ಸೋಮವಾರ ಆರಂಭಿಕ ವಹಿವಾಟಿನಿಂದ ವಹಿವಾಟಿನ ಅಂತ್ಯದವರೆಗೂ ನಷ್ಟದಲ್ಲೇ ಸಾಗಿದ್ದ ಷೇರು ಮಾರುಕಟ್ಟೆಯು ಮಂಗಳವಾರವೂ ಕೂಡಾ ಕುಸಿತ ಕಂಡಿದೆ. ನಿನ್ನೆ ಭಾರೀ ನಷ್ಟವನ್ನು ಕಂಡಿದ್ದ ಇನ್ಫೋಸಿಸ್ ಷೇರು ಮಂಗಳವಾರ ಚೇತರಿಸಿಕೊಂಡಿದೆ. ಆದರೆ ಸ್ಟಾಕ್ ಮಾರುಕಟ್ಟೆ ಮಾತ್ರ ಸತತ ಎರಡನೇ ಸೆಷನ್‌ನಲ್ಲಿ ನಷ್ಟದೊಂದಿಗೆ ಸಾಗಿದೆ. ಪ್ರಮುಖವಾಗಿ ಇನ್ಪೋಸಿಸ್‌ನ ನಾಲ್ಕನೇ ತ್ರೈಮಾಸಿಕದ ವರದಿಯ ಬಳಿಕ ಈ ಬೆಳವಣಿಗೆ ಕಂಡಿದೆ.
ಏಪ್ರಿಲ್ 18ರಂದು ವಹಿವಾಟಿನ ಆರಂಭದಲ್ಲಿ ಸೆನ್ಸೆಕ್ಸ್ 99.64 ಪಾಯಿಂಟ್ ಅಥವಾ ಶೇ.0.17ರಷ್ಟು ಇಳಿಕೆಯಾಗಿ, 60,010.39ಕ್ಕೆ ತಲುಪಿದೆ. ಆದರೆ ನಿಫ್ಟಿ ಲಾಭದೊಂದಿಗೆ ವಹಿವಾಟು ಆರಂಭ ಮಾಡಿದೆ. ನಿಫ್ಟಿ 26.20 ಅಂಕ, ಶೇ.0.15ರಷ್ಟು ಇಳಿಕೆಯಾಗಿ 17,733ಕ್ಕೆ ತಲುಪಿದೆ. 1298 ಷೇರುಗಳು ಏರಿಕೆಯಾಗಿದ್ದರೆ, 581 ಷೇರುಗಳು ಇಳಿಕೆಯಾಗಿದೆ. 70 ಷೇರುಗಳು ಸ್ಥಿರವಾಗಿದೆ. ಅದಾನಿ ಎಂಟರ್‌ಪ್ರೈಸಸ್, ಎಚ್‌ಡಿಎಫ್‌ಸಿ ಲೈಫ್, ಹಿಂಡಾಲ್ಕೊ ಇಂಡಸ್ಟ್ರೀಸ್, ಎಚ್‌ಸಿಎಲ್ ಟೆಕ್ನಾಲಜೀಸ್, ಇನ್ಫೋಸಿಸ್ ಲಾಭವನ್ನು ಪಡೆದುಕೊಂಡ ಸಂಸ್ಥೆಗಳಾಗಿದೆ.

ಮಂಗಳವಾರ, ಏಪ್ರಿಲ್ 18ರಂದು ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ 183.74 ಪಾಯಿಂಟ್ ಅಥವಾ ಶೇ.0.31ರಷ್ಟು ಇಳಿಕೆಯಾಗಿ, 59,727.01ಕ್ಕೆ ತಲುಪಿದೆ. ನಿಫ್ಟಿ 46.60 ಅಂಕ, ಶೇ.0.26ರಷ್ಟು ಇಳಿಕೆಯಾಗಿ 17,660.20ಕ್ಕೆ ತಲುಪಿದೆ. 1,841 ಷೇರುಗಳು ಏರಿಕೆಯಾಗಿದ್ದರೆ, 1,602 ಷೇರುಗಳು ಇಳಿಕೆಯಾಗಿದೆ. 115 ಷೇರುಗಳು ಸ್ಥಿರವಾಗಿದೆ. ಪ್ರಮುಖವಾಗಿ ಪವರ್ ಗ್ರಿಡ್ ಕಾರ್ಪೋರೇಷನ್, ಅಲ್ಟ್ರಾಟೆಕ್ ಸಿಮೆಂಟ್, ಅದಾನಿ ಎಂಟರ್‌ಪ್ರೈಸಸ್, ರಿಲಯನ್ಸ್ ಇಂಡಸ್ಟ್ರೀಸ್, ಅಪೊಲೋ ಹಾಸ್ಪಿಟಲ್ ಸ್ಟಾಕ್ ಇಳಿಕೆಯಾಗಿದೆ.
ಸೆನ್ಸೆಕ್ಸ್ ಟಾಪ್ ಗೇನರ್
ಎಚ್‌ಸಿಎಲ್ ಟೆಕ್: ಶೇಕಡ 2.17
ಇಂಡಸ್‌ಇಂಡ್ ಬ್ಯಾಂಕ್: ಶೇಕಡ 1.90
ನೆಸ್ಲೆ: ಶೇಕಡ 1.63
ವಿಪ್ರೋ: ಶೇಕಡ 1.63
ಸನ್ ಫಾರ್ಮಾ: ಶೇಕಡ 0.75
ಮಾರುತಿ: ಶೇಕಡ 0.65
ಸೆನ್ಸೆಕ್ಸ್ ಟಾಪ್ ಲೂಸರ್
ಪವರ್‌ಗ್ರಿಡ್: ಶೇಕಡ -2.62
ಅಲ್ಟ್ರಾಟೆಕ್ ಸಿಮೆಂಟ್: ಶೇಕಡ -1.90
ರಿಲಯನ್ಸ್: ಶೇಕಡ -1.13
ಟೈಟಾನ್: ಶೇಕಡ -1.12
ಬಜಾಜ್ ಫೈನಾನ್ಸ್: ಶೇಕಡ -0.66
ಎಂ&ಎಂ: ಶೇಕಡ -0.66
ನಿಫ್ಟಿ ಟಾಪ್ ಗೇನರ್
ದಿವೀಸ್ ಲ್ಯಾಬ್ಸ್: ಶೇಕಡ 3.08
ಎಚ್‌ಸಿಎಲ್ ಟೆಕ್: ಶೇಕಡ 2.27
ಸಿಪ್ಲಾ: ಶೇಕಡ 2.06
ಇಂಡಸ್‌ಇಂಡ್ ಬ್ಯಾಂಕ್: ಶೇಕಡ 1.95
ನೆಸ್ಲೆ ಇಂಡಿಯಾ: ಶೇಕಡ 1.68
ವಿಪ್ರೋ: ಶೇಕಡ 1.55
ನಿಫ್ಟಿ ಟಾಪ್ ಲೂಸರ್
ಪವರ್‌ಗ್ರಿಡ್: ಶೇಕಡ -2.43
ಅಲ್ಟ್ರಾಟೆಕ್ ಸಿಮೆಂಟ್: ಶೇಕಡ -1.90
ಅದಾನಿ ಎಂಟರ್‌ಪ್ರೈಸಸ್: ಶೇಕಡ -1.80
ಅಪೋಲೋ ಹಾಸ್ಪಿಟಲ್: ಶೇಕಡ -1.18
ಟೈಟಾನ್: ಶೇಕಡ -1.17
ಅದಾನಿ ಪೋರ್ಟ್ಸ್: ಶೇಕಡ -1.16
ರಿಲಯನ್ಸ್: ಶೇಕಡ -1.14
ಏಪ್ರಿಲ್ 17ರಂದು ವಹಿವಾಟಿನ ಆರಂಭದಲ್ಲಿ ಸೆನ್ಸೆಕ್ಸ್ 541.23 ಪಾಯಿಂಟ್ ಅಥವಾ ಶೇ.0.90ರಷ್ಟು ಇಳಿಕೆಯಾಗಿ, 59,889.77ಕ್ಕೆ ತಲುಪಿದೆ. ಆದರೆ ನಿಫ್ಟಿ ಲಾಭದೊಂದಿಗೆ ವಹಿವಾಟು ಆರಂಭ ಮಾಡಿದೆ. ನಿಫ್ಟಿ 135.70 ಅಂಕ, ಶೇ.0.76ರಷ್ಟು ಇಳಿಕೆಯಾಗಿ 17,692.30ಕ್ಕೆ ತಲುಪಿದೆ. 1059 ಷೇರುಗಳು ಏರಿಕೆಯಾಗಿದ್ದರೆ, 1143 ಷೇರುಗಳು ಇಳಿಕೆಯಾಗಿದೆ. 168 ಷೇರುಗಳು ಸ್ಥಿರವಾಗಿದೆ. ಇನ್ಫೋಸಿಸ್, ಟೆಕ್ ಮಹೀಂದ್ರಾ, ವಿಪ್ರೋ, ಎಚ್‌ಸಿಎಲ್ ಟೆಕ್, ಟಿಸಿಎಸ್ ಸ್ಟಾಕ್‌ಗಳು ಇಳಿಕೆಯಾಗಿದೆ.
ಸೋಮವಾರ, ಏಪ್ರಿಲ್ 17ರಂದು ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ 520.25 ಪಾಯಿಂಟ್ ಅಥವಾ ಶೇ.0.86ರಷ್ಟು ಇಳಿಕೆಯಾಗಿ, 59,910.75ಕ್ಕೆ ತಲುಪಿದೆ. ಆದರೆ ನಿಫ್ಟಿ ಲಾಭದೊಂದಿಗೆ ವಹಿವಾಟು ಆರಂಭ ಮಾಡಿದೆ. ನಿಫ್ಟಿ 121.20 ಅಂಕ, ಶೇ.0.86ರಷ್ಟು ಇಳಿಕೆಯಾಗಿ 17,706.80ಕ್ಕೆ ತಲುಪಿದೆ. 1,747 ಷೇರುಗಳು ಏರಿಕೆಯಾಗಿದ್ದರೆ, 1739 ಷೇರುಗಳು ಇಳಿಕೆಯಾಗಿದೆ. 180 ಷೇರುಗಳು ಸ್ಥಿರವಾಗಿದೆ. ಪ್ರಮುಖವಾಗಿ ಇನ್ಫೋಸಿಸ್, ಟೆಕ್ ಮಹೀಂದ್ರಾ, ಎಚ್‌ಸಿಎಲ್ ಟೆಕ್ನಾಲಜೀಸ್, ಎನ್‌ಟಿಪಿಸಿ ಸ್ಟಾಕ್‌ಗಳು ಭಾರೀ ನಷ್ಟವನ್ನು ಕಂಡಿದೆ.


Click it and Unblock the Notifications