ಷೇರು ಮಾರುಕಟ್ಟೆಯಲ್ಲಿ ಆರಂಭಿಕ ವಹಿವಾಟಿನಲ್ಲಿ ಸ್ಟಾಕ್‌ಗಳು ಕುಸಿದಿದ್ದರೆ, ವಹಿವಾಟಿನ ಅಂತ್ಯದ ವೇಳೆ ಸ್ಟಾಕ್‌ಗಳು ಕೊಂಚ ಏರಿಕೆಯಾಗಿದೆ. ಪ್ರಮುಖವಾಗಿ ಕ್ರೆಡಿಟ್ ಸ್ಯೂಸ್ ಬ್ಯಾಂಕ್‌ನಲ್ಲಿ ಬೆಳವಣಿಗೆಯು ಭಾರತೀಯ ಷೇರುಪೇಟೆಯ ಮೇಲೆ ಪ್ರಭಾವ ಉಂಟು ಮಾಡಿದೆ. ಸಾಮಾನ್ಯವಾಗಿ ಷೇರುಪೇಟೆ ಮೇಲೆ ದೇಶದಲ್ಲಿನ ಬೆಳವಣಿಗೆ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಬೆಳವಣಿಗೆಯೂ ಪ್ರಭಾವ ಬೀರುತ್ತದೆ. ಗುರುವಾರ ಆರಂಭಿಕ ವಹಿವಾಟಿನ ಸೆನ್ಸೆಕ್ಸ್ 90.13 ಪಾಯಿಂಟ್ ಅಥವಾ ಶೇ.0.16ರಷ್ಟು ಕುಸಿದು, 57,465.77ಕ್ಕೆ ತಲುಪಿದೆ. ನಿಫ್ಟಿ 23.20 ಅಂಕ, ಶೇ.0.14ರಷ್ಟು ಇಳಿದು 16,949ಕ್ಕೆ ತಲುಪಿದೆ. 797 ಷೇರುಗಳು ಏರಿಕೆಯಾಗಿದ್ದರೆ, 987 ಷೇರುಗಳು ಇಳಿಕೆಯಾಗಿದೆ. 113 ಷೇರುಗಳು ಸ್ಥಿರವಾಗಿದೆ.
ಮಂಗಳವಾರ ವಹಿವಾಟಿನ ಅಂತ್ಯದ ವೇಳೆಗೆ ಸೆನ್ಸೆಕ್ಸ್ 78.94 ಪಾಯಿಂಟ್ ಅಥವಾ ಶೇ.0.14ರಷ್ಟು ಏರಿಕೆಯಾಗಿ, 57,634.84ಕ್ಕೆ ತಲುಪಿದೆ. ನಿಫ್ಟಿ 13.40 ಅಂಕ, ಶೇ.0.08ರಷ್ಟು ಹೆಚ್ಚಳವಾಗಿ 16,985.60ಕ್ಕೆ ತಲುಪಿದೆ. 1377 ಷೇರುಗಳು ಏರಿಕೆಯಾಗಿದ್ದರೆ, 2062 ಷೇರುಗಳು ಇಳಿಕೆಯಾಗಿದೆ. 107 ಷೇರುಗಳು ಸ್ಥಿರವಾಗಿದೆ. ಹಲವಾರು ಸಮಯಗಳಿಂದ ಇಳಿಯುತ್ತಿದ್ದ ಅದಾನಿ ಸ್ಟಾಕ್‌ಗಳು ಪ್ರಮುಖವಾಗಿ ಹೆಚ್ಚಳವಾಗಿದೆ, ಹಿಂಡನ್‌ಬರ್ಗ ವರದಿಯ ಬಳಿಕ ಅದಾನಿ ಸ್ಟಾಕ್ ಕುಸಿತ ಕಾಣುತ್ತಿದ್ದು, ಈಗ ಹೆಚ್ಚಳವಾಗುತ್ತಿದೆ, ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ, ಮುಂದೆ ಓದಿ...

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೆಹ್ತಾ ಈಕ್ವಿಟೀಸ್ ಲಿಮಿಟೆಡ್‌ನ ಹಿರಿಯ ಸಂಶೋಧಕ ಪ್ರಶಾಂತ್ ತಾಪ್ಸೆ, "ನಿಫ್ಟಿ ಕನಿಷ್ಠ 16850ಕ್ಕೆ ಇಳಿದರೆ, ನಿಫ್ಟಿ ಗರಿಷ್ಠ 17062ಕ್ಕೆ ಏರಿದೆ. ಬುಧವಾರ ಷೇರುಪೇಟೆಯು ಎಷ್ಟು ಅಂಕದಲ್ಲಿ ಅಂತ್ಯವಾಗಿದೆಯೋ ಸರಿಸುಮಾರು ಅಷ್ಟೇ ಅಂಕದಲ್ಲಿ ಗುರುವಾರ ಅಂತ್ಯವಾಗಿದೆ. ಕಚ್ಚಾ ತೈಲ ಬೆಲೆಗಳು ಶೇಕಡ 5ರಷ್ಟು ಕಡಿಮೆಯಾಗಿದೆ. ಇದು ಭಾರತದ ಆರ್ಥಿಕತೆಗೆ ಉತ್ತಮ ಸುದ್ದಿಯಾಗಿದೆ. ಜಾಗತಿಕ ಮಾರುಕಟ್ಟೆಯನ್ನು ನೋಡಿದಾಗ ಸಣ್ಣ ಜಿಗಿತ ಸಾಧ್ಯತೆಯಿದೆ," ಎಂದು ತಿಳಿಸಿದ್ದಾರೆ.
ತಜ್ಞರು ಹೇಳುವುದು ಏನು ತಿಳಿಯಿರಿ
ತಾಂತ್ರಿಕವಾಗಿ, ಮಾರುಕಟ್ಟೆಯು ಅತಿಯಾಗಿ ಮಾರಾಟವಾಗಿದೆ, ಮತ್ತು ನಾವು 16800-16750 ಬೆಂಬಲದೊಂದಿಗೆ 17200 ವರೆಗೆ ಬೌನ್ಸ್ ಅನ್ನು ನೋಡಬಹುದು. ಜಾಗತಿಕ ಮಾರುಕಟ್ಟೆಯನ್ನು ನೋಡಿದಾಗ, ಸಣ್ಣ ಪುಟಿಯುವ ಸಾಧ್ಯತೆಯಿದೆ, ಆದರೆ ಒಟ್ಟಾರೆ ಪ್ರವೃತ್ತಿಯು ಕರಡಿಯಾಗಿ ಉಳಿದಿದೆ. ಆದಾಗ್ಯೂ ಧನಾತ್ಮಕ ಟೇಕ್ಅವೇ ಎಂದರೆ ನಿಫ್ಟಿ ಐದು ದಿನಗಳ ನಷ್ಟದ ಸರಣಿಯನ್ನು ಸ್ನ್ಯಾಪ್ ಮಾಡಿತು. ಬ್ಯಾಂಕ್ ನಿಫ್ಟಿ ಕೂಡ ಚುಕ್ಕೆಗಳ ರೇಖೆಗಳಿಗಿಂತ ಸ್ವಲ್ಪಮಟ್ಟಿಗೆ 0.21% ರಷ್ಟು ಏರಿಕೆಯಾಗಿದೆ. ನಿಫ್ಟಿ ಮೆಟಲ್ಸ್ ಸೂಚ್ಯಂಕವು ಆರ್ಥಿಕ ಹಿಂಜರಿತದ ಭಯದಿಂದ 2.32% ನಷ್ಟು ಕುಸಿದಿದೆ ಎಂದು ಪ್ರಶಾಂತ್ ತಾಪ್ಸೆ ಹೇಳಿದರು - ರಿಸರ್ಚ್ ವಿಶ್ಲೇಷಕ, ಹಿರಿಯ ವಿಪಿ (ಸಂಶೋಧನೆ), ಮೆಹ್ತಾ ಈಕ್ವಿಟೀಸ್ ಲಿಮಿಟೆಡ್.
ಸೆನ್ಸೆಕ್ಸ್ ಟಾಪ್ ಗೇನರ್
ನೆಸ್ಲೆ ಇಂಡಿಯಾ: ಶೇಕಡ 2.54
ಟೈಟಾನ್ ಸಂಸ್ಥೆ: ಶೇಕಡ 2.37
ಏಷ್ಯನ್ ಪೇಂಟ್ಸ್: ಶೇಕಡ 2.32
ಎಚ್‌ಯುಎಲ್: ಶೇಕಡ 2.27
ಸನ್ ಫಾರ್ಮಾ: ಶೇಕಡ 1.84
ಸೆನ್ಸೆಕ್ಸ್ ಟಾಪ್ ಲೂಸರ್
ಟಾಟಾ ಸ್ಟೀಲ್ಸ್: ಶೇಕಡ -3.31
ಇಂಡಸ್‌ಇಂಡ್ ಬ್ಯಾಂಕ್: ಶೇಕಡ -2.31
ಇನ್ಫೋಸಿಸ್: ಶೇಕಡ -0.93
ವಿಪ್ರೋ: ಶೇಕಡ -0.81
ಎಚ್‌ಸಿಎಲ್ ಟೆಕ್: ಶೇಕಡ -0.70
ನಿಫ್ಟಿ ಟಾಪ್ ಗೇನರ್
ಅದಾನಿ ಎಂಟರ್‌ಪ್ರೈಸಸ್: ಶೇಕಡ 5.74
ಅದಾನಿ ಪೋರ್ಟ್ಸ್: ಶೇಕಡ 4.19
ಏಷ್ಯನ್ ಪೇಂಟ್ಸ್: ಶೇಕಡ 3.11
ಟಾಟಾ ಸ್ಟೀಲ್: ಶೇಕಡ 2.16
ಟೈಟಾನ್ ಕಂಪನಿ: ಶೇಕಡ 1.88
ಬಿಪಿಸಿಎಲ್: ಶೇಕಡ 1.47
ನಿಫ್ಟಿ ಟಾಪ್ ಲೂಸರ್
ಭಾರ್ತಿ ಏರ್‌ಟೆಲ್: ಶೇಕಡ -1.92
ಇಂಡಸ್‌ಇಂಡ್ ಬ್ಯಾಂಕ್: ಶೇಕಡ -1.90
ರಿಲಯನ್ಸ್: ಶೇಕಡ -1.69
ಎಚ್‌ಯುಎಲ್: ಶೇಕಡ -1.45
ಎಸ್‌ಬಿಐ ಇನ್ಶೂರೆನ್ಸ್: ಶೇಕಡ -1.45


Click it and Unblock the Notifications