For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್-ನಿಫ್ಟಿ ದಾಖಲೆ ಮಟ್ಟಕ್ಕೆ ಏರಿಕೆ, ಎಚ್‌ಯುಎಲ್ ಶೈನ್

|

ಷೇರು ಮಾರುಕಟ್ಟೆಯು ಇಂದು ವಹಿವಾಟಿನ ಆರಂಭದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ವಹಿವಾಟಿನ ಅಂತ್ಯದಲ್ಲಿಯೂ ಸೆನ್ಸೆಕ್ಸ್ ಹಾಗೂ ನಿಫ್ಟಿ ಹೊಸ ದಾಖಲೆ ಸೃಷ್ಟಿಸಿದೆ. ಷೇರುಪೇಟೆಯು ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಪ್ರಮುಖವಾಗಿ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಸ್ಟಾಕ್ ಭಾರೀ ಪ್ರಮಾಣದಲ್ಲಿಏರಿಕೆಯನ್ನು ಕಂಡಿದೆ.

ಮಂಗಳವಾರ ವಹಿವಾಟಿನ ಆರಂಭದಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 91.15 ಅಂಕ ಅಥವಾ ಶೇಕಡ 0.15ರಷ್ಟು ಏರಿಕೆಯಾಗಿದ್ದು 62595.95ಕ್ಕೆ ತಲುಪಿತ್ತು. ಇನ್ನು ನಿಫ್ಟಿ 33 ಅಂಕ ಅಥವಾ ಶೇಕಡ 0.18ರಷ್ಟು ಏರಿ 18595.80ಕ್ಕೆ ವಹಿವಾಟು ಆರಂಭಿಸಿತ್ತು. ಇನ್ನು 1504 ಷೇರುಗಳು ಏರಿಕೆಯಾಗಿದ್ದರೆ, 530 ಸ್ಟಾಕ್‌ಗಳು ಇಳಿಕೆಯಾಗಿತ್ತು. ಇನ್ನು 138115 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿತ್ತು.

ಷೇರುಪೇಟೆಯಾಟ: ಸೆನ್ಸೆಕ್ಸ್ ಸಾರ್ವಕಾಲಿಕ ಏರಿಕೆ, ಕಾರಣವೇನು?ಷೇರುಪೇಟೆಯಾಟ: ಸೆನ್ಸೆಕ್ಸ್ ಸಾರ್ವಕಾಲಿಕ ಏರಿಕೆ, ಕಾರಣವೇನು?

ವಹಿವಾಟಿನ ಅಂತ್ಯದಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 177.04 ಅಂಕ ಅಥವಾ ಶೇಕಡ 0.28ರಷ್ಟು ಏರಿಕೆಯಾಗಿದ್ದು 62,681.84 ಏರಿದೆ. ಇನ್ನು ನಿಫ್ಟಿ 55.20 ಅಂಕ ಅಥವಾ ಶೇಕಡ 0.30ರಷ್ಟು ಏರಿ 18,618ಕ್ಕೆ ವಹಿವಾಟು ಅಂತ್ಯ ಮಾಡಿದೆ. ಇನ್ನು 1653 ಷೇರುಗಳು ಏರಿಕೆಯಾಗಿದ್ದರೆ, 1717 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 147 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿದೆ. ಯಾವ ಷೇರು ಟಾಪ್ ಗೇನರ್, ಯಾವುದು ಟಾಪ್ ಲೂಸರ್ ಎಂಬ ಮಾಹಿತಿ ಇಲ್ಲಿದೆ ಮುಂದೆ ಓದಿ...

 ಯಾವೆಲ್ಲ ಸ್ಟಾಕ್‌ಗಳು ಏರಿಕೆ, ಇಳಿಕೆ?

ಯಾವೆಲ್ಲ ಸ್ಟಾಕ್‌ಗಳು ಏರಿಕೆ, ಇಳಿಕೆ?

ಪ್ರಮುಖವಾಗಿ ಎಚ್‌ಯುಎಲ್, ಜೆಎಸ್‌ಡಬ್ಲ್ಯೂ ಸ್ಟೀಲ್, ಹಿರೋ ಮೋಟೋಕಾರ್ಪ್, ಬ್ರಿಟಾನಿಯಾ ಇಂಡಸ್ಟ್ರೀಸ್ ಟಾಪ್ ನಿಫ್ಟಿ ಗೇನರ್‌ಗಳಾಗಿದೆ. ಈ ನಡುವೆ ಇಂಡಸ್‌ಇಂಡ್ ಬ್ಯಾಂಕ್, ಕೋಲ್ ಇಂಡಿಯಾ, ಬಜಾಜ್ ಫಿನ್‌ಸರ್ವ್, ಮಾರುತಿ ಸುಜುಕಿ, ಪವರ್ ಗ್ರಿಡ್ ಕಾರ್ಪೋರೇಷನ್ ಇಳಿಕೆಯಾಗಿದೆ. ಎಫ್‌ಎಂಸಿಜಿ, ಫಾರ್ಮಾ, ಮೆಟಲ್ ಶೇಕಡ 0.5-1ರಷ್ಟು ಏರಿಕೆಯಾಗಿದೆ. ಇನ್ನು ಆರಂಭಿಕ ವಹಿವಾಟಿನಲ್ಲಿ ಅಪೋಲೊ ಹಾಸ್ಪಿಟಲ್, ಸಿಪ್ಲಾ, ಹಿಂಡಾಲ್ಕೊ ಇಂಡಸ್ಟ್ರೀಸ್, ಟೈಟಾನ್ ಕಂಪನಿ, ಬ್ರಿಟಾನಿಯಾ ಇಂಡಸ್ಟ್ರೀಸ್ ಟಾಪ್ ನಿಫ್ಟಿ ಗೇನರ್‌ಗಳಾಗಿದ್ದರೆ, ಬಿಪಿಸಿಎಲ್‌, ಎಸ್‌ಬಿಐ ಲೈಫ್ ಇನ್ಶುರೆನ್ಸ್, ಎಚ್‌ಡಿಎಫ್‌ಸಿ, ಮಾರುತಿ ಸುಝುಕಿ, ಎಚ್‌ಡಿಎಫ್‌ಸಿ ಬ್ಯಾಂಕ್ ನಿಫ್ಟಿ ಲೂಸರ್‌ ಆಗಿತ್ತು.

 ಟಾಪ್ ಗೇನರ್, ಲೂಸರ್ ಸ್ಟಾಕ್‌ಗಳು ಯಾವುದು?

ಟಾಪ್ ಗೇನರ್, ಲೂಸರ್ ಸ್ಟಾಕ್‌ಗಳು ಯಾವುದು?

ಷೇರು ಮಾರುಕಟ್ಟೆಯಲ್ಲಿ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಸ್ಟಾಕ್ ಟಾಪ್ ಗೇನರ್ ಆಗಿದೆ. ಸ್ಟಾಕ್ ಶೇಕಡ 4.32ರಷ್ಟು ಅಥವಾ 109 ಅಂಕ ಹೆಚ್ಚಳವಾಗಿ 2,634.20 ರೂಪಾಯಿಗೆ ತಲುಪಿದೆ. ಇನ್ನು ಇಂಡಸ್‌ಇಂಡ್ ಬ್ಯಾಂಕ್ ಟಾಪ್ ಲೂಸರ್ ಆಗಿದೆ. ಸ್ಟಾಕ್ ಶೇಕಡ 1.44ರಷ್ಟು ಕುಸಿದು ರೂಪಾಯಿ 1,180.60ಕ್ಕೆ ತಲುಪಿದೆ. ಇನ್ನು ನಿಫ್ಟಿ ಎಫ್‌ಎಂಸಿಜಿ ಬೆಸ್ಟ್ ಸೆಕ್ಟರ್ ಆಗಿದೆ. ನಿಫ್ಟಿ ಮಿಡ್‌ಕ್ಯಾಪ್ 100 ಭಾರೀ ಇಳಿಕೆಯಾಗಿದೆ.

 ರೂಪಾಯಿ ಮೌಲ್ಯ ಕುಸಿತ

ರೂಪಾಯಿ ಮೌಲ್ಯ ಕುಸಿತ

ಷೇರು ಮಾರುಕಟ್ಟೆಯಲ್ಲಿ ಗೂಳಿಯಾಟ ಕಂಡು ಬಂದಿದ್ದರೂ ಕೂಡಾ ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ ಮಾತ್ರ ಮಂಗಳವಾರ ವಹಿವಾಟಿನ ಅಂತ್ಯದಲ್ಲಿ ಕುಸಿತ ಕಂಡಿದೆ. ರೂಪಾಯಿ ಮೌಲ್ಯ ಸುಮಾರು 3 ಪೈಸೆಯಷ್ಟು ಕುಗ್ಗಿದ್ದು 81.71ಕ್ಕೆ ವಹಿವಾಟು ಸ್ಥಗಿತ ಮಾಡಿದೆ. ವಹಿವಾಟಿನ ಆರಂಭದಲ್ಲಿ ರೂಪಾಯಿ ಮೌಲ್ಯವು ಕೊಂಚ ಏರಿಕೆಯಾಗಿದ್ದು 81.58ರಲ್ಲಿತ್ತು. ಆದರೆ ವಹಿವಾಟಿನ ಅಂತ್ಯಕ್ಕೆ ಮೌಲ್ಯವೂ ಇಳಿದಿದೆ. ಇನ್ನು ವಹಿವಾಟಿನಲ್ಲಿ ರೂಪಾಯಿ ಮೌಲ್ಯವು 81.74ಕ್ಕೆ ಕುಸಿದಿದೆ. ಕೊನೆಯದಾಗಿ 3 ಪೈಸೆ ಕುಗ್ಗಿ 81.71ಕ್ಕೆ ಸ್ಥಿರವಾಗಿದೆ.

English summary

Closing Bell: Sensex-Nifty Record High, HUL Top Gainers

benchmark indices ended higher on november 29, 2022. Sensex Rises Over 177 Points, Nifty Trades Above 18,618.
Story first published: Tuesday, November 29, 2022, 16:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X