ಷೇರುಪೇಟೆ ಮತ್ತೆ ಪತನ: ಐಟಿ ಹೊರತಾಗಿ ಎಲ್ಲ ಸೆಕ್ಟರ್ ಡೌನ್

ಷೇರು ಮಾರುಕಟ್ಟೆಯು ಸೋಮವಾರ ವಹಿವಾಟಿನ ಅಂತ್ಯದಲ್ಲಿಯೂ ಕುಸಿತ ಕಂಡಿದೆ. ಇಂದು ವಹಿವಾಟಿನ ಆರಂಭದಲ್ಲಿ ಸ್ಟಾಕ್ಸ್ ಮಾರುಕಟ್ಟೆ ಪಾತಾಳಕ್ಕೆ ಇಳಿದಿದೆ. ಹಲವಾರು ಸೆಷನ್‌ಗಳಿಂದ ಷೇರುಪೇಟೆ ಭಾರೀ ಕುಸಿತ ಕಾಣುತ್ತಿದೆ. ಯುಎಸ್ ಡಾಲರ್ ಎದುರು ಸರೂಪಾಯಿ ಮೌಲ್ಯವು ಕೂಡಾ ನಿರಂತರವಾಗಿ ಇಳಿಯುತ್ತಿದೆ. ಐಟಿ ಸೆಕ್ಟರ್ ಹೊರತುಪಡಿಸಿ ಉಳಿದ ಎಲ್ಲ ಸೆಕ್ಟರ್‌ಗಳು ಕುಸಿದಿದೆ.

ಸತತವಾಗಿ ನಾಲ್ಕನೇ ಸೆಷನ್‌ನಲ್ಲಿ ಭಾರತೀಯ ಷೇರು ಮಾರುಕಟ್ಟೆಯು ಕುಸಿದಿದೆ. ನಿಫ್ಟಿ ಸುಮಾರು 17000 ಸಮೀಪಕ್ಕೆ ಇಳಿದಿದೆ. 30 ಷೇರುಗಳ ಬಿಎಸ್‌ಇ ಸೂಚ್ಯಂಕ 953.70 ಅಂಕ ಅಥವಾ ಶೇಕಡ 1.64ರಷ್ಟು ಕುಸಿದು 57,145.22ಕ್ಕೆ ವಹಿವಾಟು ಅಂತ್ಯ ಮಾಡಿದೆ. ಇನ್ನು ನಿಫ್ಟಿ 311 ಅಂಕ ಅಥವಾ ಶೇಕಡ 1.79ರಷ್ಟು ಕುಸಿದು 17,016.30ಕ್ಕೆ ವಹಿವಾಟು ಅಂತ್ಯ ಮಾಡಿದೆ. ಇನ್ನು 630 ಷೇರುಗಳು ಏರಿಕೆಯಾಗಿದ್ದರೆ, 2860 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 120 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿತ್ತು.

ಇನ್ನು ವಹಿವಾಟಿನ ಆರಂಭದಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 564.77 ಅಂಕ ಅಥವಾ ಶೇಕಡ 0.97ರಷ್ಟು ಕುಸಿದು 57534.15ಕ್ಕೆ ವಹಿವಾಟು ಅಂತ್ಯ ಮಾಡಿದೆ. ಇನ್ನು ನಿಫ್ಟಿ 172.30 ಅಂಕ ಅಥವಾ ಶೇಕಡ 0.99ರಷ್ಟು ಕುಸಿದು 17155ಕ್ಕೆ ವಹಿವಾಟು ಅಂತ್ಯ ಮಾಡಿದೆ. ಇನ್ನು 668 ಷೇರುಗಳು ಏರಿಕೆಯಾಗಿದ್ದರೆ, 1622 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 153 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿತ್ತು. ಹಾಗಾದರೆ ಒಟ್ಟಾರೆಯಾಗಿ ಸ್ಟಾಕ್ ಮಾರುಕಟ್ಟೆ ಹೇಗಿದೆ ಎಂದು ನಾವಿಲ್ಲಿ ವಿವರಿಸಿದ್ದೇವೆ ಮುಂದೆ ಓದಿ...

 ನಿಫ್ಟಿಯಲ್ಲಿ ಯಾವೆಲ್ಲ ಸ್ಟಾಕ್ ಏರಿಕೆ, ಇಳಿಕೆ?

ನಿಫ್ಟಿಯಲ್ಲಿ ಯಾವೆಲ್ಲ ಸ್ಟಾಕ್ ಏರಿಕೆ, ಇಳಿಕೆ?

