For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ ಕುಸಿತ, ನಿಫ್ಟಿ ಏರಿಕೆ: ಬುಧವಾರ ವಹಿವಾಟಿನ ಅಂತ್ಯ ಹೀಗಿದೆ

|

ಷೇರು ಮಾರುಕಟ್ಟೆಯು ಬುಧವಾರ ವಹಿವಾಟಿನ ಅಂತ್ಯದಲ್ಲಿ ಏರಿಳಿತ ಕಂಡಿದೆ. ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆಯು ಕುಸಿದೆ. ವಹಿವಾಟಿನ ಅಂತ್ಯದ ವೇಳೆಗೆ ಸೆನ್ಸೆಕ್ಸ್ ಕುಸಿದಿದ್ದರೆ ನಿಫ್ಟಿ ಏರಿಕೆ ಕಂಡಿದೆ. ಬಹುತೇಕ ಎಲ್ಲಾ ವಲಯಗಳು ಕುಸಿದಿದೆ. ಜಾಗತಿಕ ಬೆಳವಣಿಗೆಯೂ ಷೇರು ಪೇಟೆ ಮೇಲೆ ಪ್ರಭಾವ ಬೀರಿದೆ.

ಬುಧವಾರ ವಹಿವಾಟಿನ ಆರಂಭದಲ್ಲಿ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 131.71 ಅಂಕ ಅಥವಾ ಶೇಕಡ 0.22ರಷ್ಟು ಕುಸಿದು 58,721.36ಕ್ಕೆ ತಲುಪಿದ್ದರೆ, ಎನ್‌ಎಸ್‌ಇ ನಿಫ್ಟಿ 37.45 ಅಂಕ ಅಥವಾ ಶೇಕಡ 0.21ರಷ್ಟು ಕುಸಿದು 17,487.65ಕ್ಕೆ ವಹಿವಾಟು ಆರಂಭ ಮಾಡಿತ್ತು.

ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆ ಕುಸಿತ: ಹೇಗಿದೆ ಮಾರುಕಟ್ಟೆ ಸ್ಥಿತಿಆರಂಭಿಕ ವಹಿವಾಟಿನಲ್ಲಿ ಷೇರುಪೇಟೆ ಕುಸಿತ: ಹೇಗಿದೆ ಮಾರುಕಟ್ಟೆ ಸ್ಥಿತಿ

ವಹಿವಾಟಿನ ಅಂತ್ಯದ ವೇಳೆಗೆ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 35.78 ಅಂಕ ಅಥವಾ ಶೇಕಡ 0.06ರಷ್ಟು ಕುಸಿದು 58,817.29ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 9.65 ಅಂಕ ಅಥವಾ ಶೇಕಡ 0.06ರಷ್ಟು ಏರಿಕೆ ಕಂಡು 17,534.75ಕ್ಕೆ ಸ್ಥಿರವಾಗಿದೆ. ಷೇರು ಪೇಟೆಯಲ್ಲಿ 1817 ಷೇರುಗಳು ಕುಸಿತವಾಗಿದ್ದರೆ, 1501 ಷೇರುಗಳು ಏರಿಕೆಯಾಗಿದೆ. 119 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿದೆ.

ಸೆನ್ಸೆಕ್ಸ್ ಕುಸಿತ, ನಿಫ್ಟಿ ಏರಿಕೆ: ಬುಧವಾರ ವಹಿವಾಟಿನ ಅಂತ್ಯ ಹೀಗಿದೆ

ಯಾವ ಸ್ಟಾಕ್ ಟಾಪ್?

