ಸೋಮವಾರ ಷೇರು ಮಾರುಕಟ್ಟೆಯು ಆರಂಭಿಕ ವಹಿವಾಟಿನಲ್ಲಿ ಲಾಭವನ್ನು ಕಂಡಿದೆ. ಆದರೆ ಫೆಬ್ರವರಿ 13ರಂದು ವಹಿವಾಟಿನ ಅಂತ್ಯದಲ್ಲಿ ಷೇರು ಮಾರುಕಟ್ಟೆಯು ಕುಸಿತ ಕಂಡಿದೆ. ಸೆನ್ಸೆಕ್ಸ್ ಹಾಗೂ ನಿಫ್ಟಿ ಎರಡೂ ಕೂಡಾ ನಷ್ಟದೊಂದಿಗೆ ವಹಿವಾಟು ಕೊನೆ ಮಾಡಿದೆ. ಅದರಲ್ಲೂ ಮುಖ್ಯವಾಗಿ ಎಲ್ಲ ಅದಾನಿ ಸ್ಟಾಕ್ ರೆಡ್‌ಝೋನ್‌ನಲ್ಲಿದೆ.
ಈ ಹಿಂದಿನ ಸೆಷನ್‌ನ ಅಂತ್ಯದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಲಾಭದೊಂದಿಗೆ ವಹಿವಾಟು ಕೊನೆ ಮಾಡಿದೆ. ಸೆನ್ಸೆಕ್ಸ್ 60,740.95ಕ್ಕೆ ತಲುಪಿದ್ದರೆ, ನಿಫ್ಟಿ 17,880ಕ್ಕೆ ತಲುಪಿತ್ತು. ಸೋಮವಾರ ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ 250.86 ಪಾಯಿಂಟ್ ಕುಸಿದು, 60,431.84ಕ್ಕೆ ತಲುಪಿದೆ. ನಿಫ್ಟಿ 85.60 ಅಂಕ ಇಳಿದು 17,770.90ಕ್ಕೆ ತಲುಪಿದೆ. 1235 ಷೇರುಗಳು ಏರಿಕೆಯಾಗಿದ್ದರೆ, 2261 ಷೇರುಗಳು ಇಳಿಕೆಯಾಗಿದೆ. 160 ಷೇರುಗಳು ಸ್ಥಿರವಾಗಿದೆ.
ವಹಿವಾಟಿನ ಆರಂಭದಲ್ಲಿ ಸೆನ್ಸೆಕ್ಸ್ 6.48 ಅಂಕ ಅಥವಾ 0.01ರಷ್ಟು ಏರಿಕೆಯಾಗಿ, 60,689ಕ್ಕೆ ತಲುಪಿದೆ. ನಿಫ್ಟಿ 1.20 ಅಂಕ ಅಥವಾ ಶೇಕಡ 0.01ರಷ್ಟು ಏರಿಕೆಯಾಗಿದೆ. 1326 ಷೇರುಗಳು ಏರಿಕೆಯಾಗಿದ್ದರೆ, 820 ಷೇರುಗಳು ಇಳಿಕೆಯಾಗಿದೆ, 188 ಷೇರುಗಳು ಸ್ಥಿರವಾಗಿದೆ. ಎಸಿಸಿ, ಅದಾನಿ ಎಂಟರ್‌ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್ & ಎಸ್‌ಇಜೆಡ್, ಅದಾನಿ ಪವರ್, ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ವಿಲ್ಮಾರ್, ಅಂಬುಜಾ ಸಿಮೆಂಟ್ ಸ್ಟಾಕ್ ಭಾರೀ ಇಳಿಕೆಯಾಗಿದೆ. ಇಲ್ಲಿದೆ ಮಾಹಿತಿ ಮುಂದೆ ಓದಿ...
ಸೆನ್ಸೆಕ್ಸ್ ಟಾಪ್ ಗೇನರ್
ಟೈಟಾನ್ ಸಂಸ್ಥೆ: ಶೇಕಡ 1.97
ಎಲ್&ಟಿ: ಶೇಕಡ 1.85
ಎನ್‌ಟಿಪಿಸಿ: ಶೇಕಡ 1.64
ಪವರ್‌ಗ್ರಿಡ್‌ಕಾರ್ಪ್: ಶೇಕಡ 0.87
ಸನ್ ಫಾರ್ಮಾ: ಶೇಕಡ 0.78
ಸೆನ್ಸೆಕ್ಸ್ ಟಾಪ್ ಲೂಸರ್
ಎಸ್‌ಬಿಐ ಇನ್ಶೂರೆನ್ಸ್: ಶೇಕಡ -2.83
ಇನ್ಫೋಸಿಸ್: ಶೇಕಡ -2.52
ಟಿಸಿಎಸ್: ಶೇಕಡ -1.49
ಬಜಾಜ್ ಫೈನಾನ್ಸ್: ಶೇಕಡ -1.47
ಟೆಕ್ ಮಹೀಂದ್ರಾ: ಶೇಕಡ -1.43
ನಿಫ್ಟಿ ಟಾಪ್ ಗೇನರ್
ಟೈಟಾನ್ ಕಂಪನಿ: ಶೇಕಡ 2.08
ಎಲ್&ಟಿ: ಶೇಕಡ 1.83
ಎನ್‌ಟಿಪಿಸಿ: ಶೇಕಡ 1.67
ಬಜಾಜ್ ಆಟೋ: ಶೇಕಡ 1.30
ಈಚರ್ ಮೋಟರ್ಸ್: ಶೇಕಡ 1.10
ನಿಫ್ಟಿ ಟಾಪ್ ಲೂಸರ್
ಅದಾನಿ ಎಂಟರ್‌ಪ್ರೈಸಸ್: ಶೇಕಡ -7.63
ಅದಾನಿ ಪೋರ್ಟ್ಸ್: ಶೇಕಡ -5.39
ಎಸ್‌ಬಿಐ ಇನ್ಶೂರೆನ್ಸ್: ಶೇಕಡ -2.88
ಇನ್ಫೋಸಿಸ್: ಶೇಕಡ -2.56
ಅಪೋಲೋ ಹಾಸ್ಪಿಟಲ್ಸ್: ಶೇಕಡ -1.82
ಟಿಸಿಎಸ್: ಶೇಕಡ -1.51


Click it and Unblock the Notifications