ಸತತ ಎರಡನೇ ಸೆಷನ್‌ನಲ್ಲಿ ಷೇರು ಮಾರುಕಟ್ಟೆಯು ಕುಸಿತವನ್ನು ದಾಖಲಿಸಿದೆ. ಸೋಮವಾರ ಆರಂಭಿಕ ವಹಿವಾಟಿನಲ್ಲಿ ಕುಸಿತವಾಗಿದ್ದ ಷೇರು ಮಾರುಕಟ್ಟೆಯು ವಹಿವಾಟಿನ ಅಂತ್ಯದಲ್ಲಿಯೂ ಕೆಳಕ್ಕೆ ಇಳಿದಿದೆ. ಆಗಸ್ಟ್ 22ರ ವಹಿವಾಟಿನ ಕೊನೆಯಲ್ಲಿ ಪ್ರಮುಖವಾಗಿ ಎಲ್ಲ ಸೆಕ್ಟರ್‌ಗಳು ನಷ್ಟವನ್ನು ದಾಖಲಿಸಿದೆ.
ಸೋಮವಾರ ಆರಂಭಿಕ ವಹಿವಾಟಿನಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 348.37 ಅಂಕ ಅಥವಾ ಶೇಕಡ 0.58ರಷ್ಟು ಕುಸಿದು 59,297.78ಕ್ಕೆ ತಲುಪಿದೆ. ನಿಫ್ಟಿ 112.25 ಅಂಕ ಅಥವಾ ಶೇಕಡ 0.63ರಷ್ಟು ಇಳಿಕೆ ಕಂಡು 17,646.20ಕ್ಕೆ ವಹಿವಾಟು ಆರಂಭ ಮಾಡಿದೆ. 929 ಷೇರುಗಳು ಏರಿಕೆಯನ್ನು ಕಂಡಿದ್ದರೆ, 1238 ಷೇರುಗಳು ಕುಸಿತವಾಗಿದೆ. 158 ಷೇರುಗಳು ಸ್ಥಿರವಾಗಿದೆ.
ವಹಿವಾಟಿನ ಅಂತ್ಯದಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 872.28 ಅಂಕ ಅಥವಾ ಶೇಕಡ 1.46ರಷ್ಟು ಕುಸಿದು 58773.87ಕ್ಕೆ ತಲುಪಿದೆ. ನಿಫ್ಟಿ 267.80 ಅಂಕ ಅಥವಾ ಶೇಕಡ 1.51ರಷ್ಟು ಇಳಿಕೆ ಕಂಡು 17490.70ಕ್ಕೆ ವಹಿವಾಟು ಆರಂಭ ಮಾಡಿದೆ. 1228 ಷೇರುಗಳು ಏರಿಕೆಯನ್ನು ಕಂಡಿದ್ದರೆ, 2214 ಷೇರುಗಳು ಕುಸಿತವಾಗಿದೆ. 163 ಷೇರುಗಳು ಸ್ಥಿರವಾಗಿದೆ. ಸೋಮವಾರ ವಹಿವಾಟಿನ ಅಂತ್ಯದಲ್ಲಿ ಷೇರುಪೇಟೆ ಸ್ಥಿತಿ ಹೇಗಿತ್ತು, ಯಾವೆಲ್ಲ ಸ್ಟಾಕ್ ಏರಿದೆ, ಯಾವುದು ಇಳಿದಿದೆ ಎಂದು ತಿಳಿಯೋಣ ಮುಂದೆ ಓದಿ..
ಟಾಪ್ ಸ್ಟಾಕ್, ಲೂಸರ್ ಸ್ಟಾಕ್
ಇಂದು ವಹಿವಾಟಿನ ಅಂತ್ಯದ ವೇಳೆಗೆ ಟಾಟಾ ಸ್ಟೀಲ್ಸ್ ಸ್ಟಾಕ್ ಟಾಪ್ ಲೂಸರ್ ಸ್ಟಾಕ್ ಆಗಿದೆ. ಷೇರು ಮೌಲ್ಯ ಶೇಕಡ 4.54ರಷ್ಟು ಕುಸಿತ ಕಂಡು ರೂಪಾಯಿ 105.05ಗೆ ತಲುಪಿದೆ. ಇನ್ನು ಟಾಟಾ ಕನ್ಸ್ಯೂಮರ್ ಪ್ರೊಡೆಕ್ಟ್ಸ್ ಟಾಪ್ ಗೇನರ್ ಆಗಿದೆ. ಸ್ಟಾಕ್ ಶೇಕಡ 0.89ರಷ್ಟು ಏರಿಕೆಯಾಗಿ ರೂಪಾಯಿ 793.95ಕ್ಕೆ ಏರಿಕೆಯಾಗಿದೆ. ಇನ್ನು ನಿಫ್ಟಿ ಎಫ್‌ಎಂಸಿಜಿ ಸ್ಟಾಕ್ ಬೆಸ್ಟ್ ಸೆಕ್ಟರ್ ಆಗಿದೆ. ಇನ್ನು ನಿಫ್ಟಿ ಮೆಟಲ್ ಭಾರೀ ಕುಸಿತ ಕಂಡಿದೆ. ಆರಂಭಿಕ ವಹಿವಾಟಿನಲ್ಲಿ ದಿವೀಸ್ ಲ್ಯಾಬ್ಸ್ ಷೇರು ಭಾರೀ ಇಳಿಕೆಯಾದ ಷೇರು ಆಗಿದೆ. ದಿವೀಸ್ ಲ್ಯಾಬ್ಸ್ ಶೇಕಡ 3.22ರಷ್ಟು ಕುಸಿದು ರೂಪಾಯಿ 3,577.05ಗೆ ತಲುಪಿದೆ. ಐಟಿಸಿ ಷೇರು ಏರಿಕೆಯಾಗಿದೆ. ಶೇಕಡ 1.20ರಷ್ಟು ಏರಿ, ರೂಪಾಯಿ 315.75ಕ್ಕೆ ಇಳಿದಿತ್ತು.
