ಷೇರು ಮಾರುಕಟ್ಟೆಯು ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ ಕುಸಿದಿದ್ದರೂ ವಹಿವಾಟಿನ ಅಂತ್ಯದ ವೇಳೆಗೆ ಸೆನ್ಸೆಕ್ಸ್, ನಿಫ್ಟಿ ಜಿಗಿದಿದೆ. ಪ್ರಮುಖವಾಗಿ ಮೆಟಲ್, ಆಯಿಲ್ & ಗ್ಯಾಸ್, ಫಾರ್ಮಾ ಸ್ಟಾಕ್ ಷೇರು ಮಾರುಕಟ್ಟೆಗೆ ಶುಕ್ರವಾರ ಬಲತುಂಬಿದೆ.
ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 68.30 ಅಂಕ ಅಥವಾ ಶೇಕಡ 0.12ರಷ್ಟು ಇಳಿಕೆಯಾಗಿ 59264.30ಕ್ಕೆ ತಲುಪಿದ್ದರೆ, ಎನ್‌ಎಸ್‌ಇ ನಿಫ್ಟಿ 19.20 ಅಂಕ ಅಥವಾ ಶೇಕಡ 0.11ರಷ್ಟು ಏರಿ 17639.80ಕ್ಕೆ ಸ್ಥಿರವಾಗಿದೆ. 1080ಷೇರುಗಳು ಏರಿಕೆಯಾದರೆ, 645 ಷೇರುಗಳು ಕುಸಿದಿದೆ. 113 ಷೇರುಗಳು ಸ್ಥಿರವಾಗಿತ್ತು.
ವಹಿವಾಟಿನ ಅಂತ್ಯದ ವೇಳೆಗೆ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 130.18 ಅಂಕ ಅಥವಾ ಶೇಕಡ 0.22ರಷ್ಟು ಏರಿಕೆಯಾಗಿ 59,462.78ಕ್ಕೆ ತಲುಪಿದ್ದರೆ, ಎನ್‌ಎಸ್‌ಇ ನಿಫ್ಟಿ 39.20 ಅಂಕ ಅಥವಾ ಶೇಕಡ 0.22ರಷ್ಟು ಏರಿ 17,698.20ಕ್ಕೆ ಸ್ಥಿರವಾಗಿದೆ. 1771 ಷೇರುಗಳು ಏರಿಕೆಯಾದರೆ, 1531 ಷೇರುಗಳು ಕುಸಿದಿದೆ. 142 ಷೇರುಗಳು ಸ್ಥಿರವಾಗಿತ್ತು. ಒಟ್ಟಾರೆ ಷೇರುಪೇಟೆಯಲ್ಲಿ ಯಾವೆಲ್ಲಾ ಷೇರುಗಳು ಏರಿಕೆಯಾಗಿದೆ, ಯಾವುದು ಟಾಪ್ ಸ್ಟಾಕ್, ಯಾವ ಷೇರು ಭಾರೀ ಇಳಿಕೆಯಾಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

ಯಾವೆಲ್ಲಾ ಷೇರುಗಳು ಏರಿಕೆ, ಯಾವುದು ಇಳಿಕೆ?
ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ವಹಿವಾಟಿನ ಅಂತ್ಯದಲ್ಲಿ ಒಎನ್‌ಜಿಸಿ, ಟಾಟಾ ಸ್ಟೀಲ್ಸ್, ಎನ್‌ಟಿಪಿಸಿ, ಯುಪಿಎಲ್, ಪವರ್ ಗ್ರಿಡ್ ನಿಫ್ಟಿ ಗೇನರ್‌ಗಳಾಗಿದೆ. ದಿವೀಸ್ ಲ್ಯಾಬ್, ಅಪೋಲೋ ಹಾಸ್ಪಿಟಲ್, ಇನ್ಫೋಸಿಸ್, ಮಾರುತಿ ಸುಜುಕಿ, ಟಾಟಾ ಕನ್ಸ್ಯೂಮರ್ ಪ್ರೊಡೆಕ್ಟ್ಸ್ ಷೇರುಗಳು ಭಾರೀ ಇಳಿಕೆಯಾಗಿದೆ. ಬಿಎಸ್‌ಇ ಮಿಡ್‌ಕ್ಯಾಪ್, ಸ್ಮಾಲ್ ಕ್ಯಾಪ್ ಏರಿಕೆಯಾಗಿ ವಹಿವಾಟು ಕೊನೆ ಮಾಡಿದೆ.
ಶುಕ್ರವಾರ ವಹಿವಾಟಿನ ಆರಂಭದಲ್ಲಿ ದೇಶದ ಪ್ರಮುಖ ವಿಮಾ ಸಂಸ್ಥೆಯಾದ ಎಲ್‌ಐಸಿ ಷೇರು ಏರಿಕೆಯಾಗಿತ್ತು. ಸ್ಟಾಕ್ ಶೇಕಡ ಶೇಕಡ 0.37 ಅಥವಾ 2.50 ಅಂಕ ಏರಿಕೆಯಾಗಿ ರೂಪಾಯಿ 685.15ಕ್ಕೆ ತಲುಪಿತ್ತು. ಆದರೆ ವಹಿವಾಟಿನ ಅಂತ್ಯದಲ್ಲಿ ಇಳಿಕೆಯಾಗಿದೆ. ಸ್ಟಾಕ್ ಶೇಕಡ ಶೇಕಡ 0.044 ಅಥವಾ 0.30 ಅಂಕ ಏರಿಕೆಯಾಗಿ ರೂಪಾಯಿ 682.35ಕ್ಕೆ ಸ್ಥಿರವಾಗಿದೆ.
ಯಾವುದು ಟಾಪ್ ಸ್ಟಾಕ್?
ಷೇರು ಮಾರುಕಟ್ಟೆಯಲ್ಲಿ ಒಎನ್‌ಜಿಸಿ ಟಾಪ್ ಸ್ಟಾಕ್ ಆಗಿದೆ. ಒಎನ್‌ಜಿಸಿ ಷೇರು ಶೇಕಡ 4.82ರಷ್ಟು ಹೆಚ್ಚಳವಾಗಿ ರೂಪಾಯಿ 139.20ಕ್ಕೆ ಸ್ಥಿರವಾಗಿದೆ. ಇನ್ನು ದಿವೀಸ್ ಲ್ಯಾಬ್ ಷೇರುಪೇಟೆಯಲ್ಲಿ ಭಾರೀ ನಷ್ಟವನ್ನು ಕಂಡ ಸ್ಟಾಕ್ ಆಗಿದೆ. ದಿವೀಸ್ ಸ್ಟಾಕ್ ಶೇಕಡ 5.62ರಷ್ಟು ಕುಸಿದು ರೂಪಾಯಿ 3,726.20ಕ್ಕೆ ವಹಿವಾಟು ಕೊನೆ ಮಾಡಿದೆ.
More From GoodReturns

Stock Market Crash: ಮಧ್ಯಪ್ರಾಚ್ಯದ ಸಂಘರ್ಷ, ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ! ಸೆನ್ಸೆಕ್ಸ್ 2000 ಪಾಯಿಂಟ್ಸ್ ಕುಸಿತ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications