ಸತತ ಆರು ಸೆಷನ್‌ಗಳಿಂದ ಏರಿಕೆಯನ್ನು ಕಂಡಿದ್ದ ಷೇರು ಮಾರುಕಟ್ಟೆಯು ಗುರುವಾರ ವಹಿವಾಟಿನ ಅಂತ್ಯದಲ್ಲಿ ಕುಸಿದಿದೆ. ಗುರುವಾರ ವಹಿವಾಟಿನ ಆರಂಭದಲ್ಲಿ ಷೇರು ಮಾರುಕಟ್ಟೆಯು ಏರಿಕೆಯನ್ನು ದಾಖಲಿಸಿತ್ತು. ಆದರೆ ವಹಿವಾಟಿನ ಅಂತ್ಯದಲ್ಲಿ ಕೆಳಕ್ಕೆ ಇಳಿದಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ ಮಾತ್ರ ಏರಿಕೆಯನ್ನು ಕಂಡಿದೆ.
ಗುರುವಾರ ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕದಲ್ಲಿ 264.56 ಅಂಕ ಏರಿಕೆಯಾಗಿ 58,615.09 ತಲುಪಿ ವಹಿವಾಟು ಆರಂಭಿದ್ದು ಎನ್‌ಎಸ್‌ಇ ನಿಫ್ಟಿ ಶೇಕಡ 0.45ರಷ್ಟು ಹೆಚ್ಚಾಗಿ 17,465.65ಕ್ಕೆ ತಲುಪಿತ್ತು. ಆದರೆ ವಹಿವಾಟಿನ ಕೊನೆಯಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಕೊಂಚ ಕುಸಿತ ದಾಖಲಿಸಿದೆ.
ಸೆನ್ಸೆಕ್ಸ್ 51.73 ಅಂಕ ಅಥವಾ ಶೇಕಡ 0.09ರಷ್ಟು ಕುಸಿದು 58,298.80ಕ್ಕೆ ತಲುಪಿದೆ. ಈ ಸಂದರ್ಭದಲ್ಲೇ ನಿಫ್ಟಿ ಶೇಕಡ 0.04ರಷ್ಟು ಅಥವಾ 6.20 ಅಂಕ ಕುಸಿದು 17,382ಕ್ಕೆ ವಹಿವಾಟು ಕೊನೆ ಮಾಡಿದೆ. ಷೇರು ಮಾರುಕಟ್ಟೆಯಲ್ಲಿ 1515 ಷೇರುಗಳು ಏರಿಕೆಯಾಗಿದ್ದು, 1735 ಷೇರುಗಳು ಕುಸಿತವಾಗಿದೆ. ಈ ನಡುವೆ 141 ಷೇರುಗಳು ಸ್ಥಿರವಾಗಿದೆ. ಗುರುವಾರ ವಹಿವಾಟಿನಲ್ಲಿ ಯಾವೆಲ್ಲಾ ಷೇರುಗಳು ಏರಿಕೆಯಾಗಿದೆ, ಯಾವುದು ಕುಸಿತವಾಗಿದೆ, ಯಾವ ಷೇರು ಟಾಪ್ ಲೂಸರ್, ಯಾವ ಷೇರು ಭಾರೀ ಲಾಭ ಗಳಿಸಿದೆ ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ.....
ಎನ್‌ಟಿಪಿಸಿ ಷೇರು ಭಾರೀ ಇಳಿಕೆ
ಷೇರು ಮಾರುಕಟ್ಟೆಯು ಗುರುವಾರ ಕುಸಿದಿದ್ದು, ಎನ್‌ಟಿಪಿಸಿ ಸ್ಟಾಕ್ ಭಾರೀ ಕುಸಿತ ಕಂಡಿದೆ. ಎನ್‌ಟಿಪಿಸಿ ಷೇರು 4.95 ಅಂಕ ಅಥವಾ ಶೇಕಡ 3.10ರಷ್ಟು ಕುಸಿತವಾಗಿ ರೂಪಾಯಿ 154.70ಕ್ಕೆ ತಲುಪಿದೆ. ಈ ಸಂದರ್ಭದಲ್ಲೇ ಸಿಪ್ಲಾ ಟಾಪ್ ಗೇನರ್ ಆಗಿದೆ. ಸಿಪ್ಲಾ ಸ್ಟಾಕ್ ಶೇಕಡ 3.23ರಷ್ಟು ಅಥವಾ 32.65 ಅಂಕ ಏರಿಕೆಯಾಗಿ ರೂಪಾಯಿ 1,044.50ಕ್ಕೆ ಸ್ಥಿರವಾಗಿದೆ. ಇನ್ನು ನಿಫ್ಟಿ ಫಾರ್ಮಾ ಉತ್ತಮ ಸೆಕ್ಟರ್ ಆಗಿದ್ದರೆ, ನಿಫ್ಟಿ ಪಿಎಸ್‌ಯು ಬ್ಯಾಂಕ್ ಭಾರೀ ಕುಸಿತ ಕಂಡಿದೆ. ಇನ್ನು ಗುರುವಾರ ಆರಂಭಿಕ ವಹಿವಾಟಿನಲ್ಲಿ ಷೇರು ಪೇಟೆಯು ಏರಿಕೆ ಕಂಡಿದೆ. ಹಿಂಡಾಲ್ಕೊ ಟಾಪ್ ಸ್ಟಾಕ್ ಆಗಿತ್ತು. ಹಿಂಡಾಲ್ಕೊ ಷೇರುಗಳು ಶೇಕಡ 3.62ರಷ್ಟು ಏರಿಕೆಯಾಗಿ ರೂಪಾಯಿ 429.25ಕ್ಕೆ ತಲುಪಿತ್ತು. ಇನ್ನು ಟಾಟಾ ಕನ್ಸ್ಯೂಮರ್ ಪ್ರೋಡೆಕ್ಟ್ಸ್ ಟಾಪ್ ಲೂಸರ್ ಆಗಿತ್ತು. ಸ್ಟಾಕ್ ಶೇಕಡ 2.83ರಷ್ಟು ಕುಸಿತವಾಗಿ ರೂಪಾಯಿ 789.75ಕ್ಕೆ ತಲುಪಿತ್ತು.
