ಭಾರತೀಯ ಷೇರು ಮಾರುಕಟ್ಟೆಯಲ್ಲಿ ನಷ್ಟವು ಮುಂದುವರಿದಿದೆ, ಸ್ಟಾಕ್ ಮಾರುಕಟ್ಟೆ ಭಾರೀ ಇಳಿಕೆಯನ್ನು ಕಂಡಿದೆ. ಇಂದು ಆರಂಭಿಕ ವಹಿವಾಟಿನಲ್ಲಿ ನಷ್ಟದೊಂದಿಗೆ ಪ್ರಾರಂಭವಾದ ಟ್ರೇಡಿಂಗ್ ನಷ್ಟದೊಂದಿಗೆಯೇ ವಹಿವಾಟು ಅಂತ್ಯಗೊಳಿಸಿದೆ. ಮಂಗಳವಾರ ಆರಂಭಿಕ ವಹಿವಾಟಿನ ಸೆನ್ಸೆಕ್ಸ್ 114.36 ಪಾಯಿಂಟ್ ಅಥವಾ ಶೇ.0.20ರಷ್ಟು ಕುಸಿದು, 58,123.49ಕ್ಕೆ ತಲುಪಿದೆ. ನಿಫ್ಟಿ 32 ಅಂಕ, ಶೇ.0.19ರಷ್ಟು ಇಳಿದು 17,122.30ಕ್ಕೆ ತಲುಪಿದೆ. 1033 ಷೇರುಗಳು ಏರಿಕೆಯಾಗಿದ್ದರೆ, 901 ಷೇರುಗಳು ಇಳಿಕೆಯಾಗಿದೆ. 105 ಷೇರುಗಳು ಸ್ಥಿರವಾಗಿದೆ.
ಇನ್ನು ಮಂಗಳವಾರ ವಹಿವಾಟಿನ ಅಂತ್ಯದ ವೇಳೆಗೆ ಸೆನ್ಸೆಕ್ಸ್ 337.66 ಪಾಯಿಂಟ್ ಅಥವಾ ಶೇ.0.58ರಷ್ಟು ಕುಸಿದು, 57,900.19ಕ್ಕೆ ತಲುಪಿದೆ. ನಿಫ್ಟಿ 111.00 ಅಂಕ, ಶೇ.0.65ರಷ್ಟು ಇಳಿದು 17,043.30ಕ್ಕೆ ತಲುಪಿದೆ. 1173 ಷೇರುಗಳು ಏರಿಕೆಯಾಗಿದ್ದರೆ, 2257 ಷೇರುಗಳು ಇಳಿಕೆಯಾಗಿದೆ. 109 ಷೇರುಗಳು ಸ್ಥಿರವಾಗಿದೆ. ಪ್ರಮುಖವಾಗಿ ಅದಾನಿ ಸ್ಟಾಕ್‌ಗಳು ಭಾರೀ ಇಳಿಕೆಯಾಗಿದೆ, ಹಿಂಡನ್‌ಬರ್ಗ ವರದಿಯ ಬಳಿಕ ಅದಾನಿ ಸ್ಟಾಕ್ ಕುಸಿತ ಕಾಣುತ್ತಿದ್ದು, ಅದು ಮುಂದುವರಿದಿದೆ, ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ, ಮುಂದೆ ಓದಿ...

ಎಲ್ಲ ಅದಾನಿ ಸ್ಟಾಕ್‌ಗಳು ಇಳಿಕೆ
ಈ ಸಮಯಕ್ಕೆ ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಶೇಕಡ 7.70ರಷ್ಟು ಇಳಿಕೆಯಾಗಿ 1,730.00 ರೂಪಾಯಿಗೆ ತಲುಪಿದೆ. ಅದಾನಿ ವಿಲ್ಮಾರ್ ಸ್ಟಾಕ್ ಶೇಕಡ 4.99ರಷ್ಟು ಇಳಿಕೆಯಾಗಿ, 413.75 ರೂಪಾಯಿಗೆ ತಲುಪಿದೆ. ಅದಾನಿ ಪೋರ್ಟ್ಸ್ ಶೇಕಡ 4.07ರಷ್ಟು ಕುಸಿದು, 653.50 ರೂಪಾಯಿಗೆ ತಲುಪಿದೆ. ಅಂಬುಜಾ ಸಿಮೆಂಟ್ ಸ್ಟಾಕ್ ಶೇಕಡ 3.91ರಷ್ಟು ಇಳಿಕೆಯಾಗಿದ್ದು, 353.60 ರೂಪಾಯಿಗೆ ತಲುಪಿದೆ.
