ಸತತ ಮೂರನೇ ಸೆಷನ್‌ನಲ್ಲಿ ಷೇರು ಮಾರುಕಟ್ಟೆಯು ನಷ್ಟದೊಂದಿಗೆ ವಹಿವಾಟನ್ನು ಅಂತ್ಯ ಮಾಡಿದೆ. ಮುಖ್ಯವಾಗಿ ತಾಂತ್ರಿಕ ಸ್ಟಾಕ್‌ಗಳು ಭಾರೀ ನಷ್ಟ ಅನುಭವಿಸಿದೆ. ಹಣದುಬ್ಬರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಿಂದಾಗಿ ಆರ್‌ಬಿಐ ರೆಪೋ ದರ ಏರಿಕೆ ಮಾಡುವ ನಿರೀಕ್ಷೆ ಇದೆ. ಈ ನಡುವೆ ಷೇರು ಮಾರುಕಟ್ಟೆಯು ನಿರಂತರವಾಗಿ ಪಾತಾಳಕ್ಕೆ ಇಳಿಯುತ್ತಿದೆ.
ಬಿಎಸ್‌ಸಿ ಸೆನ್ಸೆಕ್ಸ್ 568 ಅಂಕ ಅಥವಾ ಶೇಕಡ 1.02 ಇಳಿಕೆ ಕಂಡು 55,107ಕ್ಕೆ ತಲುಪಿದೆ. ಎನ್‌ಎಸ್‌ಸಿ ನಿಫ್ಟಿ 153 ಅಂಕ ಅಥವಾ ಶೇಕಡ 0.92 ಕುಸಿದು 16,416ಕ್ಕೆ ವಹಿವಾಟು ಅಂತ್ಯ ಮಾಡಿದೆ. ಇನ್ನು ಮಿಡ್, ಸ್ಮಾಲ್ ಕ್ಯಾಪ್ ಷೇರುಗಳು ಕ್ರಮವಾಗಿ ಶೇಕಡ 0.67, ಶೇಕಡ 0.59 ಕುಸಿದಿದೆ.
ಸೆಕ್ಟರ್ ಗೇಜ್‌ನಲ್ಲಿ 15ರಲ್ಲಿ 13 ನಷ್ಟವನ್ನು ಕಂಡಿದೆ. ಮುಖ್ಯವಾಗಿ ನಿಫ್ಟಿಯಲ್ಲಿ ಕನ್ಸ್ಯೂಮರ್ ಡ್ಯೂರೆಬಲ್ಸ್, ನಿಫ್ಟಿ ಎಫ್‌ಎಂಸಿಜಿ ಮತ್ತು ನಿಫ್ಟಿ ಐಟಿ ಕುಸಿತ ಕಂಡಿದೆ. ಕ್ರಮವಾಗಿ ಶೇಕಡ 2.26, ಶೇಕಡ 1.54, ಶೇಕಡ 1.57 ಕೆಳಕ್ಕೆ ಇಳಿದಿದೆ.

ಟೈಟಾನ್‌ಗೆ ಭಾರೀ ನಷ್ಟ
ಟೈಟಾನ್ ಷೇರುಗಳು ಭಾರೀ ನಷ್ಟವನ್ನು ಅನುಭವಿಸಿದೆ. ಶೇಕಡ 4.48ರಷ್ಟು ಕುಸಿದು ರೂಪಾಯಿ 2,100.05ಕ್ಕೆ ತಲುಪಿದೆ. ಇನ್ನು ಯುಪಿಎಲ್, ಡಾ. ರೆಡ್ಡೀಸ್, ಬ್ರಿಟಾನಿಯಾ ಹಾಗೂ ಎಲ್&ಟಿ ಕೂಡಾ ಕೆಳಕ್ಕಿಳಿದಿದೆ. ಇನ್ನು ಬಿಎಸ್‌ಇಯಲ್ಲಿ 1,290 ಷೇರುಗಳು ಮುನ್ನಡೆ ಸಾಧಿಸಿದ್ದರೆ, 2,003 ಷೇರುಗಳು ಕುಸಿದಿದೆ.
ಬಿಎಸ್‌ಇ ಇಂಡೆಕ್ಸ್, ಟೈಟಾನ್, ಡಾ. ರೆಡ್ಡೀಸ್, ಎಲ್&ಟಿ, ಹಿಂದೂಸ್ತಾನ್ ಯುನಿಲಿವರ್, ಏಷ್ಯನ್ ಪೇಂಟ್ಸ್, ಬಜಾಜ್ ಫಿನಾನ್ಸ್, ಟಿಸಿಎಸ್, ನೆಸ್ಟ್ಲೆ ಇಂಡಿಯಾ, ಬಜಾಜ್ ಫಿನ್‌ಸರ್ವ್, ಸನ್ ಫಾರ್ಮಾ, ಐಸಿಐಸಿಐ ಬ್ಯಾಂಕ್, ಇನ್ಪೋಸಿಸ್ ಕೂಡಾ ಭಾರೀ ನಷ್ಟವನ್ನು ಕಂಡಿದೆ.
ನಿನ್ನೆ ವಹಿವಾಟಿನ ಅಂತ್ಯದಲ್ಲಿ 777.40ರ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದ್ದ ಎಲ್‌ಐಸಿ ಷೇರು, ಮಂಗಳವಾರ ವಹಿವಾಟು ಅಂತ್ಯದಲ್ಲಿ 755.60 ರೂಪಾಯಿಗೆ ತಲುಪಿದೆ. ಮಂಗಳವಾರ ವಹಿವಾಟಿನ ಅಂತ್ಯದ ವೇಳೆಗೆ ಬಿಎಸ್‌ಇ ಸೂಚ್ಯಂಕದಲ್ಲಿ ಶೇಕಡ 2.80ರಷ್ಟು ಕುಸಿತ ಕಂಡಿದೆ. ಇನ್ನು ಈ ನಡುವೆ ಎನ್‌ಟಿಪಿಸಿ, ಮಾರುತಿ, ಎಂ&ಎಂ ಹಾಗೂ ಭಾರ್ತಿ ಏರ್‌ಟೆಲ್ ಲಾಭವನ್ನು ಕಂಡಿದೆ.


Click it and Unblock the Notifications