ಭಾರತದ ಷೇರು ಮಾರುಕಟ್ಟೆಯು ಮಾರ್ಚ್ 28ರಂದು ಏರಿಕೆಯೊಂದಿಗೆ ವಹಿವಾಟು ಆರಂಭ ಮಾಡಿದ್ದು, ವಹಿವಾಟಿನ ಅಂತ್ಯದಲ್ಲಿ ಷೇರುಪೇಟೆಯಲ್ಲಿ ಕರಡಿ ಕುಣಿತ ಕಂಡಿದೆ. ಪ್ರಮುಖವಾಗಿ ಅದಾನಿ ಗ್ರೂಪ್‌ನ ಬಹುತೇಕ ಎಲ್ಲ ಸ್ಟಾಕ್‌ಗಳು ಕೂಡಾ ರೆಡ್‌ಜೋನ್‌ನಲ್ಲಿದೆ. ಮಂಗಳವಾರ ಆರಂಭಿಕ ವಹಿವಾಟಿನ ಸೆನ್ಸೆಕ್ಸ್ 195.28 ಪಾಯಿಂಟ್ ಅಥವಾ ಶೇ.0.34ರಷ್ಟು ಏರಿಕೆಯಾಗಿ, 57,849.14ಕ್ಕೆ ತಲುಪಿದೆ. ನಿಫ್ಟಿ 54.10 ಅಂಕ, ಶೇ.0.32ರಷ್ಟು ಹೆಚ್ಚಳವಾಗಿ 17,039.80ಕ್ಕೆ ತಲುಪಿದೆ. 1023 ಷೇರುಗಳು ಏರಿಕೆಯಾಗಿದ್ದರೆ, 723 ಷೇರುಗಳು ಇಳಿಕೆಯಾಗಿದೆ. 89 ಷೇರುಗಳು ಸ್ಥಿರವಾಗಿದೆ.
ಆರಂಭಿಕ ವಹಿವಾಟಿನಲ್ಲಿ ಎಚ್‌ಸಿಎಲ್ ಟೆಕ್, ಟಾಟಾ ಸ್ಟೀಲ್ಸ್, ಟಿಸಿಎಸ್, ರಿಲಯನ್ಸ್, ಐಸಿಐಸಿಐ ಬ್ಯಾಂಕ್, ಐಟಿಸಿ, ವಿಪ್ರೋ, ಎಚ್‌ಡಿಎಫ್‌ಸಿ ಬ್ಯಾಂಕ್. ಮಾರುತಿ, ಎಚ್‌ಡಿಎಫ್‌ಸಿ, ಎಂ&ಎಂ, ಬಜಾಜ್ ಫಿನ್‌ಸರ್ವ್, ಹಿಂದೂಸ್ತಾನ್ ಯೂನಿಲಿವರ್, ಇಂಡಸ್‌ಇಂಡ್ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಟೈಟಾನ್, ಎಲ್‌ಟಿ, ಇನ್ಫೋಸಿಸ್, ಎಸ್‌ಬಿಐ ಇನ್ಶೂರೆನ್ಸ್, ಎನ್‌ಟಿಪಿಸಿ, ಆಕ್ಸಿಸ್ ಬ್ಯಾಂಕ್ ಸ್ಟಾಕ್‌ಗಳು ಏರಿಕೆಯಾಗಿದೆ. ಇನ್ನು ಪವರ್ ಗ್ರಿಡ್, ಬಜಾಜ್ ಫೈನಾನ್ಸ್, ನೆಸ್ಲೆ ಇಂಡಿಯಾ, ಕೋಟಕ್ ಬ್ಯಾಂಕ್, ಟೆಕ್ ಎಂ, ಏಷ್ಯನ್ ಪೇಂಟ್ಸ್, ಟಾಟಾ ಮೋಟರ್ಸ್, ಸನ್‌ಫಾರ್ಮಾ, ಭಾರ್ತಿ ಏರ್‌ಟೆಲ್ ಸ್ಟಾಕ್ ಇಳಿಕೆಯಾಗಿದೆ.

ಮಂಗಳವಾರ ವಹಿವಾಟಿನ ಅಂತ್ಯದ ವೇಳೆಗೆ ಸೆನ್ಸೆಕ್ಸ್ 40.14 ಪಾಯಿಂಟ್ ಅಥವಾ ಶೇ.0.07ರಷ್ಟು ಇಳಿಕೆಯಾಗಿ, 57,613.72ಕ್ಕೆ ತಲುಪಿದೆ. ನಿಫ್ಟಿ 34 ಅಂಕ, ಶೇ.0.20ರಷ್ಟು ಕುಸಿತವಾಗಿ 16,951.70ಕ್ಕೆ ತಲುಪಿದೆ. 1020 ಷೇರುಗಳು ಏರಿಕೆಯಾಗಿದ್ದರೆ, 2438 ಷೇರುಗಳು ಇಳಿಕೆಯಾಗಿದೆ. 97 ಷೇರುಗಳು ಸ್ಥಿರವಾಗಿದೆ. ಪ್ರಮುಖವಾಗಿ ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್, ಟೆಕ್ ಮಹೀಂದ್ರಾ, ಟಾಟಾ ಮೋಟರ್ಸ್, ಹಿರೋ ಮೋಟೋ ಕಾರ್ಪ್ ಸ್ಟಾಕ್‌ಗಳು ಇಳಿಕೆಯಾಗಿದ್ದರೆ, ಇಂಡಸ್‌ಇಂಡ್ ಬ್ಯಾಂಕ್, ಯುಪಿಎಲ್, ಪವರ್ ಗ್ರಿಡ್ ಕಾರ್ಪೋರೇಷನ್, ರೆಡ್ಡೀಸ್ ಲ್ಯಾಬೋರೇಟರಿ, ಎಚ್‌ಡಿಎಫ್‌ಸಿ ಬ್ಯಾಂಕ್ ಸ್ಟಾಕ್‌ಗಳು ಏರಿಕೆಯಾಗಿದೆ.
ಅದಾನಿ ಸ್ಟಾಕ್‌ಗಳು ಹೇಗಿದೆ ನೋಡಿ
ಈ ಸಮಯಕ್ಕೆ ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಶೇಕಡ 6.97ರಷ್ಟು ಇಳಿಕೆಯಾಗಿ 1,602.95 ರೂಪಾಯಿಗೆ ತಲುಪಿದೆ. ಅದಾನಿ ವಿಲ್ಮಾರ್ ಸ್ಟಾಕ್ ಶೇಕಡ 4.99ರಷ್ಟು ಇಳಿಕೆಯಾಗಿ, 368.15 ರೂಪಾಯಿಗೆ ತಲುಪಿದೆ. ಅದಾನಿ ಪೋರ್ಟ್ಸ್ ಶೇಕಡ 5.18ರಷ್ಟು ಕುಸಿದು, 596.50 ರೂಪಾಯಿಗೆ ತಲುಪಿದೆ. ಅಂಬುಜಾ ಸಿಮೆಂಟ್ ಸ್ಟಾಕ್ ಶೇಕಡ 2.97ರಷ್ಟು ಇಳಿಕೆಯಾಗಿದ್ದು, 359.00 ರೂಪಾಯಿಗೆ ತಲುಪಿದೆ.