ಷೇರು ಮಾರುಕಟ್ಟೆಯಲ್ಲಿ ಹಿಂಡಾಲ್ಕೊ ಷೇರುಗಳು ಶೇಕಡ 4.44ರಷ್ಟು ಏರಿಕೆಯಾಗಿ, ರೂಪಾಯಿ 440.10ಕ್ಕೆ ತಲುಪಿದೆ. ಇನ್ನು ಬಜಾಜ್ ಫೈನಾನ್ಸ್ ಸ್ಟಾಕ್ ಟಾಪ್ ಲೂಸರ್ ಆಗಿದೆ. ಸ್ಟಾಕ್ ಶೇಕಡ 2.63ರಷ್ಟು ಕುಸಿದು ರೂಪಾಯಿ 7,149.40ಕ್ಕೆ ತಲುಪಿದೆ. ಇನ್ನು ನಿಫ್ಟಿ ಮೆಟಲ್ ಬೆಸ್ಟ್ ಸಸಸೆಕ್ಟರ್ ಆಗಿದೆ. ನಿಫ್ಟಿ ಐಟಿ ತೀರಾ ಇಳಿಕೆಯಾಗಿದೆ. ಆರಂಭಿಕ ವಹಿವಾಟಿನಲ್ಲಿಯೂ ನಿಫ್ಟಿ ಐಟಿ ಸ್ಟಾಕ್ ಭಾರೀ ಕುಸಿತ ಕಂಡಿದೆ.

2022ರಲ್ಲಿ ಶೇಕಡ 121 ಏರಿಕೆಯಾಗಿದೆ ಈ ಹೋಟೆಲ್ ಸ್ಟಾಕ್, ಖರೀದಿಸಬಹುದೇ?2022ರಲ್ಲಿ ಶೇಕಡ 121 ಏರಿಕೆಯಾಗಿದೆ ಈ ಹೋಟೆಲ್ ಸ್ಟಾಕ್, ಖರೀದಿಸಬಹುದೇ?

ಯಾವ ಸ್ಟಾಕ್ ಏರಿಕೆ, ಯಾವುದು ಇಳಿಕೆ?

ಹಿಂಡಾಲ್ಕೊ ಇಂಡಸ್ಟ್ರೀಸ್, ಯುಪಿಎಲ್, ಅಪೋಲೋ ಹಾಸ್ಪಿಟಲ್ಸ್, ಕೋಲ್ ಇಂಡಿಯಾ, ಟಾಟಾ ಸ್ಟೀಲ್ಸ್ ಪ್ರಮುಖ ನಿಫ್ಟಿ ಗೇನರ್ ಆಗಿದೆ. ಬಜಾಜ್ ಫೈನಾನ್ಸ್, ಎನ್‌ಟಿಪಿಸಿ, ಒಎನ್‌ಜಿಸಿ, ಎಚ್‌ಸಿಎಲ್ ಟೆಕ್ನಾಲಜೀಸ್, ಅದಾನಿ ಪೋರ್ಟ್ಸ್ ಸ್ಟಾಕ್‌ಗಳು ನಷ್ಟವನ್ನು ಕಂಡಿದೆ.

ಬಜಾಜ್ ಫೈನಾನ್ಸ್ ಶೇಕಡ 2.66ರಷ್ಟು ಕುಸಿತ ಕಂಡಿದೆ. ಎನ್‌ಟಿಪಿಸಿ, ಎಚ್‌ಸಿಎಲ್ ಟೆಕ್, ವಿಪ್ರೋ, ಏಷ್ಯನ್ ಪೇಂಟ್ಸ್, ಅಲ್ಟ್ರಾಟೆಕ್ ಸಿಮೆಂಟ್, ಎಸ್‌ಬಿಐ ಸ್ಟಾಕ್ ಕೂಡಾ ನಷ್ಟವನ್ನು ಕಂಡಿದೆ. ಟಾಟಾ ಸ್ಟೀಲ್ಸ್, ಭಾರ್ತಿ ಏರ್‌ಟೆಲ್, ಐಸಿಐಸಿಐ ಬ್ಯಾಂಕ್, ಎಲ್‌&ಟಿ, ಇಂಡಸ್‌ಇಂಡ್ ಬ್ಯಾಂಕ್ ಏರಿಕೆಯಾಗಿದೆ.

English summary

Closing Bell: Sensex Crashes Over 30 Points, Nifty Trades Above 17,500

Sensex Crashes Over 30 Points, Nifty Trades Above 17,500.
Story first published: Wednesday, August 10, 2022, 17:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X