ಯಾವೆಲ್ಲಾ ಷೇರುಗಳು ಏರಿಕೆ?
ಸಿಪ್ಲಾ, ಸನ್ ಫಾರ್ಮಾ, ನೆಸ್ಲೆ ಇಂಡಿಯಾ, ಇನ್ಫೋಸಿಸ್, ಅಪೋಲೋ ಹಾಸ್ಟಿಟಲ್ ನಿಫ್ಟಿಯಲ್ಲಿ ಟಾಪ್ ಗೇನರ್‌ಗಳಾಗಿದೆ. ಇನ್ನು ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಸನ್‌ಫಾರ್ಮಾ, ನೆಸ್ಲೆ ಇಂಡಿಯಾ, ಇನ್ಫೋಸಿಸಸ್, ಡಾ ರೆಡ್ಡೀಸ್, ಎಂ&ಎಂ, ಟಾಟಾ ಸ್ಟೀಲ್ಸ್, ವಿಪ್ರೋ, ಐಟಿಸಿ, ಟಿಸಿಎಸ್, ಏಷ್ಯನ್ ಪೇಂಟ್ಸ್, ಟೈಟಾನ್, ಟೆಕ್ ಮಹೀಂದ್ರಾ, ಭಾರ್ತಿ ಏರ್‌ಟೆಲ್, ಮಾರುತಿ, ಬಜಾಜ್ ಫೈನಾನ್ಸ್, ಎಚ್‌ಸಿಎಲ್ ಟೆಕ್ ಲಾಭವನ್ನು ಗಳಿಸಿದ ಅಥವಾ ಏರಿಕೆಯನ್ನು ಕಂಡ ಷೇರುಗಳು ಆಗಿದೆ. ಆರಂಭಿಕ ವಹಿವಾಟಿನಲ್ಲಿಯೂ ಇನ್ಫೋಸಿಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಸ್ಟಾಕ್ ಏರಿಕೆಯಾಗಿದೆ.
ಯಾವೆಲ್ಲಾ ಷೇರುಗಳು ಇಳಿಕೆ
ಸೆನ್ಸೆಕ್ಸ್‌ನಲ್ಲಿ ಅಲ್ಟ್ರಾಟೆಕ್ ಸಿಮೆಂಟ್, ಹಿಂದೂಸ್ತಾನ್ ಯೂನಿಲಿವರ್, ಎಚ್‌ಡಿಎಫ್‌ಸಿ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಐಸಿಐಸಿಐ ಬ್ಯಾಂಕ್, ಎಲ್‌ಟಿ, ಎಚ್‌ಡಿಎಫ್‌ಸಿ, ಇಂಡಸ್‌ಇಂಡ್ ಬ್ಯಾಂಕ್, ಪವರ್ ಗ್ರಿಡ್, ಕೋಟಕ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಆಕ್ಸಿಸ್ ಬ್ಯಾಂಕ್, ಎನ್‌ಟಿಪಿಸಿ ಸ್ಟಾಕ್‌ಗಳು ಇಳಿಕೆಯನ್ನು ಕಂಡಿದೆ. ನಿಫ್ಟಿ ಸೂಚ್ಯಂಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಎಸ್‌ಬಿಐ, ಎನ್‌ಟಿಪಿಸಿ, ಟಾಟಾ ಕನ್ಸ್ಯೂಮರ್ ಪ್ರೊಡೆಕ್ಟ್ಸ್, ಕೋಲ್ ಇಂಡಿಯಾ ಸ್ಟಾಕ್‌ಗಳು ಕುಸಿತವನ್ನು ಕಂಡಿದೆ. ಆರಂಭಿಕ ವಹಿವಾಟಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಎಸ್‌ಬಿಐ ಸ್ಟಾಕ್ ಇಳಿಕೆಯಾಗಿತ್ತು.


Click it and Unblock the Notifications