ನಿಫ್ಟಿ ಯಾವೆಲ್ಲ ಸ್ಟಾಕ್‌ಗಳು ಏರಿಕೆ, ಯಾವುದು ಇಳಿಕೆ?
ಪ್ರಮುಖವಾಗಿ ಟಾಟಾ ಸ್ಟೀಲ್ಸ್, ಏಷ್ಯನ್ ಪೇಂಟ್ಸ್, ಅದಾನಿ ಪೋರ್ಟ್ಸ್, ಟಾಟಾ ಮೋಟರ್ಸ್, ಜೆಸ್‌ಡಬ್ಲ್ಯೂ ಸ್ಟೀಲ್ ಪ್ರಮುಖ ನಿಫ್ಟಿ ಲೂಸರ್‌ಗಳು ಆಗಿದೆ. ಇನ್ನು ಐಟಿಸಿ, ಕೋಲ್ ಇಂಡಿಯಾ, ಟಾಟಾ ಕನ್ಸ್ಯೂಮರ್ ಪ್ರೊಡೆಕ್ಟ್ಸ್, ನೆಸ್ಲೆ ಇಂಡಿಯಾ, ಬ್ರಿಟಾನಿಯಾ ಇಂಡಸ್ಟ್ರೀಸ್ ಸ್ಟಾಕ್‌ಗಳು ಏರಿಕೆಯನ್ನು ಕಂಡಿದೆ. ಎಲ್ಲ ಸೆಕ್ಟರ್‌ಗಳು ನಷ್ಟದೊಂದಿಗೆ ವಹಿವಾಟು ಅಂತ್ಯ ಮಾಡಿದೆ. ಬಿಎಸ್‌ಇ ಮಿಡ್‌ಕ್ಯಾಪ್, ಸ್ಮಾಲ್ ಕ್ಯಾಪ್ ಶೇಕಡ 1ರಷ್ಟು ಕುಸಿದಿದೆ. ಆರಂಭಿಕವಾಗಿ ನಿಫ್ಟಿ 17700ಕ್ಕಿಂತ ಕೆಳಕ್ಕೆ ಇಳಿದಿದೆ. ನಿಫ್ಟಿ 50 ಸ್ಟಾಕ್‌ನಲ್ಲಿ 43 ಕುಸಿತ ಕಂಡಿದ್ದರೆ ಉಳಿದ 7 ಸ್ಟಾಕ್‌ಗಳು ಏರಿಕೆಯಾಗಿದೆ.
ಸೆನ್ಸೆಕ್ಸ್ ಯಾವೆಲ್ಲ ಸ್ಟಾಕ್ ಏರಿಕೆ, ಇಳಿಕೆ?
ಸೆನ್ಸೆಕ್ಸ್‌ನಲ್ಲಿ ಪ್ರಮುಖ ಐಟಿಸಿ, ನೆಸ್ಲೆ ಇಂಡಿಯಾ ಸ್ಟಾಕ್ ಏರಿಕೆಯಾಗಿದೆ. ಆದರೆ ಉಳಿದಂತೆ ಬಹುತೇಕ ಪ್ರಮುಖ ಸ್ಟಾಕ್‌ಗಳು ಭಾರೀ ಕುಸಿದಿದೆ. ರಿಲಯನ್ಸ್ ಇಂಡಸ್ಟ್ರೀಸ್, ಹಿಂದೂಸ್ತಾನ್ ಯೂನಿಲಿವರ್, ಇಂಡಸ್‌ಇಂಡ್ ಬ್ಯಾಂಕ್, ಡಾ ರೆಡ್ಡೀಸ್, ಭಾರ್ತಿ ಏರ್‌ಟೆಲ್, ಎನ್‌ಟಿಪಿಸಿ, ಟೈಟಾನ್, ಟಿಸಿಎಸ್, ಪವರ್ ಗ್ರಿಡ್, ಎಚ್‌ಸಿಎಲ್ ಟೆಕ್, ಎಂ&ಎಂ, ಇನ್ಫೋಸಿಸ್, ಎಚ್‌ಡಿಎಫ್‌ಸಿ ಬ್ಯಾಕ್, ಮಾರುತಿ, ಎಚ್‌ಡಿಎಫ್‌ಸಿ, ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಟೆಕ್ ಎಂ, ಆಕ್ಸಿಸ್ ಬ್ಯಾಂಕ್, ಕೋಟಕ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಫೈನಾನ್ಸ್, ಎಲ್‌ಟಿ, ಸನ್‌ಫಾರ್ಮಾ, ವಿಪ್ರೋ, ಏಷ್ಯನ್ ಪೇಂಟ್ಸ್, ಟಾಟಾ ಸ್ಟೀಲ್ಸ್ ಸ್ಟಾಕ್ ಕುಸಿತವಾಗಿದೆ.


Click it and Unblock the Notifications