ಷೇರುಷೇಟೆ ಜಿಗಿತ: ಯಾವ ಸ್ಟಾಕ್‌ಗಳು ಏರಿಕೆ?

ಷೇರು ಮಾರುಕಟ್ಟೆಯು ಬುಧವಾರ ವಹಿವಾಟಿನ ಅಂತ್ಯದಲ್ಲೂ ಏರಿಕೆಯನ್ನು ದಾಖಲಿಸಿದೆ. ಬುಧವಾರ ವಹಿವಾಟಿನ ಆರಂಭದಲ್ಲಿ ಷೇರು ಪೇಟೆಯು ಏರಿತ್ತು, ವಹಿವಾಟಿನ ಅಂತ್ಯದಲ್ಲಿಯೂ ಪಾಸಿಟಿವ್ ಬೆಳವಣಿಗೆ ಕಂಡು ಬಂದಿದೆ. ಪ್ರಮುಖವಾಗಿ ನಿಫ್ಟಿ ಐಟಿ ಷೇರು ಪೇಟೆಗೆ ಬಲ ತುಂಬಿದೆ.

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 214.17 ಅಂಕ ಅಥವಾ ಶೇಕಡ 0.37ರಷ್ಟು ಏರಿಕೆಯಾಗಿ 58,350.53ಕ್ಕೆ ವಹಿವಾಟು ಅಂತ್ಯ ಮಾಡಿದೆ. ನಿಫ್ಟಿ 42.70 ಅಂಕ ಅಥವಾ ಶೇಕಡ 0.25ರಷ್ಟು ಏರಿ 17,388.20ಕ್ಕೆ ವಹಿವಾಟು ಕೊನೆ ಮಾಡಿದೆ. 1337 ಷೇರುಗಳು ಏರಿಕೆಯನ್ನು ಕಂಡಿದ್ದರೆ, 1934 ಷೇರುಗಳು ಇಳಿಕೆಯಾಗಿದೆ. ಈ ಸಂದರ್ಭದಲ್ಲೇ 133 ಷೇರುಗಳು ಸ್ಥಿರತೆ ಕಾಯ್ದುಕೊಂಡಿದೆ.

ಬುಧವಾರ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 155.47 ಅಂಕ ಅಥವಾ ಶೇಕಡ 0.27ರಷ್ಟು ಏರಿಕೆಯಾಗಿ 58291.83ಕ್ಕೆ ವಹಿವಾಟು ಆರಂಭ ಮಾಡಿದರೆ, ನಿಫ್ಟಿ 35 ಅಂಕ ಅಥವಾ ಶೇಕಡ 0.20ರಷ್ಟು ಹೆಚ್ಚಳವಾಗಿ 17380.50ಕ್ಕೆ ತಲುಪಿದೆ. ಹಾಗಾದರೆ ಯಾವೆಲ್ಲಾ ಷೇರುಗಳು ಬುಧವಾರ ವಹಿವಾಟಿನ ಅಂತ್ಯದಲ್ಲಿ ಏರಿಕೆ ಕಂಡಿದೆ, ಯಾವ ಷೇರು ಇಳಿದಿದೆ ಎಂಬ ಬಗ್ಗೆ ನಾವು ತಿಳಿಯೋಣ ಮುಂದೆ ಓದಿ...

 ಯಾವೆಲ್ಲಾ ಷೇರುಗಳು ಏರಿಕೆ, ಯಾವುದು ಇಳಿಕೆ?

ಯಾವೆಲ್ಲಾ ಷೇರುಗಳು ಏರಿಕೆ, ಯಾವುದು ಇಳಿಕೆ?

ಟೆಕ್ ಮಹೀಂದ್ರಾ, ಟಿಸಿಎಸ್, ಇನ್ಫೋಸಿಸ್, ಟೈಟಾನ್, ಏಷ್ಯನ್ ಪೇಂಟ್ಸ್, ಐಸಿಐಸಿಐ ಬ್ಯಾಂಕ್, ಭಾರ್ತಿ ಏರ್‌ಟೆಲ್, ರಿಲಯನ್ಸ್ ಇಂಡಸ್ಟ್ರೀಸ್ ಷೇರು ಮಾರುಕಟ್ಟೆಯಲ್ಲಿ ಭಾರೀ ಲಾಭವನ್ನು ಗಳಿಸಿದ ಸ್ಟಾಕ್‌ಗಳು ಆಗಿದೆ. ಈ ಸಂದರ್ಭದಲ್ಲೇ ಮಾರುತಿ ಸುಜುಕಿ, ಸನ್‌ ಫಾರ್ಮಾ, ಕೋಟಕ್ ಮಹೀಂದ್ರಾ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್ ಸ್ಟಾಕ್‌ಗಳು ನಷ್ಟವನ್ನು ದಾಖಲಿಸಿದೆ. ಬುಧವಾರ ಆರಂಭಿಕ ವಹಿವಾಟಿನಲ್ಲಿಯೂ ಮಾರುತಿ ಸುಜುಕಿ, ಕೋಟಕ್ ಮಹೀಂದ್ರಾ ಬ್ಯಾಂಕ್ ಸ್ಟಾಕ್‌ಗಳು ಕುಸಿತವನ್ನು ದಾಖಲಿಸಿದೆ.

