For Quick Alerts
ALLOW NOTIFICATIONS  
For Daily Alerts

Closing Bell: ಸೆನ್ಸೆಕ್ಸ್ 382 ಪಾಯಿಂಟ್ಸ್‌ ಏರಿಕೆ, ನಿಫ್ಟಿ 114 ಪಾಯಿಂಟ್ಸ್ ಹೆಚ್ಚಳ

|

ಭಾರತೀಯ ಷೇರುಪೇಟೆಯು ಗುರುವಾರ ಜಾಗತಿಕ ಸಕಾರಾತ್ಮಕ ಸೂಚನೆಗಳ ಹಿನ್ನೆಲೆಯಲ್ಲಿ ಏರಿಕೆ ದಾಖಲಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 382 ಪಾಯಿಂಟ್ಸ್‌ ಜಿಗಿದಿದ್ದು, ನಿಫ್ಟಿ 114 ಪಾಯಿಂಟ್ಸ್‌ ಹೆಚ್ಚಳಗೊಂಡಿದೆ.

 

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಶೇಕಡಾ 0.74 ಅಥವಾ 382.95 ಪಾಯಿಂಟ್ಸ್‌ ಏರಿಕೆಗೊಂಡು 52232.43 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್ಇ ಸೂಚ್ಯಂಕ ನಿಫ್ಟಿ ಶೇಕಡಾ 0.73 ಅಥವಾ 114.15 ಪಾಯಿಂಟ್ಸ್ ಹೆಚ್ಚಾಗಿ 15690.35 ಪಾಯಿಂಟ್ಸ್‌ ಮುಟ್ಟಿದೆ.

 
ಸೆನ್ಸೆಕ್ಸ್ 382 ಪಾಯಿಂಟ್ಸ್‌ ಏರಿಕೆ, ನಿಫ್ಟಿ 114 ಪಾಯಿಂಟ್ಸ್ ಹೆಚ್ಚಳ

ದಿನದ ವಹಿವಾಟು ಅಂತ್ಯಕ್ಕೆ ಇಂದು ಸುಮಾರು 2,136 ಷೇರುಗಳು ಏರಿಕೆಗೊಂಡರೆ, 973 ಷೇರುಗಳು ಕುಸಿದವು, ಮತ್ತು 134 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆಯಿಲ್ಲ.

ಟೈಟಾನ್ ಕಂಪನಿ, ಒಎನ್‌ಜಿಸಿ, ಈಚರ್ ಮೋಟಾರ್ಸ್, ಲಾರ್ಸೆನ್ ಮತ್ತು ಟೌಬ್ರೊ ಮತ್ತು ಆಕ್ಸಿಸ್ ಬ್ಯಾಂಕ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಇಂಡಸ್‌ಇಂಡ್ ಬ್ಯಾಂಕ್, ವಿಪ್ರೊ, ಡಾ. ರೆಡ್ಡೀಸ್ ಲ್ಯಾಬ್, ಸಿಪ್ಲಾ ಮತ್ತು ಬಜಾಜ್ ಆಟೋ ನಷ್ಟಗೊಂಡಿವೆ.

ಇನ್ನು ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರೂಪಾಯಿ ಡಾಲರ್ ಎದುರು ದಿನದ ಗರಿಷ್ಠ 72.91 ಕ್ಕೆ ಕೊನೆಗೊಂಡಿತು.

English summary

Closing Bell: Sensex Nifty End At Record High

Sensex was up 382.95 points or 0.74% at 52232.43, and the Nifty was up 114.20 points or 0.73% at 15690.40.
Story first published: Thursday, June 3, 2021, 15:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X