ಷೇರು ಮಾರುಕಟ್ಟೆಯು ಮಂಗಳವಾರ ವಹಿವಾಟಿನ ಕೊನೆಯಲ್ಲಿ ಚೇತರಿಕೆ ಕಂಡಿದೆ. ಈ ವಾರದ ಮೊದಲ ದಿನವಾದ ಸೋಮವಾರ ಷೇರು ಮಾರುಕಟ್ಟೆಯು ವಹಿವಾಟಿನ ಆರಂಭ ಹಾಗೂ ಅಂತ್ಯದಲ್ಲಿ ಇಳಿಕೆಯಾಗಿದೆ. ಮಂಗಳವಾರವೂ ವಹಿವಾಟಿನ ಆರಂಭದಲ್ಲಿ ಕುಸಿದಿದೆ. ಆದರೆ ಅಂತ್ಯದಲ್ಲಿ ಷೇರುಪೇಟೆ ಪುಟಿದೆದ್ದಿದೆ.
ಮಂಗಳವಾರ ವಹಿವಾಟಿನ ಆರಂಭದಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 361.86 ಅಂಕ ಅಥವಾ ಶೇಕಡ 0.62ರಷ್ಟು ಕುಸಿದು 58412.01ಕ್ಕೆ ತಲುಪಿತ್ತು. ನಿಫ್ಟಿ 114.70 ಅಂಕ ಅಥವಾ ಶೇಕಡ 0.66ರಷ್ಟು ಇಳಿಕೆ ಕಂಡು 17376ಕ್ಕೆ ವಹಿವಾಟು ಆರಂಭ ಮಾಡಿದೆ. 727 ಷೇರುಗಳು ಏರಿಕೆಯನ್ನು ಕಂಡಿದ್ದರೆ, 1176 ಷೇರುಗಳು ಕುಸಿತವಾಗಿದೆ. 104 ಷೇರುಗಳು ಸ್ಥಿರವಾಗಿತ್ತು.
ವಹಿವಾಟಿನ ಅಂತ್ಯದ ವೇಳೆಗೆ 30 ಷೇರುಗಳ ಬಿಎಸ್‌ಇ ಸೂಚ್ಯಂಕ 257.43 ಅಂಕ ಅಥವಾ ಶೇಕಡ 0.44ರಷ್ಟು ಏರಿಕೆಯಾಗಿ 59031.30ಕ್ಕೆ ತಲುಪಿದೆ. ನಿಫ್ಟಿ 86.80 ಅಂಕ ಅಥವಾ ಶೇಕಡ 0.50ರಷ್ಟು ಏರಿಕೆ ಕಂಡು 17577.50ಕ್ಕೆ ವಹಿವಾಟು ಅಂತ್ಯ ಮಾಡಿದೆ. 2077 ಷೇರುಗಳು ಏರಿಕೆಯನ್ನು ಕಂಡಿದ್ದರೆ, 1235 ಷೇರುಗಳು ಕುಸಿತವಾಗಿದೆ. 146 ಷೇರುಗಳು ಸ್ಥಿರವಾಗಿದೆ. ಷೇರುಪೇಟೆಯಲ್ಲಿ ಯಾವ ಸ್ಟಾಕ್ ಟಾಪ್ ಗೇನರ್, ಯಾವುದು ಟಾಪ್ ಲೂಸರ್ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಟಾಪ್ ಲೂಸರ್, ಗೇನರ್ ಷೇರುಗಳು
ಷೇರು ಮಾರುಕಟ್ಟೆಯಲ್ಲಿ ಎಂ&ಎಂ ಸ್ಟಾಕ್ ಭಾರೀ ಏರಿಕೆಯನ್ನು ಕಂಡಿದೆ. ಸ್ಟಾಕ್ ಸುಮಾರು ಶೇಕಡ 3.78ರಷ್ಟು ಏರಿಕೆಯಾಗಿ ರೂಪಾಯಿ 1273.10ಗೆ ವಹಿವಾಟು ಅಂತ್ಯ ಮಾಡಿದೆ. ಇನ್ನು ಇನ್ಫೋಸಿಸ್ ಸ್ಟಾಕ್ ತೀವ್ರ ಕುಸಿತ ಕಂಡ ಸ್ಟಾಕ್ ಆಗಿದೆ. ಸ್ಟಾಕ್ ಶೇಕಡ 2.11ರಷ್ಟು ಕುಸಿದು ರೂಪಾಯಿ 1,542.40ಕ್ಕೆ ಸ್ಥಿರವಾಗಿದೆ. ಇನ್ನು ನಿಫ್ಟಿ ಪಿಎಸ್‌ಯು ಬ್ಯಾಂಕ್ ಹೆಚ್ಚಳವಾಗಿದ್ದು, ನಿಫ್ಟಿ ಐಟಿ ಕುಸಿದಿದೆ. ಆರಂಭಿಕ ವಹಿವಾಟಿನಲ್ಲಿ ಟೆಕ್ ಮಹೀಂದ್ರಾ ಸ್ಟಾಕ್ ಭಾರೀ ಕುಸಿತ ಕಂಡ ಷೇರು ಆಗಿದೆ. ಬಜಾಜ್ ಫಿನ್‌ಸರ್ವ್ ಸ್ಟಾಕ್ ಟಾಪ್ ಸ್ಟಾಕ್ ಆಗಿದೆ.
ಯಾವೆಲ್ಲ ಸ್ಟಾಕ್‌ಗಳು ಏರಿಕೆ, ಇಳಿಕೆ
ಎಂ&ಎಂ, ಬಜಾಜ್ ಫಿನ್‌ಸರ್ವ್, ಟೈಟಾನ್, ಟಾಟಾ ಸ್ಟೀಲ್ಸ್, ಎಸ್‌ಬಿಐ, ಕೋಟಕ್ ಬ್ಯಾಂಕ್, ಸನ್ ಫಾರ್ಮಾ, ಬಜಾಜ್ ಫಿನ್‌ಸರ್ವ್, ಇಂಡಸ್‌ಇಂಡ್ ಬ್ಯಾಂಕ್, ರಿಲಯನ್ಸ್, ಎನ್‌ಟಿಪಿಸಿ, ಐಸಿಐಸಿಐ ಬ್ಯಾಂಕ್, ಭಾರ್ತಿ ಏರ್‌ಟೆಲ್, ಆಕ್ಸಿಸ್ ಬ್ಯಾಂಕ್, ಮಾರುತಿ, ಡಾ ರೆಡ್ಡೀಸ್, ಪವರ್ ಗ್ರಿಡ್, ನೆಸ್ಲೆ ಇಂಡಿಯಾ, ಏಷ್ಯನ್ ಪೇಂಟ್ಸ್, ಐಟಿಸಿ, ಅಲ್ಟ್ರಾಟೆಕ್ ಸಿಮೆಂಟ್ ಸ್ಟಾಕ್ ಏರಿಕೆಯಾದ ಸ್ಟಾಕ್ ಆಗಿದೆ.
ಎಚ್‌ಡಿಎಫ್‌ಸಿ, ಎಲ್‌ಟಿ, ಎಚ್‌ಡಿಎಫ್‌ಸಿ ಬ್ಯಾಂಕ್, ವಿಪ್ರೋ, ಟೆಕ್ ಮಹೀಂದ್ರಾ, ಹಿಂದೂಸ್ತಾನ್ ಯೂನಿಲಿವರ್, ಎಚ್‌ಸಿಎಲ್ ಟೆಕ್, ಇನ್ಫೋಸಿಸ್, ಟಿಸಿಎಸ್ ಸ್ಟಾಕ್ ಭಾರೀ ಇಳಿಕೆಯಾದ ಸ್ಟಾಕ್‌ಗಳು ಆಗಿದೆ. ಇನ್ನು ಅದಾನಿ ಪವರ್ ಸ್ಟಾಕ್ ಶೇಕಡ 5ರಷ್ಟು ಇಳಿಕೆಯಾಗಿದೆ.
ಇನ್ನು ಆಟೋ, ಬ್ಯಾಂಕ್, ಮೆಟಲ್, ಫಾರ್ಮಾ, ಆಯಿಲ್ & ಗ್ಯಾಸ್, ರಿಯಾಲಿಟಿಯಲ್ಲಿ ಹೂಡಿಕೆ ಅಧಿಕವಾಗಿದೆ. ಆದರೆ ಇನ್ಫೋರ್ಮೆಷನ್ ಟೆಕ್ನಾಲಜಿ ಸ್ಟಾಕ್‌ನಲ್ಲಿ ಹೂಡಿಕೆದಾರರು ಆಸಕ್ತಿ ತೋರಿಸಿಲ್ಲ. ಬಿಎಸ್‌ಇ ಮಿಡ್ ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ ಸುಮಾರು ಶೇಕಡ 0.5ರಿಂದ ಶೇಕಡ 1ರಷ್ಟು ಹೆಚ್ಚಳವಾಗಿದೆ.


Click it and Unblock the Notifications