 ಟಾಪ್ ಗೇನರ್, ಲೂಸರ್ ಸ್ಟಾಕ್‌ಗಳು

ಟಾಪ್ ಗೇನರ್, ಲೂಸರ್ ಸ್ಟಾಕ್‌ಗಳು

ಟೆಕ್ ಮಹೀಂದ್ರಾ ಸ್ಟಾಕ್ ಟಾಪ್ ಗೇನರ್ ಆಗಿದೆ. ಟೆಕ್ ಮಹೀಂದ್ರಾ ಸ್ಟಾಕ್ ಶೇಕಡ 1.97 ರಷ್ಟು ಏರಿಕೆಯಾಗಿ ರೂಪಾಯಿ 1,052.85ಕ್ಕೆ ತಲುಪಿದೆ. ಆದರೆ ಮಾರುತಿ ಸುಜುಕಿ ಸ್ಟಾಕ್ ಭಾರೀ ಕುಸಿತವನ್ನು ಕಂಡಿದೆ. ಸ್ಟಾಕ್ ಶೇಕಡ 2.33ರಷ್ಟು ಕುಸಿದು ರೂಪಾಯಿ 8,959.45ಕ್ಕೆ ತಲುಪಿದೆ. ಆರಂಭಿಕ ವಹಿವಾಟಿನಲ್ಲಿ ಕೋಲ್ ಇಂಡಿಯಾ ಸ್ಟಾಕ್ ಟಾಪ್ ಲೂಸರ್ ಆಗಿತ್ತು. ಕೋಲ್ ಇಂಡಿಯಾ ಸ್ಟಾಕ್ ಶೇಕಡ 2.88ರಷ್ಟು ಕುಸಿತ ಕಂಡು ರೂಪಾಯಿ 209.05ಕ್ಕೆ ತಲುಪಿದೆ. ಸಿಪ್ಲಾ ಟಾಪ್ ಗೇನರ್ ಆಗಿದೆ. ಸಿಪ್ಲಾ ಷೇರು ಶೇಕಡ 1.87ರಷ್ಟು ಹೆಚ್ಚಳವಾಗಿ ರೂಪಾಯಿ 1,023.00ಕ್ಕೆ ಏರಿತ್ತು.

 ಪ್ರಮುಖ ಸ್ಟಾಕ್‌ಗಳ ಬಗ್ಗೆ ತಿಳಿಯಿರಿ

ಪ್ರಮುಖ ಸ್ಟಾಕ್‌ಗಳ ಬಗ್ಗೆ ತಿಳಿಯಿರಿ

ರಾಷ್ಟ್ರದ ಅತಿದೊಡ್ಡ ಐಟಿ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸ್ಟಾಕ್‌ಗಳು ಶೇ 1.51 ರಷ್ಟು ಏರಿಕೆಯಾಗಿ ರೂಪಾಯಿ 3,339.60 ಕ್ಕೆ ತಲುಪಿದೆ. ಇನ್ಫೋಸಿಸ್ ಶೇ.1.4ರಷ್ಟು ಏರಿಕೆ ಕಂಡು ರೂಪಾಯಿ 1565.15ಕ್ಕೆ ತಲುಪಿದೆ. ಎಚ್‌ಸಿಎಲ್ ಟೆಕ್ನಾಲಜೀಸ್ ಶೇ.0.63ರಷ್ಟು ಹೆಚ್ಚಳವಾಗಿ ರೂಪಾಯಿ 956.95ಕ್ಕೆ ಏರಿದೆ. ಟೆಕ್ ಮಹೀಂದ್ರಾ ಶೇ 1.97 ರಷ್ಟು ಏರಿಕೆಯಾಗಿ ರೂಪಾಯಿ 1,052.85ಕ್ಕೆ ತಲುಪಿದೆ. ವಿಪ್ರೋ ಷೇರು ಶೇ.0.61ರಷ್ಟು ಏರಿಕೆ ಕಂಡು ರೂಪಾಯಿ 422.15ಕ್ಕೆ ತಲುಪಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಷೇರುಗಳು ಶೇ.0.88ರಷ್ಟು ಏರಿಕೆಯಾಗಿ ರೂಪಾಯಿ 2,605.80ಕ್ಕೆ ತಲುಪಿದೆ.

 ಎಲ್‌ಐಸಿ ಸ್ಟಾಕ್ ಹೇಗಿದೆ?

ಎಲ್‌ಐಸಿ ಸ್ಟಾಕ್ ಹೇಗಿದೆ?

ಬುಧವಾರ ಆರಂಭಿಕ ವಹಿವಾಟಿನಲ್ಲಿ ಭಾರತದ ಅತೀ ದೊಡ್ಡ ವಿಮಾ ಸಂಸ್ಥೆ, ಅತೀ ದೊಡ್ಡ ಹೂಡಿಕೆದಾರ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಷೇರುಗಳು ಈ ಸಮಯಕ್ಕೆ ಶೇಕಡ 0.63ರಷ್ಟು ಕುಸಿದು ರೂಪಾಯಿ 681.20ಕ್ಕೆ ತಲುಪಿತ್ತು. ವಹಿವಾಟಿನ ಅಂತ್ಯದ ವೇಳೆಗೆ ಎಲ್‌ಐಸಿ ಷೇರುಗಳು ಶೇಕಡ 1.01ರಷ್ಟು ಇಳಿದು ರೂಪಾಯಿ 678.60ಕ್ಕೆ ತಲುಪಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+