ಭಾರತೀಯ ಷೇರು ಮಾರುಕಟ್ಟೆಯು ಗುರುವಾರ ಕೊಂಚ ಏರಿಕೆಯನ್ನು ಕಂಡಿದೆ. ಆದರೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಜಿಗಿತವನ್ನು ಷೇರು ಪೇಟೆ ಹೊಂದಿಲ್ಲ. ನಿನ್ನ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 59,567.80ಕ್ಕೆ ವಹಿವಾಟು ಅಂತ್ಯ ಮಾಡಿದ್ದು, ಇಂದು ಆರಂಭವಾಗಿ, 59,586.61ರಲ್ಲಿ ವಹಿವಾಟಿಗೆ ಇಳಿದಿದೆ. ಆದರೆ ವಹಿವಾಟಿನ ಮಧ್ಯದಲ್ಲಿ ಒಮ್ಮೆ ಗರಿಷ್ಠ ಮಟ್ಟ 59,836.79ಕ್ಕೆ ಏರಿದರೆ, ಮತ್ತೊಮ್ಮೆ ಕನಿಷ್ಠ ಮಟ್ಟ 59,489.98ಕ್ಕೆ ಇಳಿಕೆಯಾಗಿದೆ.
ಏಪ್ರಿಲ್ 20ರಂದು ವಹಿವಾಟಿನ ಆರಂಭದಲ್ಲಿ ಸೆನ್ಸೆಕ್ಸ್ 26.97 ಪಾಯಿಂಟ್ ಅಥವಾ ಶೇ.0.05ರಷ್ಟು ಏರಿಕೆಯಾಗಿ, 59,594.77ಕ್ಕೆ ತಲುಪಿದೆ. ಆದರೆ ನಿಫ್ಟಿ ಲಾಭದೊಂದಿಗೆ ವಹಿವಾಟು ಆರಂಭ ಮಾಡಿದೆ. ನಿಫ್ಟಿ ಶೇಕಡ 0.60ರಷ್ಟು ಇಳಿಕೆಯಾಗಿ 17,618.20ಕ್ಕೆ ತಲುಪಿದೆ. 1170 ಷೇರುಗಳು ಏರಿಕೆಯಾಗಿದ್ದರೆ, 588 ಷೇರುಗಳು ಇಳಿಕೆಯಾಗಿದೆ. 100 ಷೇರುಗಳು ಸ್ಥಿರವಾಗಿದೆ. ಆರಂಭಿಕವಾಗಿ ಅದಾನಿ ಪೋರ್ಟ್ಸ್, ಅಲ್ಟ್ರಾಟೆಕ್ ಸಿಮೆಂಟ್, ಟೈಟಾನ್ ಕಂಪನಿ, ಬಜಾಜ್ ಫಿನ್‌ಸರ್ವ್ ಬಿಪಿಸಿಎಲ್ ನಷ್ಟವನ್ನು ಕಂಡಿದೆ.

ಗುರುವಾರ, ಏಪ್ರಿಲ್ 20ರಂದು ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ 64.55 ಪಾಯಿಂಟ್ ಅಥವಾ ಶೇ.0.11ರಷ್ಟು ಏರಿಕೆಯಾಗಿ, 59,632.35ಕ್ಕೆ ತಲುಪಿದೆ. ನಿಫ್ಟಿ 5.70 ಅಂಕ, ಶೇ.0.03ರಷ್ಟು ಇಳಿಕೆಯಾಗಿ 17,624.50ಕ್ಕೆ ತಲುಪಿದೆ. 1,853 ಷೇರುಗಳು ಏರಿಕೆಯಾಗಿದ್ದರೆ, 1,549 ಷೇರುಗಳು ಇಳಿಕೆಯಾಗಿದೆ. 129 ಷೇರುಗಳು ಸ್ಥಿರವಾಗಿದೆ. ಪ್ರಮುಖವಾಗಿ ಎನ್‌ಟಿಪಿಸಿ, ಅದಾನಿ ಪೋರ್ಟ್ಸ್, ಟಾಟಾ ಮೋಟರ್ಸ್, ಬಜಾಜ್ ಆಟೋ, ಏಷ್ಯನ್ ಪೇಂಟ್ಸ್ ಸ್ಟಾಕ್ ಲಾಭವನ್ನು ಕಂಡಿದೆ.
ಸೆನ್ಸೆಕ್ಸ್ ಟಾಪ್ ಗೇನರ್
ಏಷ್ಯನ್ ಪೇಂಟ್ಸ್: ಶೇಕಡ 1.49
ಎನ್‌ಟಿಪಿಸಿ: ಶೇಕಡ 1.35
ಟಾಟಾ ಮೋಟರ್ಸ್: ಶೇಕಡ 1.31
ಭಾರ್ತಿ ಏರ್‌ಟೆಲ್: ಶೇಕಡ 0.84
ಎಲ್&ಟಿ: ಶೇಕಡ 0.71
ಸೆನ್ಸೆಕ್ಸ್ ಟಾಪ್ ಲೂಸರ್
ಎಚ್‌ಯುಎಲ್: ಶೇಕಡ -1.22
ಸನ್ ಫಾರ್ಮಾ: ಶೇಕಡ -0.81
ಇನ್ಫೋಸಿಸ್: ಶೇಕಡ -0.68
ಅಲ್ಟ್ರಾಟೆಕ್ ಸಿಮೆಂಟ್: ಶೇಕಡ -0.63
ಬಜಾಜ್ ಫೈನಾನ್ಸ್: ಶೇಕಡ -0.61
ನೆಸ್ಲೆ ಇಂಡಿಯಾ: ಶೇಕಡ -0.53
ನಿಫ್ಟಿ ಟಾಪ್ ಗೇನರ್
ಎನ್‌ಟಿಪಿಸಿ: ಶೇಕಡ 1.50
ಅದಾನಿ ಪೋರ್ಟ್ಸ್: ಶೇಕಡ 1.46
ಏಷ್ಯನ್ ಪೇಂಟ್ಸ್: ಶೇಕಡ 1.43
ಬಜಾಜ್ ಆಟೋ: ಶೇಕಡ 1.34
ಟಾಟಾ ಮೋಟರ್ಸ್: ಶೇಕಡ 1.30
ಭಾರ್ತಿ ಏರ್‌ಟೆಲ್: ಶೇಕಡ 1.06
ಎಚ್‌ಡಿಎಫ್‌ಸಿ ಲೈಫ್: ಶೇಕಡ 0.95
ನಿಫ್ಟಿ ಟಾಪ್ ಲೂಸರ್
ದಿವೀಸ್ ಲ್ಯಾಬ್ಸ್: ಶೇಕಡ -4.03
ಎಚ್‌ಯುಎಲ್: ಶೇಕಡ -1.52
ಡಾ. ರೆಡ್ಡಿ: ಶೇಕಡ -1.21
ಈಚರ್ ಮೋಟರ್ಸ್: ಶೇಕಡ -1.20
ಹಿಂಡಾಲ್ಕೊ: ಶೇಕಡ -1.03
ಬ್ರಿಟಾನಿಯಾ: ಶೇಕಡ -1.02
ಏಪ್ರಿಲ್ 19ರಂದು ವಹಿವಾಟಿನ ಆರಂಭದಲ್ಲಿ ಸೆನ್ಸೆಕ್ಸ್ 79.57 ಪಾಯಿಂಟ್ ಅಥವಾ ಶೇ.0.13ರಷ್ಟು ಇಳಿಕೆಯಾಗಿ, 59,647.44ಕ್ಕೆ ತಲುಪಿದೆ. ಆದರೆ ನಿಫ್ಟಿ ಲಾಭದೊಂದಿಗೆ ವಹಿವಾಟು ಆರಂಭ ಮಾಡಿದೆ. ನಿಫ್ಟಿ 21.70 ಅಂಕ, ಶೇ.0.12ರಷ್ಟು ಇಳಿಕೆಯಾಗಿ 17,638.50ಕ್ಕೆ ತಲುಪಿದೆ. 1,168 ಷೇರುಗಳು ಏರಿಕೆಯಾಗಿದ್ದರೆ, 659 ಷೇರುಗಳು ಇಳಿಕೆಯಾಗಿದೆ.
ಹಾಗೆಯೇ ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ 159.21 ಪಾಯಿಂಟ್ ಅಥವಾ ಶೇ.0.27ರಷ್ಟು ಇಳಿಕೆಯಾಗಿ, 59,567.80ಕ್ಕೆ ತಲುಪಿದೆ. ನಿಫ್ಟಿ 41.40 ಅಂಕ, ಶೇ.0.23ರಷ್ಟು ಇಳಿಕೆಯಾಗಿ 17,618.80ಕ್ಕೆ ತಲುಪಿದೆ. 1,768 ಷೇರುಗಳು ಏರಿಕೆಯಾಗಿದ್ದರೆ, 1,650 ಷೇರುಗಳು ಇಳಿಕೆಯಾಗಿದೆ. 117 ಷೇರುಗಳು ಸ್ಥಿರವಾಗಿದೆ.


Click it and Unblock the Notifications