ಷೇರು ಮಾರುಕಟ್ಟೆಯಲ್ಲಿ ಕಳೆದ ವಾರದ ವಹಿವಾಟು ಗುರುವಾರ ಅಂತ್ಯವಾಗಿದೆ. ಶುಕ್ರವಾರ, ಶನಿವಾರ, ಭಾನುವಾರ ಮೂರು ದಿನಗಳ ಕಾಲ ಷೇರುಪೇಟೆಯಲ್ಲಿ ಯಾವುದೇ ವಹಿವಾಟು ನಡೆದಿಲ್ಲ. ಆದರೆ ಸೋಮವಾರ ವಹಿವಾಟಿನ ಆರಂಭದಿಂದ ಅಂತ್ಯದವರೆಗೂ ಷೇರು ಮಾರುಕಟ್ಟೆಯು ನಷ್ಟದೊಂದಿಗೆ ಸಾಗಿದೆ. ಪ್ರಮುಖವಾಗಿ ಇನ್ಫೋಸಿಸ್ ಸ್ಟಾಕ್ ಭಾರೀ ನಷ್ಟವನ್ನು ಕಂಡಿದೆ.
ಟೆಕ್ ದೈತ್ಯ ಸಂಸ್ಥೆಯು ನಾಲ್ಕನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದ ಬಳಿಕ ಸೋಮವಾರ ಭಾರೀ ಕುಸಿತವನ್ನು ಕಂಡಿದೆ. ಇನ್ಫೋಸಿಸ್ ಮೇಲೆ ಹೂಡಿಕೆಯನ್ನು ಮಾಡಿದ ಹಲವಾರು ಸಂಸ್ಥೆಗಳು, ಮ್ಯೂಚುವಲ್ ಫಂಡ್‌ಗಳು ನಷ್ಟವನ್ನು ಕಂಡಿದೆ. ನಾರಾಯಣ ಮೂರ್ತಿ ಕುಟುಂಬದವರು ಅತೀ ಹೆಚ್ಚು ನಷ್ಟವನ್ನು ಕಂಡಿದ್ದಾರೆ. ಇನ್ನು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಇನ್ಫೋಸಿಸ್‌ನಲ್ಲಿ ಅಧಿಕ ಹೂಡಿಕೆ ಮಾಡಿದ್ದು, ಸಮಾರು 3,907 ಕೋಟಿ ರೂಪಾಯಿ ಇಳಿಕೆ ಕಂಡು, 35,166 ಕೋಟಿ ರೂಪಾಯಿಗೆ ತಲುಪಿದೆ.

ಏಪ್ರಿಲ್ 17ರಂದು ವಹಿವಾಟಿನ ಆರಂಭದಲ್ಲಿ ಸೆನ್ಸೆಕ್ಸ್ 541.23 ಪಾಯಿಂಟ್ ಅಥವಾ ಶೇ.0.90ರಷ್ಟು ಇಳಿಕೆಯಾಗಿ, 59,889.77ಕ್ಕೆ ತಲುಪಿದೆ. ಆದರೆ ನಿಫ್ಟಿ ಲಾಭದೊಂದಿಗೆ ವಹಿವಾಟು ಆರಂಭ ಮಾಡಿದೆ. ನಿಫ್ಟಿ 135.70 ಅಂಕ, ಶೇ.0.76ರಷ್ಟು ಇಳಿಕೆಯಾಗಿ 17,692.30ಕ್ಕೆ ತಲುಪಿದೆ. 1059 ಷೇರುಗಳು ಏರಿಕೆಯಾಗಿದ್ದರೆ, 1143 ಷೇರುಗಳು ಇಳಿಕೆಯಾಗಿದೆ. 168 ಷೇರುಗಳು ಸ್ಥಿರವಾಗಿದೆ. ಇನ್ಫೋಸಿಸ್, ಟೆಕ್ ಮಹೀಂದ್ರಾ, ವಿಪ್ರೋ, ಎಚ್‌ಸಿಎಲ್ ಟೆಕ್, ಟಿಸಿಎಸ್ ಸ್ಟಾಕ್‌ಗಳು ಇಳಿಕೆಯಾಗಿದೆ.
ಸೋಮವಾರ, ಏಪ್ರಿಲ್ 17ರಂದು ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ 520.25 ಪಾಯಿಂಟ್ ಅಥವಾ ಶೇ.0.86ರಷ್ಟು ಇಳಿಕೆಯಾಗಿ, 59,910.75ಕ್ಕೆ ತಲುಪಿದೆ. ಆದರೆ ನಿಫ್ಟಿ ಲಾಭದೊಂದಿಗೆ ವಹಿವಾಟು ಆರಂಭ ಮಾಡಿದೆ. ನಿಫ್ಟಿ 121.20 ಅಂಕ, ಶೇ.0.86ರಷ್ಟು ಇಳಿಕೆಯಾಗಿ 17,706.80ಕ್ಕೆ ತಲುಪಿದೆ. 1,747 ಷೇರುಗಳು ಏರಿಕೆಯಾಗಿದ್ದರೆ, 1739 ಷೇರುಗಳು ಇಳಿಕೆಯಾಗಿದೆ. 180 ಷೇರುಗಳು ಸ್ಥಿರವಾಗಿದೆ. ಪ್ರಮುಖವಾಗಿ ಇನ್ಫೋಸಿಸ್, ಟೆಕ್ ಮಹೀಂದ್ರಾ, ಎಚ್‌ಸಿಎಲ್ ಟೆಕ್ನಾಲಜೀಸ್, ಎನ್‌ಟಿಪಿಸಿ ಸ್ಟಾಕ್‌ಗಳು ಭಾರೀ ನಷ್ಟವನ್ನು ಕಂಡಿದೆ.
ಸೆನ್ಸೆಕ್ಸ್ ಟಾಪ್ ಗೇನರ್
ನೆಸ್ಲೆ: ಶೇಕಡ 4.03
ಪವರ್‌ಗ್ರಿಡ್‌ಕಾರ್ಪ್: ಶೇಕಡ 2.14
ಎಸ್‌ಬಿಐ ಇನ್ಶೂರೆನ್ಸ್: ಶೇಕಡ 2.04
ಕೋಟಕ್ ಮಹೀಂದ್ರಾ ಬ್ಯಾಂಕ್: ಶೇಕಡ 1.45
ಇಂಡಸ್‌ಇಂಡ್ ಬ್ಯಾಂಕ್: ಶೇಕಡ 1.37
ಅಲ್ಟ್ರಾಟೆಕ್ ಸಿಮೆಂಟ್: ಶೇಕಡ 1.26
ಸೆನ್ಸೆಕ್ಸ್ ಟಾಪ್ ಲೂಸರ್
ಇನ್ಫೋಸಿಸ್: ಶೇಕಡ -9.40
ಟೆಕ್ ಮಹೀಂದ್ರಾ: ಶೇಕಡ -5.25
ಎಚ್‌ಸಿಎಲ್ ಟೆಕ್: ಶೇಕಡ -2.72
ಎನ್‌ಟಿಪಿಸಿ: ಶೇಕಡ -2.02
ಎಲ್&ಟಿ: ಶೇಕಡ -1.98
ವಿಪ್ರೋ: ಶೇಕಡ -1.81
ನಿಫ್ಟಿ ಟಾಪ್ ಗೇನರ್
ನೆಸ್ಲೆ: ಶೇಕಡ 3.90
ಪವರ್‌ಗ್ರಿಡ್‌ಕಾರ್ಪ್: ಶೇಕಡ 2.16
ಎಸ್‌ಬಿಐ ಇನ್ಶೂರೆನ್ಸ್: ಶೇಕಡ 2.15
ಬ್ರಿಟಾನಿಯಾ: ಶೇಕಡ 1.98
ಕೋಲ್ ಇಂಡಿಯಾ: ಶೇಕಡ 1.66
