ಭಾರತೀಯ ಷೇರುಪೇಟೆ ಸೋಮವಾರ ಸಕಾರಾತ್ಮಕ ಆರಂಭ ಪಡೆದು ದಿನದ ವಹಿವಾಟು ನಷ್ಟದೊಂದಿಗೆ ಕೊನೆಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 189 ಪಾಯಿಂಟ್ಸ್ ಕುಸಿದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 45 ಪಾಯಿಂಟ್ಸ್ ಇಳಿಕೆಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 189 ಪಾಯಿಂಟ್ಸ್ ಅಥವಾ ಶೇಕಡಾ 0.36ರಷ್ಟು ನಷ್ಟ ಅನುಭವಿಸಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 45.65 ಪಾಯಿಂಟ್ಸ್ ಅಥವಾ ಶೇಕಡಾ 0.29ರಷ್ಟು ಇಳಿಕೆಗೊಂಡಿದೆ.
ದಿನದ ವಹಿವಾಟು ಅಂತ್ಯಕ್ಕೆ 1826 ಷೇರುಗಳು ಏರಿಕೆಗೊಂಡರೆ, 1420 ಷೇರುಗಳು ಕುಸಿದವು, ಮತ್ತು 147 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಡಿವಿಸ್ ಲ್ಯಾಬ್ಸ್, ಡಾ. ರೆಡ್ಡಿಸ್ ಲ್ಯಾಬ್ಸ್, ಹಿಂಡಾಲ್ಕೊ, ಟಾಟಾ ಸ್ಟೀಲ್ ಮತ್ತು ಟೆಕ್ ಮಹೀಂದ್ರಾ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಎಚ್‌ಡಿಎಫ್‌ಸಿ ಲೈಫ್, ಟೈಟಾನ್ ಕಂಪನಿ, ಟಿಸಿಎಸ್, ಶ್ರೀ ಸಿಮೆಂಟ್ಸ್ ಮತ್ತು ಕೋಲ್ ಇಂಡಿಯಾ ನಷ್ಟ ಅನುಭವಿಸಿವೆ.
ಪಿಎಸ್‌ಯು ಬ್ಯಾಂಕ್, ಫಾರ್ಮಾ ಮತ್ತು ಮೆಟಲ್ ಸೂಚ್ಯಂಕಗಳು ಶೇಕಡಾ 1 ರಿಂದ 2 ರಷ್ಟು ಏರಿಕೆ ಕಂಡರೆ, ಐಟಿ, ಇಂಧನ ಮತ್ತು ಇನ್ಫ್ರಾ ಸೂಚ್ಯಂಕಗಳು ಮಾರಾಟದ ಒತ್ತಡಕ್ಕೆ ಸಾಕ್ಷಿಯಾಗಿವೆ.
ಇನ್ನು ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಮಾರಾಟದ ಮಧ್ಯೆ ಭಾರತೀಯ ರೂಪಾಯಿ ಪ್ರತಿ ಡಾಲರ್‌ಗೆ 74.19 ಕ್ಕೆ ತಲುಪಿದೆ.


Click it and Unblock the Notifications