ಸತತ ಮೂರನೇ ಸೆಷನ್‌ನಲ್ಲಿ ಷೇರು ಮಾರುಕಟ್ಟೆಯು ಶುಭಾಂತ್ಯವನ್ನು ಕಂಡಿದೆ. ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆಯು ಕುಸಿತವನ್ನು ಕಂಡಿದ್ದರೂ ಕೂಡಾ ವಹಿವಾಟಿನ ಅಂತ್ಯದಲ್ಲಿ ಪ್ರಬಲಗೊಂಡಿದೆ. ಪ್ರಮುಖವಾಗಿ ಬ್ಯಾಂಕ್ ಹಾಗೂ ಆಟೋ ಸ್ಟಾಕ್‌ಗಳು ಷೇರು ಪೇಟೆಗೆ ಬಲತುಂಬಿದೆ.
ಆರಂಭಿಕ ವಹಿವಾಟಿನಲ್ಲಿ 30 ಷೇರುಗಳ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ 179 ಅಂಕ ಅಥವಾ ಶೇಕಡ 0.33ರಷ್ಟು ಕುಸಿದು 54,341ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 53 ಅಂಕ ಅಥವಾ ಶೇಕಡ 0.33ರಷ್ಟು ಕುಸಿದು 16,225ರಲ್ಲಿ ವಹಿವಾಟು ಆರಂಭ ಮಾಡಿದೆ.
ಆದರೆ ಮಂಗಳವಾರ ವಹಿವಾಟಿನ ಅಂತ್ಯದಲ್ಲಿ 30 ಷೇರುಗಳ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ 246 ಅಂಕ ಅಥವಾ ಶೇಕಡ 0.45ರಷ್ಟು ಜಿಗಿದು 54,768ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 62 ಅಂಕ ಅಥವಾ ಶೇಕಡ 0.38ರಷ್ಟು ಏರಿ 16,341ಕ್ಕೆ ವಹಿವಾಟು ಕೊನೆ ಮಾಡಿದೆ. ಷೇರು ಮಾರುಕಟ್ಟೆಯಲ್ಲಿ ಯಾವೆಲ್ಲಾ ಷೇರುಗಳು ಏರಿದೆ, ಯಾವುದು ಇಳಿದಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....
ನಿಫ್ಟಿ ಆಟೋ, ಬ್ಯಾಂಕ್ ಏರಿಕೆ
ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡ 0.67 ಏರಿದರೆ, ಈ ಸಂದರ್ಭದಲ್ಲೇ ಸ್ಮಾಲ್ ಕ್ಯಾಪ್ ಶೇಕಡ 1.02ರಷ್ಟು ಹೆಚ್ಚಾಗಿದೆ. 15 ಸೆಕ್ಟರ್ ಗೇಜ್‌ಗಳಲ್ಲಿ 11 ಲಾಭವನ್ನು ಕಂಡಿದೆ. ನಿಫ್ಟಿ ಬ್ಯಾಂಕ್, ನಿಫ್ಟಿ ಆಟೋ ಕ್ರಮವಾಗಿ ಶೇಕಡ 1.02, ಶೇಕಡ 1.05ರಷ್ಟು ಏರಿಕೆ ಕಂಡಿದೆ. ಆದರೆ ಈ ಸಂದರ್ಭದಲ್ಲೇ ನಿಫ್ಟಿ ಫಾರ್ಮಾ, ನಿಫ್ಟಿ ಆಯಿಲ್ & ಗ್ಯಾಸ್ ಕ್ರಮವಾಗಿ ಶೇಕಡ 0.25, ಶೇಕಡ 0.13ರಷ್ಟು ಕುಸಿತ ಕಂಡಿದೆ.
ಯಾವೆಲ್ಲಾ ಷೇರುಗಳು ಏರಿಕೆ, ಇಳಿಕೆ?
ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ 2,031 ಷೇರುಗಳು ಏರಿಕೆಯನ್ನು ಕಂಡಿದ್ದರೆ, 1,278 ಷೇರುಗಳು ಕುಸಿತ ಕಂಡಿದೆ. 30 ಷೇರುಗಳು ಬಿಎಸ್‌ಇ ಸೂಚ್ಯಂಕದಲ್ಲಿ ಆಕ್ಸಿಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಎಂ & ಎಂ, ಟಾಟಾ ಸ್ಟೀಲ್, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಫಿನ್‌ಸರ್ವ್, ಎಸ್‌ಬಿಐ, ಭಾರ್ತಿ ಏರ್‌ಟೆಲ್, ಐಸಿಐಸಿಐ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಎನ್‌ಟಿಪಿಸಿ ಮತ್ತು ಹಿಂದೂಸ್ತಾನ್ ಯೂನಿಲಿವರ್ ಸ್ಟಾಕ್‌ಗಳು ಶೇಕಡ 2.35ರಷ್ಟು ಏರಿಕೆ ಕಂಡಿದೆ. ಈ ನಡುವೆ ನೆಸ್ಟ್ಲೆ ಇಂಡಿಯಾ, ಎಚ್‌ಸಿಎಲ್ ಟೆಕ್, ಸನ್ ಫಾರ್ಮಾ, ಕೋಟಕ್ ಮಹೀಂದ್ರಾ ಬ್ಯಾಂಕ್, ಡಾ. ರೆಡ್ಡೀಸ್, ಇನ್ಫೋಸಿಸ್, ಏಷ್ಯನ್ ಪೇಂಟ್ಸ್, ಟೈಟಾನ್, ಐಟಿಸಿ, ಪವರ್‌ಗ್ರಿಡ್ ಮತ್ತು ಟೆಕ್ ಮಹೀಂದ್ರಾ ಷೇರುಗಳು ಇಳಿಕೆ ಕಂಡಿದೆ.


Click it and Unblock the Notifications