ಎಸಿಸಿ ಶೇಕಡ 1.58ರಷ್ಟು ಇಳಿದು, 1,742.00 ರೂಪಾಯಿಗೆ ತಲುಪಿದೆ. ಇನ್ನು ಅದಾನಿಯ 5 ಸ್ಟಾಕ್‌ಗಳಾದ ಅದಾನಿ ಟ್ರಾನ್ಸ್‌ಮಿಷನ್ ಶೇಕಡ 5.00ರಷ್ಟು ಹೆಚ್ಚಾಗಿ, 902.20 ರೂಪಾಯಿಗೆ ತಲುಪಿದೆ. ಅದಾನಿ ಟೋಟಲ್ ಗ್ಯಾಸ್ ಶೇ.5.00ರಷ್ಟು ಇಳಿದು 947.20 ರೂಪಾಯಿ ಆಗಿದೆ. ಅದಾನಿ ಗ್ರೀನ್ ಎನರ್ಜಿ ಶೇ.0.67ರಷ್ಟು ಕುಸಿದು, 712.00ಕ್ಕೆ ತಲುಪಿದೆ. ಎನ್‌ಡಿಟಿವಿ ಶೇಕಡ 5.00ರಷ್ಟು ಕುಗ್ಗಿ 211.10 ರೂಪಾಯಿಗೆ ಮತ್ತು ಅದಾನಿ ಪವರ್ ಶೇಕಡ 5.00ರಷ್ಟು ಇಳಿಕೆಯಾಗಿ 204.35 ರೂಪಾಯಿಗೆ ತಲುಪಿದೆ.
ಸೆನ್ಸೆಕ್ಸ್ ಟಾಪ್ ಗೇನರ್
ಟೈಟಾನ್ ಸಂಸ್ಥೆ: ಶೇಕಡ 1.17
ಭಾರ್ತಿ ಏರ್‌ಟೆಲ್: ಶೇಕಡ 0.80
ಎಲ್&ಟಿ: ಶೇಕಡ 0.65
ಸನ್ ಫಾರ್ಮಾ: ಶೇಕಡ 0.60
ಐಸಿಐಸಿಐ ಬ್ಯಾಂಕ್: ಶೇಕಡ 0.39
ಆಕ್ಸಿಸ್ ಬ್ಯಾಂಕ್: ಶೇಕಡ 0.38
ಸೆನ್ಸೆಕ್ಸ್ ಟಾಪ್ ಲೂಸರ್
ಎಂ&ಎಂ: ಶೇಕಡ -2.92
ಟಿಸಿಎಸ್: ಶೇಕಡ -2.00
ಬಜಾಜ್ ಫೈನಾನ್ಸ್: ಶೇಕಡ -1.91
ವಿಪ್ರೋ: ಶೇಕಡ -1.75
ಕೋಟಕ್ ಬ್ಯಾಂಕ್: ಶೇಕಡ -1.60
ನಿಫ್ಟಿ ಟಾಪ್ ಗೇನರ್
ಟೈಟಾನ್ ಕಂಪನಿ: ಶೇಕಡ 1.24
ಬಿಪಿಸಿಎಲ್: ಶೇಕಡ 1.18
ಎಲ್&ಟಿ: ಶೇಕಡ 0.88
ಭಾರ್ತಿ ಏರ್‌ಟೆಲ್: ಶೇಕಡ 0.70
ಸನ್ ಫಾರ್ಮಾ: ಶೇಕಡ 0.58
ಎಸ್‌ಬಿಐ ಲೈಫ್: ಶೇಕಡ 0.52
ನಿಫ್ಟಿ ಟಾಪ್ ಲೂಸರ್
ಅದಾನಿ ಎಂಟರ್‌ಪ್ರೈಸಸ್: ಶೇಕಡ -7.70
ಅದಾನಿ ಪವರ್: ಶೇಕಡ -4.07
ಎಂ&ಎಂ: ಶೇಕಡ -2.83
ಟಿಸಿಎಸ್: ಶೇಕಡ -1.84
ಎಚ್‌ಡಿಎಫ್‌ಸಿ ಲೈಫ್: ಶೇಕಡ -1.64
ಬಜಾಜ್ ಫೈನಾನ್ಸ್: ಶೇಕಡ -1.62
ಕೋಟಕ್ ಬ್ಯಾಂಕ್: ಶೇಕಡ -1.56


Click it and Unblock the Notifications