ಟಾಟಾ ಮೋಟರ್ಸ್, ಅದಾನಿ ಪೋರ್ಟ್ಸ್, ಹಿಂಡಾಲ್ಕೊ ಇಂಡಸ್ಟ್ರೀಸ್, ಮಾರುತಿ ಸುಜುಕಿ, ಈಚರ್ ಮೋಟರ್ಸ್ ಪ್ರಮುಖವಾಗಿ ನಿಫ್ಟಿಯಲ್ಲಿ ನಷ್ಟ ಕಂಡ ಸ್ಟಾಕ್ಸ್‌ಗಳು ಆಗಿದೆ. ಇನ್ನು ಎಚ್‌ಸಿಎಲ್‌ ಟೆಕ್ನಾಲಜೀಸ್, ಇನ್ಫೋಸಿಸ್, ಏಷ್ಯನ್ ಪೇಂಟ್ಸ್, ದಿವೀಸ್ ಲ್ಯಾಬ್ಸ್ ಹಾಗೂ ಅಲ್ಟ್ರಾಟೆಕ್ ಸಿಮೆಂಟ್ ಸ್ಟಾಕ್ ಏರಿಕೆಯಾದ ಸ್ಟಾಕ್ಸ್‌ಗಳು ಆಗಿದೆ. ಇನ್ನು ಐಟಿ ಸೆಕ್ಟರ್‌ ಹೊರತುಪಡಿಸಿ ಉಳಿದೆಲ್ಲ ಸೆಕ್ಟರ್ ಭಾರೀ ಇಳಿಕೆಯಾಗಿದೆ. ಬಿಎಸ್‌ಇ ಮಿಡ್‌ ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ ಸುಮಾರು ಶೇಕಡ 2-3ರಷ್ಟು ಇಳಿದಿದೆ.

 ಯಾವ ಸ್ಟಾಕ್ ಟಾಪ್?

ಯಾವ ಸ್ಟಾಕ್ ಟಾಪ್?

ಏಷ್ಯನ್ ಪೇಂಟ್ಸ್ ಸ್ಟಾಕ್ ಟಾಪ್ ಷೇರು ಆಗಿದೆ. ಏಷ್ಯನ್ ಪೇಂಟ್ಸ್ ಸ್ಟಾಕ್ ಮೌಲ್ಯ ಶೇಕಡ 1.26ರಷ್ಟು ಹೆಚ್ಚಳವಾಗಿ ರೂಪಾಯಿ 3,438.05ಕ್ಕೆ ತಲುಪಿದೆ. ಇನ್ನು ಟಾಟಾ ಮೋಟರ್ಸ್ ಸ್ಟಾಕ್ ಶೇಕಡ 6.05ರಷ್ಟು ಕೆಳಕ್ಕೆ ಇಳಿದು ರೂಪಾಯಿ 397.50ಕ್ಕೆ ಕುಸಿದಿದೆ. ಟಾಟಾ ಮೋಟರ್ಸ್ ಸ್ಟಾಕ್ ಭಾರೀ ಕುಸಿತ ಕಂಡಿರುವ ಸ್ಟಾಕ್ ಆಗಿದೆ. ಇನ್ನು ಬೆಸ್ಟ್ ಸೆಕ್ಟರ್ ಐಟಿ ಆಗಿದೆ. ನಿಫ್ಟಿ ಮೆಟಲ್ ಭಾರೀ ಇಳಿಕೆ ಕಂಡ ಸೆಕ್ಟರ್ ಆಗಿದೆ. ಇನ್ನು ಉಳಿದಂತೆ ಎಲ್ಲ ಸ್ಟಾಕ್‌ಗಳು ಕೂಡಾ ಕುಸಿದಿದೆ.

 ಸೆನ್ಸೆಕ್ಸ್‌ನಲ್ಲಿ ಯಾವ ಷೇರು ಏರಿಕೆ, ಇಳಿಕೆ?

ಸೆನ್ಸೆಕ್ಸ್‌ನಲ್ಲಿ ಯಾವ ಷೇರು ಏರಿಕೆ, ಇಳಿಕೆ?

ಎನ್‌ಟಿಪಿಸಿ, ಭಾರ್ತಿ ಏರ್‌ಟೆಲ್, ಟಾಟಾ ಸ್ಟೀಲ್ಸ್, ರಿಲಯನ್ಸ್, ಪವರ್ ಗ್ರಿಡ್, ಡಾ ರೆಡ್ಡೀಸ್, ಐಸಿಐಸಿಐ ಬ್ಯಾಂಕ್, ಸನ್‌ ಫಾರ್ಮಾ, ಎಚ್‌ಸಿಎಲ್‌ ಟೆಕ್, ಇಂಡಸ್‌ಇಂಡ್ ಬ್ಯಾಂಕ್ ಸ್ಟಾಕ್‌ಗಳು ಏರಿಕೆಯಾಗಿದೆ. ಟೈಟಾನ್, ಟೆಕ್ ಎಂ, ಟಿಸಿಎಸ್, ಎಸ್‌ಬಿಐ ಇನ್ಶೂರೆನ್ಸ್, ವಿಪ್ರೋ, ಇನ್ಫೋಸಿಸ್, ಎಲ್‌ಟಿ, ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿ, ಐಟಿಸಿ, ಅಲ್ಟ್ರಾಟೆಕ್ ಸಿಮೆಂಟ್, ಮಾರುತಿ, ಆಕ್ಸಿಸ್ ಬ್ಯಾಂಕ್, ನೆಸ್ಲೆ ಇಂಡಿಯಾ, ಏಷ್ಯನ್‌ ಪೇಂಟ್ಸ್, ಬಜಾಜ್ ಫೈನಾನ್ಸ್, ಹಿಂದೂಸ್ತಾನ್ ಯೂನಿಲಿವರ್, ಎಂ&ಎಂ, ಕೋಟಕ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್ ಸ್ಟಾಕ್ ಇಳಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+