949ಕ್ಕಿಂತ 8.62 ಶೇಕಡಾ ರಿಯಾಯಿತಿಯಲ್ಲಿ ಪಟ್ಟಿಯಾಗಿದೆ.

ಎಂ & ಎಂ, ಮಾರುತಿ, ಹಿಂದೂಸ್ತಾನ್ ಯೂನಿಲಿವರ್, ಏಷ್ಯನ್ ಪೇಂಟ್ಸ್, ಎಲ್ & ಟಿ, ಕೋಟಕ್ ಮಹೀಂದ್ರಾ ಬ್ಯಾಂಕ್, ವಿಪ್ರೋ, ಟೆಕ್ ಮಹೀಂದ್ರಾ, ಇನ್ಫೋಸಿಸ್, ಟಿಸಿಎಸ್, ನೆಸ್ಲೆ ಇಂಡಿಯಾ, ಸನ್ ಫಾರ್ಮಾ, ಇಂಡಸ್‌ಇಂಡ್ ಬ್ಯಾಂಕ್, ಟೈಟಾನ್, ಡಾ ರೆಡ್ಡೀಸ್ ಮತ್ತು ಎನ್‌ಟಿಪಿಸಿ ಷೇರುಗಳು ಲಾಭವನ್ನು ಕಂಡಿದೆ.

English summary

Closing Bell: Sensex Crashes 38 Points, Nifty Settles Below 16,215

Closing Bell: Sensex Crashes 38 Points, Nifty Settles Below 16,215.
Story first published: Monday, May 23, 2022, 18:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X