ಎಸಿಸಿ ಶೇಕಡ 4.45ರಷ್ಟು ಇಳಿದು, 1,610.00 ರೂಪಾಯಿಗೆ ತಲುಪಿದೆ. ಅದಾನಿ ಟ್ರಾನ್ಸ್‌ಮಿಷನ್ ಶೇಕಡ 5.00ರಷ್ಟು ಹೆಚ್ಚಾಗಿ, 1,015.00 ರೂಪಾಯಿಗೆ ತಲುಪಿದೆ. ಅದಾನಿ ಟೋಟಲ್ ಗ್ಯಾಸ್ ಶೇ.5.00ರಷ್ಟು ಇಳಿದು 909.95 ರೂಪಾಯಿ ಆಗಿದೆ. ಅದಾನಿ ಗ್ರೀನ್ ಎನರ್ಜಿ ಶೇ.5.00ರಷ್ಟು ಕುಸಿದು, 935.65ಕ್ಕೆ ತಲುಪಿದೆ. ಎನ್‌ಡಿಟಿವಿ ಶೇಕಡ 4.78ರಷ್ಟು ಕುಗ್ಗಿ 174.20 ರೂಪಾಯಿಗೆ ಮತ್ತು ಅದಾನಿ ಪವರ್ ಶೇಕಡ 5.00ರಷ್ಟು ಇಳಿಕೆಯಾಗಿ 173.85 ರೂಪಾಯಿಗೆ ತಲುಪಿದೆ.
ಸೆನ್ಸೆಕ್ಸ್ ಟಾಪ್ ಗೇನರ್
ಇಂಡಸ್‌ಇಂಡ್ ಬ್ಯಾಂಕ್: ಶೇಕಡ 2.13
ಪವರ್ ಗ್ರಿಡ್ ಕಾರ್ಪ್: ಶೇಕಡ 1.20
ಎಚ್‌ಡಿಎಫ್‌ಸಿ ಬ್ಯಾಂಕ್: ಶೇಕಡ 1.06
ಐಸಿಐಸಿಐ ಬ್ಯಾಂಕ್: ಶೇಕಡ 1.04
ಎನ್‌ಟಿಪಿಸಿ: ಶೇಕಡ 0.61
ಎಚ್‌ಡಿಎಫ್‌ಸಿ: ಶೇಕಡ 0.47
ಸೆನ್ಸೆಕ್ಸ್ ಟಾಪ್ ಲೂಸರ್
ಟೆಕ್ ಎಂ: ಶೇಕಡ -2.90
ಟಾಟಾ ಮೋಟರ್ಸ್: ಶೇಕಡ -2.29
ಭಾರ್ತಿ ಏರ್‌ಟೆಲ್: ಶೇಕಡ -1.94
ವಿಪ್ರೋ: ಶೇಕಡ -1.40
ಬಜಾಜ್ ಫಿನ್‌ಸರ್ವ್: ಶೇಕಡ -1.29
ಎಚ್‌ಸಿಎಲ್ ಟೆಕ್: ಶೇಕಡ -1.00
ನಿಫ್ಟಿ ಟಾಪ್ ಗೇನರ್
ಯುಪಿಎಲ್: ಶೇಕಡ 2.01
ಇಂಡಸ್‌ಇಂಡ್ ಬ್ಯಾಂಕ್: ಶೇಕಡ 2.13
ಡಾ ರೆಡ್ಡಿ: ಶೇಕಡ 1.25
ಐಸಿಐಸಿಐ ಬ್ಯಾಂಕ್: ಶೇಕಡ 0.97
ಎಚ್‌ಡಿಎಫ್‌ಸಿ ಬ್ಯಾಂಕ್: ಶೇಕಡ 0.90
ಪವರ್‌ಗ್ರಿಡ್ ಕಾರ್ಪ್: ಶೇಕಡ 0.80
ನಿಫ್ಟಿ ಟಾಪ್ ಲೂಸರ್
ಅದಾನಿ ಎಂಟರ್‌ಪ್ರೈಸಸ್: ಶೇಕಡ -6.97
ಅದಾನಿ ಪೋರ್ಟ್ಸ್: ಶೇಕಡ -5.18
ಟೆಕ್ ಎಂ: ಶೇಕಡ -2.64
ಹಿರೋ ಮೋಟೋ ಕಾರ್ಪ್: ಶೇಕಡ -2.41
ಟಾಟಾ ಮೋಟರ್ಸ್: ಶೇಕಡ -2.33
ಒಎನ್‌ಜಿಸಿ: ಶೇಕಡ -2.00
ಭಾರ್ತಿ ಏರ್‌ಟೆಲ್: ಶೇಕಡ -1.81
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications