ಭಾರತೀಯ ಷೇರು ಮಾರುಕಟ್ಟೆಯು ಸೋಮವಾರ ಆರಂಭಿಕ ವಹಿವಾಟಿನಲ್ಲಿ ಕುಸಿತ ಕಂಡಿದ್ದು, ವಹಿವಾಟಿನ ಅಂತ್ಯದ ವೇಳೆಗೂ ನಷ್ಟವನ್ನು ಕಂಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಮತ್ತೆ ಏರಿಕೆ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿಗಳ ನಡುವೆ ಹೂಡಿಕೆದಾರರು ಷೇರು ಮಾರುಕಟ್ಟೆ ಹೂಡಿಕೆಯಿಂದ ಕೊಂಚ ಹಿಂದೆ ಸರಿದಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ವಿತ್ತೀಯ ನೀತಿ ಸಮಿತಿಯು ಹಣದುಬ್ಬರವನ್ನು ನಿಯಂತ್ರಿಸಲು ಬೆಂಚ್‌ಮಾರ್ಕ್ ಬಡ್ಡಿದರಗಳಲ್ಲಿ ಮತ್ತೊಮ್ಮೆ ಏರಿಕೆ ಮಾಡುವ ನಿರೀಕ್ಷೆಗಳು ಇದೆ. ಮೂರು ದಿನಗಳಿಂದ ಈ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಈ ನಡುವೆ ಷೇರು ಮಾರುಕಟ್ಟೆಯು ಪಾತಾಳಕ್ಕೆ ಇಳಿಯುತ್ತಿದೆ.
30-ಷೇರು ಬಿಎಸ್‌ಇ ಸೆನ್ಸೆಕ್ಸ್ ಇಂದು 94 ಪಾಯಿಂಟ್‌ಗಳು ಅಥವಾ ಶೇಕಡಾ 0.17 ರಷ್ಟು ಕುಸಿದು 55,675 ಕ್ಕೆ ತಲುಪಿದೆ. ಈ ವೇಳೆಯಲ್ಲೇ ಎನ್‌ಎಸ್‌ಇ ನಿಫ್ಟಿ 15 ಪಾಯಿಂಟ್ ಅಥವಾ 0.09 ರಷ್ಟು ಕುಸಿದು 16,570ಕ್ಕೆ ವಹಿವಾಟು ಅಂತ್ಯ ಮಾಡಿದೆ.

ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 0.11 ರಷ್ಟು ಕುಸಿದಿದೆ. ಸ್ಮಾಲ್ ಕ್ಯಾಪ್ ಶೇಕಡಾ 1.02 ರಷ್ಟು ಜಾರಿದೆ. 15 ಸೆಕ್ಟರ್ ಗೇಜ್‌ಗಳಲ್ಲಿ ಒಂಬತ್ತು ಕೆಂಪು ಬಣ್ಣದಲ್ಲಿ ಕಾಣಿಸಿಕೊಂಡಿದೆ. (ನಷ್ಟ ಕಂಡಿದೆ). ನಿಫ್ಟಿ ಕನ್ಸ್ಯೂಮರ್ ಡ್ಯೂರಬಲ್ಸ್ ಮತ್ತು ನಿಫ್ಟಿ ಕ್ರಮವಾಗಿ ಶೇಕಡಾ 0.58 ಮತ್ತು 0.28 ರಷ್ಟು ಕುಸಿತ ಕಂಡಿದೆ.
ಯಾವ ಷೇರಿಗೆ ಲಾಭ, ಯಾವ ಷೇರಿಗೆ ನಷ್ಟ?
ನಿಫ್ಟಿಯಲ್ಲಿ ಶ್ರೀ ಸಿಮೆಂಟ್ ಟಾಪ್ ಲೂಸರ್ ಆಗಿದೆ. ಶ್ರೀ ಸಿಮೆಂಟ್ ಟಾಪ್ ಸ್ಟಾಕ್ 3.14 ಶೇಕಡಾದಷ್ಟು ಕಳೆದುಕೊಂಡು ರೂಪಾಯಿ 19,990.45 ಕ್ಕೆ ತಲುಪಿದೆ. ಬಿಪಿಸಿಎಲ್, ಏಷ್ಯನ್ ಪೇಂಟ್ಸ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಹೀರೋ ಮೋಟೋಕಾರ್ಪ್ ಕೂಡ ನಷ್ಟದಲ್ಲಿದೆ.
1,431 ಷೇರುಗಳು ಲಾಭವನ್ನು ಕಂಡಿದ್ದರೆ ಒಟ್ಟಾರೆ ಮಾರುಕಟ್ಟೆಯು ನಷ್ಟದಲ್ಲಿದೆ. ಬಿಎಸ್‌ಇಯಲ್ಲಿ 1,966 ಷೇರುಗಳು ಕುಸಿತ ಕಂಡಿದೆ. 30-ಷೇರು ಬಿಎಸ್‌ಇ ಸೂಚ್ಯಂಕದಲ್ಲಿ, ಏಷ್ಯನ್ ಪೇಂಟ್ಸ್, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಫಿನ್‌ಸರ್ವ್, ನೆಸ್ಲೆ ಇಂಡಿಯಾ, ಎಲ್ & ಟಿ, ಹಿಂದೂಸ್ತಾನ್ ಯೂನಿಲಿವರ್, ಆಕ್ಸಿಸ್ ಬ್ಯಾಂಕ್, ಸನ್ ಫಾರ್ಮಾ, ಡಾ ರೆಡ್ಡೀಸ್, ವಿಪ್ರೋ, ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಭಾರೀ ನಷ್ಟವನ್ನು ಅನುಭವಿಸಿದೆ.
ಈ ಸಂದರ್ಭದಲ್ಲಿ ದೇಶದ ಅತಿದೊಡ್ಡ ವಿಮಾ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಶೇಕಡಾ 2.86 ರಷ್ಟು ಕುಸಿದು ರೂಪಾಯಿ 777.40 ಕ್ಕೆ ಸ್ಥಿರವಾಯಿತು. ಈ ಸಂದರ್ಭದಲ್ಲೇ ಟಾಟಾ ಸ್ಟೀಲ್, ಇಂಡಸ್‌ಇಂಡ್ ಬ್ಯಾಂಕ್, ಎಂ & ಎಂ, ಐಟಿಸಿ, ಕೋಟಕ್ ಮಹೀಂದ್ರಾ ಬ್ಯಾಂಕ್, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ಎನ್‌ಟಿಪಿಸಿ ಮತ್ತು ಮಾರುತಿ ಲಾಭವನ್ನು ಕಂಡಿದೆ.


Click it and Unblock the Notifications