For Quick Alerts
ALLOW NOTIFICATIONS  
For Daily Alerts

Closing Bell: ಸೆನ್ಸೆಕ್ಸ್, ನಿಫ್ಟಿ ಏರಿಕೆ, ಟಾಪ್ ಗೇನರ್ ಯಾವುದು?

|

ಸೋಮವಾರ ಆರಂಭಿಕ ವಹಿವಾಟಿನಲ್ಲಿ ಕೊಂಚ ಏರಿಕೆಯಾಗಿದ್ದ ಷೇರಿ ಮಾರುಕಟ್ಟೆಯು ವಹಿವಾಟಿನ ಅಂತ್ಯದ ವೇಳೆಗೆ ಲಾಭವನ್ನು ವಿಸ್ತರಿಸಿದೆ. ಈ ಹಿಂದಿನ ವಹಿವಾಟಿನಲ್ಲಿ ಷೇರು ಮಾರುಕಟ್ಟೆ ನಷ್ಟದೊಂದಿಗೆ ಸ್ಥಿರವಾಗಿತ್ತು. ಸತತ ಮೂರು ಸೆಷನ್‌ಗಳಲ್ಲಿ ನಷ್ಟವನ್ನು ಅನುಭವಿಸಿತ್ತು. ಆದರೆ ಇಂದು ಆರಂಭದಲ್ಲೇ ಕೊಂಚ ಏರಿಕೆಯಾಗಿದೆ.

 

ಸೋಮವಾರ ವಹಿವಾಟಿನ ಆರಂಭದಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 9.07 ಅಂಕ ಅಥವಾ ಶೇಕಡ 0.02ರಷ್ಟು ಏರಿಕೆಯಾಗಿದ್ದು 58849.86 ಇಳಿದಿದೆ. ಇನ್ನು ನಿಫ್ಟಿ 20.40 ಅಂಕ ಅಥವಾ ಶೇಕಡ 0.12ರಷ್ಟು ಏರಿ 17551.20ಕ್ಕೆ ವಹಿವಾಟು ಅಂತ್ಯ ಮಾಡಿದೆ. ಇನ್ನು 881 ಷೇರುಗಳು ಏರಿಕೆಯಾಗಿದ್ದರೆ, 567 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 138 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿದೆ.

ಷೇರುಪೇಟೆ ಕೊಂಚ ಚೇತರಿಕೆ: ಯಾವೆಲ್ಲ ಸ್ಟಾಕ್ ಏರಿಕೆ, ಇಳಿಕೆ?ಷೇರುಪೇಟೆ ಕೊಂಚ ಚೇತರಿಕೆ: ಯಾವೆಲ್ಲ ಸ್ಟಾಕ್ ಏರಿಕೆ, ಇಳಿಕೆ?

ವಹಿವಾಟಿನ ಅಂತ್ಯದಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 300.44 ಅಂಕ ಅಥವಾ ಶೇಕಡ 0.51ರಷ್ಟು ಏರಿಕೆಯಾಗಿದ್ದು 59,141.23 ಇಳಿದಿದೆ. ಇನ್ನು ನಿಫ್ಟಿ 91.50 ಅಂಕ ಅಥವಾ ಶೇಕಡ 0.52ರಷ್ಟು ಏರಿ 17,622.30ಕ್ಕೆ ವಹಿವಾಟು ಅಂತ್ಯ ಮಾಡಿದೆ. ಇನ್ನು 1665 ಷೇರುಗಳು ಏರಿಕೆಯಾಗಿದ್ದರೆ, 1852 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 127 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿದೆ. ಯಾವ ಷೇರು ಟಾಪ್ ಗೇನರ್, ಯಾವುದು ಟಾಪ್ ಲೂಸರ್ ಎಂಬ ಮಾಹಿತಿ ಇಲ್ಲಿದೆ ಮುಂದೆ ಓದಿ...

 ನಿಫ್ಟಿಯಲ್ಲಿ ಯಾವ ಷೇರು ಏರಿಕೆ ಇಳಿಕೆ

ನಿಫ್ಟಿಯಲ್ಲಿ ಯಾವ ಷೇರು ಏರಿಕೆ ಇಳಿಕೆ

ನಿಫ್ಟಿಯಲ್ಲಿ ಎಂ&ಎಂ, ಬಜಾಜ್ ಫೈನಾನ್ಸ್, ಎಸ್‌ಬಿಐ ಲೈಫ್ ಇನ್ಶೂರೆನ್ಸ್, ಅದಾನಿ ಪೋರ್ಟ್ಸ್, ಎಸ್‌ಬಿಐ ಸ್ಟಾಕ್ ಏರಿಕೆಯಾದ ಸ್ಟಾಕ್‌ಗಳು ಆಗಿದೆ. ಇನ್ನು ಟಾಟಾ ಸ್ಟೀಲ್, ಟಾಟಾ ಮೋಟರ್ಸ್, ಬ್ರಿಟಾನಿಯಾ ಇಂಡಸ್ಟ್ರೀಸ್, ಪವರ್ ಗ್ರಿಡ್ ಕಾಪೋರೇಷನ್, ಎನ್‌ಟಿಪಿಸಿ ಸ್ಟಾಕ್ ನಷ್ಟವನ್ನು ಕಂಡ ಸ್ಟಾಕ್‌ಗಳು ಆಗಿದೆ. ಡಾಲರ್ ಎದುರು ರೂಪಾಯಿ ಮತ್ತೆ ಕುಸಿದಿದೆ. ಈ ಹಿಂದಿನ ವಹಿವಾಟಿನಲ್ಲಿ 79.74ರಷ್ಟಿದ್ದ ರೂಪಾಯಿ ಮತ್ತೆ ಡಾಲರ್ ಎದುರು ಕುಸಿದು 79.77ಕ್ಕೆ ತಲುಪಿದೆ. ಇನ್ನು ಸೆಕ್ಟರ್‌ಗಳಲ್ಲಿ ಮೆಟಲ್ ಹಾಗೂ ರಿಯಾಲಿಟಿ ಸೆಕ್ಟರ್ ಶೇಕಡ 1ರಷ್ಟು ಕುಸಿದಿದ್ದು, ಎಫ್‌ಎಂಸಿಜಿ ಹಾಗೂ ಪಿಎಸ್‌ಯು ಬ್ಯಾಂಕ್ ಶೇಕಡ 1-2 ಏರಿಕೆಯಾಗಿದೆ.

ಟಾಪ್ 10 ಕಂಪನಿಗಳ ಪೈಕಿ 6 ಕಂಪನಿಗಳಿಗೆ 2 ಟ್ರಿಲಿಯನ್ ನಷ್ಟ!ಟಾಪ್ 10 ಕಂಪನಿಗಳ ಪೈಕಿ 6 ಕಂಪನಿಗಳಿಗೆ 2 ಟ್ರಿಲಿಯನ್ ನಷ್ಟ!

 ಯಾವುದು ಟಾಪ್ ಸ್ಟಾಕ್, ಯಾವುದು ಲೂಸರ್?
 

ಯಾವುದು ಟಾಪ್ ಸ್ಟಾಕ್, ಯಾವುದು ಲೂಸರ್?

ಷೇರು ಮಾರುಕಟ್ಟೆಯು ಇಂದು ಪಾಸಿಟಿವ್ ಬೆಳವಣಿಗೆ ಕಂಡಿದೆ. ಎಂ&ಎಂ ಸ್ಟಾಕ್ ಟಾಪ್ ಗೇನರ್ ಆಗಿದೆ. ಎಂ&ಎಂ ಸ್ಟಾಕ್ ಶೇಕಡ 3.08ರಷ್ಟು ಹೆಚ್ಚಳವಾಗಿ ರೂಪಾಯಿ 1,288.65ಕ್ಕೆ ತಲುಪಿದೆ. ಇನ್ನು ಟಾಟಾ ಸ್ಟೀಲ್ಸ್ ಸ್ಟಾಕ್ ಭಾರೀ ನಷ್ಟಕಂಡ ಸ್ಟಾಕ್ ಆಗಿದೆ. ಟಾಟಾ ಸ್ಟೀಲ್ಸ್ ಸ್ಟಾಕ್ ಶೇಕಡ 2.46ರಷ್ಟು ಇಳಿಕೆಯಾಗಿ ರೂಪಾಯಿ 103.10ಕ್ಕೆ ತಲುಪಿದೆ. ಇನ್ನು ಸೆಕ್ಟರ್‌ಗಳಲ್ಲಿ ನಿಫ್ಟಿ ಪಿಎಸ್‌ಯು ಬ್ಯಾಂಕ್ ಲಾಭವನ್ನು ಕಂಡಿದ್ದರೆ, ನಿಫ್ಟಿ ಎನರ್ಜಿ ನಷ್ಟವನ್ನು ಕಂಡಿದೆ.

 30ರಲ್ಲಿ 23 ಸ್ಟಾಕ್ ಲಾಭದೊಂದಿಗೆ ಸ್ಥಿರ

30ರಲ್ಲಿ 23 ಸ್ಟಾಕ್ ಲಾಭದೊಂದಿಗೆ ಸ್ಥಿರ

ಎಂ&ಎಂ, ಬಜಾಜ್ ಫೈನಾನ್ಸ್, ಹಿಂದೂಸ್ತಾನ್ ಯೂನಿಲಿವರ್, ಎಸ್‌ಬಿಐ ಇನ್ಶೂರೆನ್ಸ್, ನೆಸ್ಲೆ ಇಂಡಿಯಾ, ಬಜಾಜ್ ಫಿನ್‌ಸರ್ವ್, ಎಚ್‌ಡಿಎಫ್‌ಸಿ, ಐಟಿಸಿ, ಆಕ್ಸಿಸ್ ಬ್ಯಾಂಕ್, ಇನ್ಫೋಸಿಸ್, ಡಾ ರೆಡ್ಡೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಟಿಸಿಎಸ್, ಮಾರುತಿ, ಟೈಟಾನ್, ಟೆಕ್ ಎಂ, ಸನ್ ಫಾರ್ಮಾ, ಭಾರ್ತಿ ಏರ್‌ಟೆಲ್, ರಿಲಯನ್ಸ್, ವಿಪ್ರೋ, ಎಚ್‌ಸಿಎಲ್ ಟೆಕ್, ಕೋಟಕ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್ ಏರಿಕೆಯಾದ ಸ್ಟಾಕ್ ಆಗಿದೆ. ಇನ್ನು ಪವರ್ ಗ್ರಿಡ್, ಎಲ್‌ಟಿ, ಅಲ್ಟ್ರಾಟೆಕ್ ಸಿಮೆಂಟ್, ಏಷ್ಯನ್ ಪೇಂಟ್ಸ್, ಐಸಿಐಸಿಐ ಬ್ಯಾಂಕ್, ಎನ್‌ಟಿಪಿಸಿ, ಟಾಟಾ ಸ್ಟೀಲ್ಸ್ ಸ್ಟಾಕ್ ಇಳಿಕೆಯಾದ ಸ್ಟಾಕ್‌ಗಳು ಆಗಿದೆ.

English summary

Closing Bell: Sensex Rises Over 300 Points, Nifty Trades Above 17,600

benchmark indices ended higher on september 19. Sensex Rises Over 300 Points, Nifty Trades Above 17,600.
Story first published: Monday, September 19, 2022, 16:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X