ಷೇರು ಮಾರುಕಟ್ಟೆಯು ಗುರುವಾರ ವಹಿವಾಟಿನ ಆರಂಭದಲ್ಲಿ ಏರಿಕೆಯಾಗಿತ್ತು. ಆದರೆ, ವಹಿವಾಟಿನ ಅಂತ್ಯದಲ್ಲಿ ಕೆಳಕ್ಕೆ ಕುಸಿದಿದೆ. ಬುಧವಾರ ನಷ್ಟದೊಂದಿಗೆ ಷೇರುಪೇಟೆಯು ವಹಿವಾಟಿನ ಅಂತ್ಯ ಮಾಡಿತ್ತು. ಆದರೆ ಗುರುವಾರ ವಹಿವಾಟಿನ ಆರಂಭದಲ್ಲಿ ಚೇತರಿಕೆ ಕಂಡಿದೆ. ಮತ್ತೆ ದಿನದ ವಹಿವಾಟಿನ ಕೊನೆಗೆ ಷೇರುಪೇಟೆ ಪಾತಾಳಕ್ಕೆ ಕುಸಿದಿದೆ.
ಗುರುವಾರ ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆ ಚೇತರಿಕೆ ಕಂಡಿದೆ. ಸೆನ್ಸೆಕ್ಸ್ ಸುಮಾರು 300 ಅಂಕಗಳ ಏರಿಕೆ, ನಿಫ್ಟಿ 18,100 ಹತ್ತಿರಕ್ಕೆ ಬಂದಿದೆ. ಬ್ಯಾಂಕ್ ನಿಫ್ಟಿ ದಾಖಲೆಯ ಎತ್ತರಕ್ಕೆ ತಲುಪಿತ್ತು. ಬುಧವಾರ ವಹಿವಾಟಿನ ಅಂತ್ಯದಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 224 ಅಂಕ ಅಥವಾ ಶೇಕಡ 0.37ರಷ್ಟು ಕುಸಿದು 60,346.97 ಕ್ಕೂ ಕೆಳಕ್ಕೆ ಇಳಿದಿದೆ. ಇನ್ನು ನಿಫ್ಟಿ 66 ಅಂಕ ಅಥವಾ ಶೇಕಡ 0.37ರಷ್ಟು ಕುಸಿದು 18,003.75ಕ್ಕೆ ವಹಿವಾಟು ಅಂತ್ಯ ಮಾಡಿದೆ.
30 ಷೇರುಗಳ ಬಿಎಸ್‌ಇ ಸೂಚ್ಯಂಕ 412.96 ಅಂಕ ಅಥವಾ ಶೇಕಡ 0.68ರಷ್ಟು ಕುಸಿದು 59,934 ಇಳಿದಿದೆ. ಇನ್ನು ನಿಫ್ಟಿ 126.40 ಅಂಕ ಅಥವಾ ಶೇಕಡ 0.70ರಷ್ಟು ಕುಸಿದು 17,877.40ಕ್ಕೆ ವಹಿವಾಟು ಅಂತ್ಯ ಮಾಡಿದೆ. ಇನ್ನು 1648 ಷೇರುಗಳು ಏರಿಕೆಯಾಗಿದ್ದರೆ, 1754 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 113 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿದೆ. ಇಂದಿನ ಷೇರು ಮಾರುಕಟ್ಟೆ ಬೆಳವಣಿಗೆಯ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ನಿಫ್ಟಿ ಐಟಿ ಟಾಪ್ ಲೂಸರ್
ಇನ್ನು ನಿಫ್ಟಿಯಲ್ಲಿ ನಿಫ್ಟಿ ಐಟಿ ಟಾಪ್ ಲೂಸರ್ ಆಗಿದೆ. ಇನ್ಫೋಸಿಸ್ ಹಾಗೂ ಟೆಕ್ ಮಹೀಂದ್ರಾ ಸ್ಟಾಕ್ ಶೇಕಡ 3 ರಷ್ಟು ಕೆಳಕ್ಕೆ ಇಳಿದಿದೆ. ಈ ನಡುವೆ ಆಟೋ ಸೆಕ್ಟರ್ ಪಾಸಿಟಿವ್ ಆಗಿದೆ. ಮಾರುತಿ ಸುಜುಕಿ ಸ್ಟಾಕ್ ಶೇಕಡ 3.2ರಷ್ಟು ಹೆಚ್ಚಳವಾಗಿದೆ. ಈಚರ್ ಮೋರ್ಟರ್ಸ್ ಸ್ಟಾಕ್ ಶೇಕಡ 2.7 ರಷ್ಟು ಏರಿದೆ. ಈ ಮೂಲಕ 1 ಟ್ರಿಲಿಯನ್ ಮಾರುಕಟ್ಟೆ ಮೌಲ್ಯ ಹೊಂದಿರುವ ಸಂಸ್ಥೆಗಳ ಪಟ್ಟಿಗೆ ಈಚರ್ ಮೋಟರ್ಸ್ ಸೇರ್ಪಡೆಯಾಗಿದೆ. ಫಾರ್ಮಾ ಹಾಗೂ ರಿಯಾಲಿಟಿ ಸ್ಟಾಕ್‌ಗಳು ಕೂಡಾ ಶೇಕಡ ಒಂದಕ್ಕಿಂತ ಅಧಿಕ ಕೆಳಕ್ಕೆ ಕುಸಿದಿದೆ.
ಗೇನರ್, ಲೂಸರ್ ಸ್ಟಾಕ್ ಯಾವುದು?
ಮಾರುತಿ ಸುಜುಕಿ ಟಾಪ್ ಗೇನರ್ ಆಗಿದೆ. ಸ್ಟಾಕ್ ಶೇಕಡ 2.70ರಷ್ಟು ಹೆಚ್ಚಳವಾಗಿ ರೂಪಾಯಿ 9,209.75ಕ್ಕೆ ತಲುಪಿದೆ. ಇನ್ನು ಹಿಂಡಾಲ್ಕೊ ಸ್ಟಾಕ್ ಶೇಕಡ 3.98ರಷ್ಟು ಕೆಳಕ್ಕೆ ಕುಸಿದು ರೂಪಾಯಿ 424.40ಕ್ಕೆ ಇಳಿದಿದೆ. ನಿಫ್ಟಿ ಎನರ್ಜಿ ಶೇಕಡ 0.78ರಷ್ಟು ಏರುವ ಮೂಲಕ ಬೆಸ್ಟ್ ಸೆಕ್ಟರ್ ಆಗಿ ಉಳಿದಿದೆ. ನಿಫ್ಟಿ ಐಟಿ ಭಾರಿ ನಷ್ಟ ಕಂಡ ಸೆಕ್ಟರ್ ಆಗಿದೆ.
ಯಾವೆಲ್ಲ ಸ್ಟಾಕ್ ಏರಿಕೆ, ಇಳಿಕೆ?
30 ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ ಕೇವಲ 7 ಸ್ಟಾಕ್‌ಗಳು ಮಾತ್ರ ಏರಿಕೆಯಾಗಿದೆ. ಮಾರುತಿ, ಪವರ್‌ಗ್ರಿಡ್, ಎನ್‌ಟಿಪಿಸಿ, ಎಚ್‌ಡಿಎಫ್‌ಸಿ, ಭಾರ್ತಿ ಏರ್‌ಟೆಲ್, ಎಸ್‌ಬಿಐ ಇನ್ಶೂರೆನ್ಸ್, ಎಲ್‌ಟಿ ಸ್ಟಾಕ್ ಏರಿಕೆಯನ್ನು ಕಂಡ 7 ಸ್ಟಾಕ್‌ಗಳು ಆಗಿದೆ. ಉಳಿದಂತೆ ಎಂ&ಎಂ, ಐಸಿಐಸಿಐ ಬ್ಯಾಂಕ್, ವಿಪ್ರೊ, ಹಿಂದೂಸ್ತಾನ್ ಯೂನಿಲಿವರ್, ಟಿಸಿಎಸ್, ಐಟಿಸಿ, ನೆಸ್ಲೆ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ರಿಲಯನ್ಸ್, ಕೋಟಕ್ ಬ್ಯಾಂಕ್, ಡಾ ರೆಡ್ಡೀಸ್, ಸನ್ ಫಾರ್ಮಾ, ಏಷ್ಯನ್ ಪೇಂಟ್ಸ್, ಬಜಾಜ್ ಫೈನಾನ್ಸ್, ಟೈಟಾನ್, ಎಚ್‌ಸಿಎಲ್ ಟೆಕ್, ಅಲ್ಟ್ರಾಟೆಕ್ ಸಿಮೆಂಟ್, ಆಕ್ಸಿಸ್ ಬ್ಯಾಂಕ್, ಟಾಟಾ ಸ್ಟೀಲ್ಸ್, ಬಜಾಜ್ ಫೈನಾನ್ಸ್, ಇಂಡಸ್‌ಇಂಡ್ ಬ್ಯಾಂಕ್, ಇನ್ಫೋಸಿಸ್, ಟೆಕ್ ಎಂ ಸ್ಟಾಕ್ ಭಾರೀ ಇಳಿಕೆಯಾಗಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications