ಭಾರತೀಯ ಷೇರುಪೇಟೆ ಮಂಗಳವಾರ (ಜೂನ್ 01) ಸಕಾರಾತ್ಮಕ ಆರಂಭ ಪಡೆದು ಸಾಕಷ್ಟು ಏರಿಳಿತಗಳ ನಡುವೆ ದಿನದ ವಹಿವಾಟು ಅಂತ್ಯಕ್ಕೆ ಕೊಂಚ ಇಳಿಕೆಗೊಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 2.56 ಪಾಯಿಂಟ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆ ನಿಫ್ಟಿ 7.90 ಪಾಯಿಂಟ್ಸ್ ಕುಸಿದಿದೆ.
ಬಿಎಸ್‌ಇ ಸೆನ್ಸೆಕ್ಸ್ 2.56 ಪಾಯಿಂಟ್ಸ್‌ಕುಸಿತದೊಂದಿಗೆ 51934.88 ಪಾಯಿಂಟ್‌ಗಳ ಮಟ್ಟದಲ್ಲಿ ಮುಚ್ಚಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 7.90 ಪಾಯಿಂಟ್ ಇಳಿಕೆಗೊಂಡು 15574.90 ಪಾಯಿಂಟ್‌ಗಳ ಕುಸಿತ ಕಂಡಿದೆ.

ಬಿಎಸ್‌ಇಯಲ್ಲಿ ಇಂದು ಒಟ್ಟು 3,470 ಕಂಪನಿಗಳು ವಹಿವಾಟು ನಡೆಸಿದ್ದು, ಈ ಪೈಕಿ ಸುಮಾರು 1,303 ಷೇರುಗಳು ಏರಿಕೆಗೊಂಡರೆ, 1,782 ಷೇರುಗಳು ಕುಸಿದಿವೆ ಮತ್ತು 119 ಷೇರು ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ.
ಅದಾನಿ ಪೋರ್ಟ್ಸ್, ಒಎನ್‌ಜಿಸಿ, ಬಜಾಜ್ ಫೈನಾನ್ಸ್, ಎಸ್‌ಬಿಐ ಮತ್ತು ಬಜಾಜ್ ಆಟೋಗಳು ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಜೆಎಸ್‌ಡಬ್ಲ್ಯೂ ಸ್ಟೀಲ್, ಟಾಟಾ ಸ್ಟೀಲ್, ಅಲ್ಟ್ರಾಟೆಕ್ ಸಿಮೆಂಟ್, ಐಸಿಐಸಿಐ ಬ್ಯಾಂಕ್ ಮತ್ತು ಗ್ರಾಸಿಮ್ ಇಂಡಸ್ಟ್ರೀಸ್ ನಷ್ಟಗೊಂಡಿವೆ.
ಬ್ಯಾಂಕ್, ಆಟೋ ಮತ್ತು ಲೋಹದ ಕ್ಷೇತ್ರಗಳು ಕೆಂಪು ಬಣ್ಣದಲ್ಲಿ ಕೊನೆಗೊಂಡಿವೆ. ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇ 0.3 ರಷ್ಟು ಕುಸಿದಿದೆ.
ಇನ್ನು ದೇಶಿಯ ಈಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿ ಮಧ್ಯೆ ಭಾರತೀಯ ರೂಪಾಯಿ 28 ಪೈಸೆ ಕುಸಿತಗೊಂಡು 72.90 ರೂಪಾಯಿಗೆ ತಲುಪಿದೆ.


Click it and Unblock the Notifications