ಹಿಂಡಾಲ್ಕೊ: ಶೇಕಡ 1.53
ಎಸ್‌ಬಿಐ ಲೈಫ್: ಶೇಕಡ 1.47
ನಿಫ್ಟಿ ಟಾಪ್ ಲೂಸರ್
ಇನ್ಫೋಸಿಸ್: ಶೇಕಡ -9.37
ಟೆಕ್ ಮಹೀಂದ್ರಾ: ಶೇಕಡ -5.18
ಎಚ್‌ಸಿಎಲ್ ಟೆಕ್: ಶೇಕಡ -2.76
ಎಲ್&ಟಿ: ಶೇಕಡ -2.03
ಎನ್‌ಟಿಪಿಸಿ: ಶೇಕಡ -1.91
ವಿಪ್ರೋ: ಶೇಕಡ -1.79
ರೋಹನ್ ಮೂರ್ತಿ ಎಲ್‌ಐಸಿ ಸಂಸ್ಥೆಯಲ್ಲಿ 8,444.47 ಕೋಟಿ ರೂಪಾಯಿ ಮೌಲ್ಯದ ಷೇರನ್ನು ಹೊಂದಿದ್ದಾರೆ. ಆದರೆ ಈ ಷೇರು ಮೌಲ್ಯ 844 ಕೋಟಿ ರೂಪಾಯಿ ಕುಸಿತವಾಗಿ, 7,600 ಕೋಟಿ ರೂಪಾಯಿಗೆ ತಲುಪಿದೆ. ಅಕ್ಷತ ಮೂರ್ತಿಯು ಈ ಬೆಂಗಳೂರು ಮೂಲದ ಸಂಸ್ಥೆಯಲ್ಲಿ ಶೇಕಡ 1.07ರಷ್ಟು ಷೇರನ್ನು ಹೊಂದಿದ್ದು, ಗುರುವಾರ ವೇಳೆಗೆ ಷೇರು ಮೌಲ್ಯ 5,409.58 ಕೋಟಿ ರೂಪಾಯಿ ಆಗಿದೆ.
ನಾರಾಯಣ ಮೂರ್ತಿಯ ಪತ್ನಿ ಸುಧಾ ಎನ್ ಮೂರ್ತಿ ಇನ್ಫೋಸಿಸ್‌ನಲ್ಲಿ ಗುರುವಾರದ ವೇಳೆಗೆ ಒಟ್ಟಾಗಿ ಶೇಕಡ 0.95ರಷ್ಟು ಷೇರನ್ನು ಅಥವಾ 4,797.69 ಕೋಟಿ ರೂಪಾಯಿ ಹೊಂದಿದ್ದಾರೆ. ಈ ಮೌಲ್ಯವು ಸೋಮವಾರದ ವೇಳೆಗೆ 480 ಕೋಟಿ ರೂಪಾಯಿ ಕುಸಿದು 4317.96 ಕೋಟಿ ರೂಪಾಯಿಗೆ ತಲುಪಿದೆ. ಇನ್ನು ನಾರಾಯಣ ಮೂರ್ತಿ ಇನ್ಫೋಸಿಸ್‌ನಲ್ಲಿ ಒಟ್ಟಾಗಿ ಶೇಕಡ 0.46ರಷ್ಟು ಇದ್ದು, ಗುರುವಾರದ ವೇಳೆಗೆ 2,080 ಕೋಟಿ ರೂಪಾಯಿ ಆಗಿದೆ. ಆದರೆ ಸೋಮವಾರ 231.12 ಕೋಟಿ ರೂಪಾಯಿ ಇಳಿಕೆ ಕಂಡು, 2,311.41 ಕೋಟಿ ರೂಪಾಯಿಗೆ ತಲುಪಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications