ಎರಡು ದಿನಗಳ ಹಿಂದೆ ಭಾರೀ ನಷ್ಟದಲ್ಲಿದ್ದ ಭಾರತದ ಷೇರು ಮಾರುಕಟ್ಟೆಯು ಮಾರ್ಚ್ 31ರಂದು ಪುಟಿದೆದಿದ್ದೆ. ಸ್ಟಾಕ್ ಮಾರುಕಟ್ಟೆಯು ಈ ಹಣಕಾಸು ವರ್ಷದ ಕೊನೆಯ ದಿನದಂದು ಏರಿಕೆಯೊಂದಿಗೆ ವಹಿವಾಟು ಆರಂಭ ಮಾಡಿದ್ದು, ವಹಿವಾಟಿನ ಅಂತ್ಯದಲ್ಲಿಯೂ ಗೂಳಿಯಾಟ ಕಂಡು ಬಂದಿದೆ. ಶುಕ್ರವಾರ ವಹಿವಾಟಿನ ಅಂತ್ಯದಲ್ಲಿ ಷೇರುಪೇಟೆಯಲ್ಲಿ ಸೆನ್ಸೆಕ್ಸ್ 1000ಕ್ಕೂ ಅಧಿಕ ಅಂಕ ಜಿಗಿತ ಕಂಡಿದೆ. ನಿಫ್ಟಿ ಕೂಡಾ 17,300ಕ್ಕೂ ಅಧಿಕ ಏರಿಕೆಯಾಗಿದೆ. ರೂಪಾಯಿ ಯುಎಸ್ ಡಾಲರ್ ಎದುರು ಟ್ರೇಡಿಂಗ್ ಅಂತ್ಯದಲ್ಲಿ 17 ಪೈಸೆ ಏರಿಕೆಯಾಗಿದ್ದು, 82.17 ರೂಪಾಯಿಗೆ ತಲುಪಿದೆ. ರಿಲಯನ್ಸ್ ಟಾಪ್ ಗೇನರ್ ಆಗಿದೆ.
ಶುಕ್ರವಾರ ಆರಂಭಿಕ ವಹಿವಾಟಿನ ಸೆನ್ಸೆಕ್ಸ್ 584.79 ಪಾಯಿಂಟ್ ಅಥವಾ ಶೇ.1.01ರಷ್ಟು ಏರಿಕೆಯಾಗಿ, 58,544.88ಕ್ಕೆ ತಲುಪಿದೆ. ನಿಫ್ಟಿ 161.70 ಅಂಕ, ಶೇ.0.95ರಷ್ಟು ಹೆಚ್ಚಳವಾಗಿ 17,242.40ಕ್ಕೆ ತಲುಪಿದೆ. 1532 ಷೇರುಗಳು ಏರಿಕೆಯಾಗಿದ್ದರೆ, 439 ಷೇರುಗಳು ಇಳಿಕೆಯಾಗಿದೆ. 148 ಷೇರುಗಳು ಸ್ಥಿರವಾಗಿದೆ. ಶುಕ್ರವಾರ ವಹಿವಾಟಿನ ಅಂತ್ಯದ ವೇಳೆಗೆ ಸೆನ್ಸೆಕ್ಸ್ 1,031.43 ಪಾಯಿಂಟ್ ಅಥವಾ ಶೇ.1.78ರಷ್ಟು ಏರಿಕೆಯಾಗಿ, 58,991.52ಕ್ಕೆ ತಲುಪಿದೆ. ನಿಫ್ಟಿ 279.10 ಅಂಕ, ಶೇ.1.63ರಷ್ಟು ಹೆಚ್ಚಳವಾಗಿ 17,359.80ಕ್ಕೆ ತಲುಪಿದೆ. 2322 ಷೇರುಗಳು ಏರಿಕೆಯಾಗಿದ್ದರೆ, 1145 ಷೇರುಗಳು ಇಳಿಕೆಯಾಗಿದೆ. 108 ಷೇರುಗಳು ಸ್ಥಿರವಾಗಿದೆ.

ವಹಿವಾಟಿನ ಅಂತ್ಯದಲ್ಲಿ ಯಾವ ಸ್ಟಾಕ್ ಏರಿಕೆ, ಇಳಿಕೆ
ರಿಲಯನ್ಸ್, ಟೆಕ್ ಎಂ, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ನೆಸ್ಲೆ ಇಂಡಿಯಾ, ಎಚ್‌ಸಿಎಲ್ ಟೆಕ್, ಟಾಟಾ ಸ್ಟೀಲ್ಸ್, ಎಂ&ಎಂ, ಟಿಸಿಎಸ್, ಇಂಡಸ್‌ಇಂಡ್ ಬ್ಯಾಂಕ್, ಎಸ್‌ಬಿಐ ಇನ್ಶೂರೆನ್ಸ್, ವಿಪ್ರೋ, ಪವರ್ ಗ್ರಿಡ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್, ಎಲ್‌ಟಿ, ಎನ್‌ಟಿಪಿಸಿ, ಟಾಟಾ ಮೋಟರ್ಸ್, ಭಾರ್ತಿ ಏರ್‌ಟೆಲ್, ಮಾರುತಿ, ಎಚ್‌ಡಿಎಫ್‌ಸಿ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಅಲ್ಟ್ರಾಟೆಕ್ ಸಿಮೆಂಟ್, ಟೈಟಾನ್, ಬಜಾಜ್ ಫೈನಾನ್ಸ್, ಕೋಟಕ್ ಬ್ಯಾಂಕ್, ಸನ್‌ಫಾರ್ಮಾ, ಎಚ್‌ಡಿಎಫ್‌ಸಿ ಸ್ಟಾಕ್ ಏರಿಕೆಯಾಗಿದೆ. ಐಟಿಸಿ, ಏಷ್ಯನ್ ಪೇಂಟ್ಸ್ ಸ್ಟಾಕ್ ಕುಸಿತವಾಗಿದೆ.
ಅದಾನಿ ಸ್ಟಾಕ್‌ಗಳು ಹೇಗಿದೆ ನೋಡಿ
ಈ ಸಮಯಕ್ಕೆ ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಶೇಕಡ 0.098ರಷ್ಟು ಏರಿಕೆಯಾಗಿ 1,742.10 ರೂಪಾಯಿಗೆ ತಲುಪಿದೆ. ಅದಾನಿ ವಿಲ್ಮಾರ್ ಸ್ಟಾಕ್ ಶೇಕಡ 4.99ರಷ್ಟು ಹೆಚ್ಚಳವಾಗಿ, 405.85 ರೂಪಾಯಿಗೆ ತಲುಪಿದೆ. ಅದಾನಿ ಪೋರ್ಟ್ಸ್ ಶೇಕಡ 0.74ರಷ್ಟು ಕುಸಿದು, 631.95 ರೂಪಾಯಿಗೆ ತಲುಪಿದೆ. ಅಂಬುಜಾ ಸಿಮೆಂಟ್ ಸ್ಟಾಕ್ ಶೇಕಡ 0.41ರಷ್ಟು ಏರಿಕೆಯಾಗಿದ್ದು, 365.40 ರೂಪಾಯಿಗೆ ತಲುಪಿದೆ.
ಎಸಿಸಿ ಶೇಕಡ 2.28ರಷ್ಟು ಏರಿ, 1,663.00 ರೂಪಾಯಿಗೆ ತಲುಪಿದೆ. ಅದಾನಿ ಟ್ರಾನ್ಸ್‌ಮಿಷನ್ ಶೇಕಡ 0.090ರಷ್ಟು ಕುಸಿದು, 1,002.55 ರೂಪಾಯಿಗೆ ತಲುಪಿದೆ. ಅದಾನಿ ಟೋಟಲ್ ಗ್ಯಾಸ್ ಶೇ.0.24ರಷ್ಟು ಹೆಚ್ಚಳವಾಗಿ 873.80 ರೂಪಾಯಿ ಆಗಿದೆ. ಅದಾನಿ ಗ್ರೀನ್ ಎನರ್ಜಿ ಶೇ.0.49ರಷ್ಟು ಕುಸಿದು, 890.00ಕ್ಕೆ ತಲುಪಿದೆ. ಎನ್‌ಡಿಟಿವಿ ಶೇಕಡ 4.98ರಷ್ಟು ಹಿಗ್ಗಿ 191.70 ರೂಪಾಯಿಗೆ ಮತ್ತು ಅದಾನಿ ಪವರ್ ಶೇಕಡ 4.99ರಷ್ಟು ಹೆಚ್ಚಳವಾಗಿ 191.60 ರೂಪಾಯಿಗೆ ತಲುಪಿದೆ.
ಸೆನ್ಸೆಕ್ಸ್ ಟಾಪ್ ಗೇನರ್
ರಿಲಯನ್ಸ್: ಶೇಕಡ 4.19
ನೆಸ್ಲೆ ಇಂಡಿಯಾ: ಶೇಕಡ 3.34
ಐಸಿಐಸಿಐ ಬ್ಯಾಂಕ್: ಶೇಕಡ 3.16
ಇನ್ಫೋಸಿಸ್: ಶೇಕಡ 3.07
ಟಾಟಾ ಮೋಟರ್ಸ್: ಶೇಕಡ 2.86
ಟಿಸಿಎಸ್: ಶೇಕಡ 2.10
ಸೆನ್ಸೆಕ್ಸ್ ಟಾಪ್ ಲೂಸರ್
ಸನ್ ಫಾರ್ಮಾ: ಶೇಕಡ -0.77
ಏಷ್ಯನ್ ಪೇಂಟ್ಸ್: ಶೇಕಡ -0.27
ಬಜಾಜ್ ಫೈನಾನ್ಸ್: ಶೇಕಡ -0.24
ಟೈಟಾನ್: ಶೇಕಡ -0.05
ನಿಫ್ಟಿ ಟಾಪ್ ಗೇನರ್
ರಿಲಯನ್ಸ್: ಶೇಕಡ 4.31
ನೆಸ್ಲೆ ಇಂಡಿಯಾ: ಶೇಕಡ 3.29
ಇನ್ಫೋಸಿಸ್: ಶೇಕಡ 3.05
ಐಸಿಐಸಿಐ ಬ್ಯಾಂಕ್: ಶೇಕಡ 3.04
ಟಾಟಾ ಮೋಟರ್ಸ್: ಶೇಕಡ 2.88
ಟಿಸಿಎಸ್: ಶೇಕಡ 2.07
ನಿಫ್ಟಿ ಟಾಪ್ ಲೂಸರ್
ಅಪೋಲೋ ಹಾಸ್ಪಿಟಲ್: ಶೇಕಡ -1.30
ಸನ್ ಫಾರ್ಮಾ: ಶೇಕಡ -0.98
ಅದಾನಿ ಪೋರ್ಟ್ಸ್: ಶೇಕಡ -0.74
ಏಷ್ಯನ್ ಪೇಂಟ್ಸ್: ಶೇಕಡ -0.23
ಬಜಾಜ್ ಫೈನಾನ್ಸ್: ಶೇಕಡ -0.18


Click it and Unblock the Notifications