ಆಟೋಮೊಬೈಲ್ ಮತ್ತು ಬ್ಯಾಂಕಿಂಗ್ ಷೇರುಗಳಲ್ಲಿನ ನಷ್ಟ, ತಂತ್ರಜ್ಞಾನ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ನಲ್ಲಿನ ಲಾಭ ಸರಿದೂಗಿದ ನಂತರ ಕೊನೆಯದಾಗಿ ಷೇರು ಮಾರುಕಟ್ಟೆ ಕೊಂಚ ಇಳಿದು ನಷ್ಟದೊಂದಿಗೆ ವಹಿವಾಟು ಅಂತ್ಯ ಮಾಡಿದೆ.
ಇಂದು ಆರಂಭಿಕ ವಹಿವಾಟಿನಲ್ಲಿ ಲಾಭ ಕಂಡುಬಂದಿತ್ತು. ಆದರೆ ವಹಿವಾಟಿನ ಅಂತ್ಯದ ವೇಳೆಗೆ ನಷ್ಟವಾಗಿದೆ. 30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಇಂದು 49 ಪಾಯಿಂಟ್‌ಗಳು ಅಥವಾ ಶೇಕಡಾ 0.09 ರಷ್ಟು ಕುಸಿದು 55,769 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 44 ಪಾಯಿಂಟ್ ಅಥವಾ 0.26 ರಷ್ಟು ಕುಸಿದು 16,584 ಕ್ಕೆ ಸ್ಥಿರವಾಯಿತು.
ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 1.64 ರಷ್ಟು ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 0.86 ರಷ್ಟು ಕುಸಿದಿದೆ. ನಿಫ್ಟಿ ಆಟೋ, ನಿಫ್ಟಿ ಕನ್ಸ್ಯೂಮರ್ ಡ್ಯೂರಬಲ್ಸ್ ಮತ್ತು ನಿಫ್ಟಿ ಬ್ಯಾಂಕ್ ಕ್ರಮವಾಗಿ ಶೇಕಡಾ 1.82, 1.47 ಮತ್ತು ಶೇಕಡಾ 0.95 ರಷ್ಟು ಕುಸಿತ ಕಂಡಿದೆ.

ಗ್ರಾಸಿಮ್ ಇಂಡಸ್ಟ್ರೀಸ್ ಟಾಪ್ ಲೂಸರ್
ಗ್ರಾಸಿಮ್ ಇಂಡಸ್ಟ್ರೀಸ್ ನಿಫ್ಟಿಯಲ್ಲಿ ಟಾಪ್ ಲೂಸರ್ ಆಗಿದ್ದು, ಷೇರುಗಳು ಶೇಕಡಾ 6.53 ರಷ್ಟು ಕುಸಿದು ರೂಪಾಯಿ 1,339 ಕ್ಕೆ ತಲುಪಿದೆ. ಅಲ್ಟ್ರಾಟೆಕ್ ಸಿಮೆಂಟ್, ಶ್ರೀ ಸಿಮೆಂಟ್, ಹೀರೋ ಮೋಟೋಕಾರ್ಪ್ ಮತ್ತು ಮಾರುತಿ ಕೂಡಾ ನಷ್ಟವನ್ನು ಅನುಭವಿಸಿದೆ.
1,379 ಷೇರುಗಳು ಲಾಭ ಕಂಡಿದ್ದರೆ, ಬಿಎಸ್‌ಇಯಲ್ಲಿ 1,954 ಷೇರುಗಳು ನಷ್ಟ ಕಂಡಿದೆ. ಅಲ್ಟ್ರಾಟೆಕ್ ಸಿಮೆಂಟ್, ಮಾರುತಿ, ಎನ್‌ಟಿಪಿಸಿ, ಆಕ್ಸಿಸ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಇಂಡಸ್‌ಇಂಡ್ ಬ್ಯಾಂಕ್, ಎಂ & ಎಂ, ಭಾರ್ತಿ ಏರ್‌ಟೆಲ್, ಟಾಟಾ ಸ್ಟೀಲ್, ನೆಸ್ಲೆ ಇಂಡಿಯಾ, ಎಸ್‌ಬಿಐ, ಐಸಿಐಸಿಐ ಬ್ಯಾಂಕ್ ಮತ್ತು ಟೈಟಾನ್ ನಷ್ಟವನ್ನು ಕಂಡಿದೆ.
ದೇಶದ ಅತಿದೊಡ್ಡ ವಿಮಾದಾರ ಮತ್ತು ಅತಿದೊಡ್ಡ ದೇಶೀಯ ಹಣಕಾಸು ಹೂಡಿಕೆದಾರ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಶೇಕಡಾ 0.69 ರಷ್ಟು ಕುಸಿದು ರೂಪಾಯಿ 800.25 ಕ್ಕೆ ಸ್ಥಿರವಾಯಿತು. ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್, ಎಲ್ & ಟಿ, ಎಚ್‌ಸಿಎಲ್ ಟೆಕ್, ಸನ್ ಫಾರ್ಮಾ, ಟಿಸಿಎಸ್, ಹಿಂದೂಸ್ತಾನ್ ಯೂನಿಲಿವರ್, ವಿಪ್ರೋ, ಟೆಕ್ ಮಹೀಂದ್ರಾ, ಪವರ್‌ಗ್ರಿಡ್ ಮತ್ತು ಡಾ ರೆಡ್ಡೀಸ್ ಲಾಭವನ್ನು ಕಂಡಿದೆ.


Click it and Unblock the Notifications