For Quick Alerts
ALLOW NOTIFICATIONS  
For Daily Alerts

4 ತಿಂಗಳಲ್ಲೇ ಭಾರಿ ಏರಿಕೆ ಕಂಡ ಸೆನ್ಸೆಕ್ಸ್: ಆಟೋ, ಪವರ್ ಸ್ಟಾಕ್ ಬಲ

|

ಸೋಮವಾರ ಆರಂಭಿಕ ವಹಿವಾಟಿನಲ್ಲಿ ಏರಿಕೆಯಾಗಿದ್ದ ಸೆನ್ಸೆಕ್ಸ್, ನಿಫ್ಟಿ ವಹಿವಾಟಿನ ಅಂತ್ಯದಲ್ಲಿಯೂ ಲಾಭವನ್ನು ವಿಸ್ತರಿಸಿದೆ. ಪ್ರಮುಖವಾಗಿ ಆಟೋ, ಪವರ್, ಮೆಟಲ್ಸ್ ಸ್ಟಾಕ್‌ಗಳು ಷೇರು ಮಾರುಕಟ್ಟೆಗ ಬಲತುಂಬಿದೆ. ನಿಫ್ಟಿ 17500ಗಿಂತ ಹೆಚ್ಚಾಗಿದೆ.

ಆರಂಭಿಕ ವಹಿವಾಟಿನಲ್ಲಿ 30 ಷೇರುಗಳು ಬಿಎಸ್‌ಇ 46.94 ಅಂಕ ಅಥವಾ ಶೇಕಡ 0.08 ರಷ್ಟು 58434.87ಕ್ಕೆ ತಲುಪಿದೆ. ನಿಫ್ಟಿ 14.90 ಅಂಕ ಅಥವಾ ಶೇಕಡ 0.09 ರಷ್ಟು ಹೆಚ್ಚಳವಾಗಿ 17412.40ಕ್ಕೆ ತಲುಪಿತ್ತು. ಷೇರು ಪೇಟೆಯಲ್ಲಿ 1366 ಷೇರುಗಳು ಏರಿಕೆಯನ್ನು ಕಂಡಿದ್ದರೆ, 737 ಷೇರುಗಳು ಕುಸಿತವನ್ನು ಕಂಡಿತ್ತು.

ಷೇರುಪೇಟೆ ಜಿಗಿತ: ಯಾವೆಲ್ಲಾ ಸ್ಟಾಕ್ ಏರಿಕೆ?ಷೇರುಪೇಟೆ ಜಿಗಿತ: ಯಾವೆಲ್ಲಾ ಸ್ಟಾಕ್ ಏರಿಕೆ?

ವಹಿವಾಟಿನ ಅಂತ್ಯದಲ್ಲಿ 30 ಷೇರುಗಳು ಬಿಎಸ್‌ಇ 465.14 ಅಂಕ ಅಥವಾ ಶೇಕಡ 0.80ರಷ್ಟು ಏರಿಕೆಯಾಗಿ 58,853.07ಕ್ಕೆ ತಲುಪಿದೆ. ನಿಫ್ಟಿ 127.60 ಅಂಕ ಅಥವಾ ಶೇಕಡ 0.73ರಷ್ಟು ಹೆಚ್ಚಳವಾಗಿ 17,525.10ಕ್ಕೆ ವಹಿವಾಟು ಅಂತ್ಯ ಮಾಡಿದೆ. ವಹಿವಾಟಿನ ಅಂತ್ಯದ ವೇಳೆಗೆ 1864 ಷೇರುಗಳು ಏರಿಕೆಯನ್ನು ಕಂಡಿದ್ದರೆ, 1535 ಷೇರುಗಳು ಕುಸಿತವನ್ನು ಕಂಡಿದೆ. 173 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿದೆ. ಹಾಗಾದರೆ ಯಾವೆಲ್ಲಾ ಷೇರುಗಳು ಏರಿಕೆಯಾಗಿದೆ, ಯಾವ ಷೇರು ಇಳಿಕೆಯಾಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಟಾಪ್ ಗೇನರ್, ಲೂಸರ್ ಯಾವುದು?

ಟಾಪ್ ಗೇನರ್, ಲೂಸರ್ ಯಾವುದು?

ಕೋಲ್ ಇಂಡಿಯಾ ಟಾಪ್ ಗೇನರ್ ಆಗಿದೆ. ಕೋಲ್ ಇಂಡಿಯಾ ಸ್ಟಾಕ್ ಶೇಕಡ 3.33ರಷ್ಟು ಏರಿಕೆಯಾಗಿ, ರೂಪಾಯಿ 215.40ಕ್ಕೆ ತಲುಪಿದೆ. ಇನ್ನು ಬಿಪಿಸಿಎಲ್ ಟಾಪ್ ಲೂಸರ್ ಆಗಿದೆ. ಬಿಪಿಸಿಎಲ್ ಸ್ಟಾಕ್ ಶೇಕಡ 3.20ರಷ್ಟು ಕುಸಿದು ರೂಪಾಯಿ 325.65ಕ್ಕೆ ತಲುಪಿದೆ. ನಿಫ್ಟಿ ಮೆಟಲ್ ಬೆಸ್ಟ್ ಸೆಕ್ಟರ್ ಆಗಿದ್ದರೆ, ನಿಫ್ಟಿ ಪಿಎಸ್‌ಯು ಬ್ಯಾಂಕ್ ಭಾರೀ ಕುಸಿತ ಕಂಡಿದೆ. ಇನ್ನು ಆರಂಭಿಕ ವಹಿವಾಟಿನಲ್ಲಿ ಎಂ&ಎಂ ಟಾಪ್ ಗೇನರ್ ಆಗಿದೆ. ಎಂ&ಎಂ ಷೇರು ಶೇಕಡ 2.27ರಷ್ಟು ಏರಿಕೆಯಾಗಿ ರೂಪಾಯಿ 1,263.90ಕ್ಕೆ ತಲುಪಿತ್ತು. ವಹಿವಾಟಿನ ಆರಂಭದಲ್ಲಿಯೂ ಬಿಪಿಸಿಎಲ್ ಸ್ಟಾಕ್ ಟಾಪ್ ಲೂಸರ್ ಆಗಿದೆ. ಸ್ಟಾಕ್ ಶೇಕಡ 3.86ರಷ್ಟು ಕುಸಿತ ಕಂಡು ರೂಪಾಯಿ 323.40ಕ್ಕೆ ತಲುಪಿತ್ತು.

Q1 ವರದಿ: ಭಾರತ್ ಪೆಟ್ರೋಲಿಯಂಗೆ 6,148 ಕೋಟಿ ರು ನಷ್ಟQ1 ವರದಿ: ಭಾರತ್ ಪೆಟ್ರೋಲಿಯಂಗೆ 6,148 ಕೋಟಿ ರು ನಷ್ಟ

 ಯಾವೆಲ್ಲಾ ಷೇರುಗಳು ಏರಿಕೆ

ಯಾವೆಲ್ಲಾ ಷೇರುಗಳು ಏರಿಕೆ

ಇನ್ನು ಸೆನ್ಸೆಕ್ಸ್ ಸುಮಾರು 4 ತಿಂಗಳಲ್ಲೇ ಭಾರೀ ಏರಿಕೆ ಕಂಡಿದೆ. ಇನ್ನು ಕೋಲ್ ಇಂಡಿಯಾ, ಎಂ&ಎಂ, ಹಿಂಡಾಲ್ಕೋ ಇಂಡಸ್ಟ್ರೀಸ್ ನಿಫ್ಟಿಯಲ್ಲಿ ಏರಿಕೆ ಕಂಡ ಸ್ಟಾಕ್‌ಗಳಾದರೆ, ಬಜಾಜ್ ಫಿನ್‌ಸರ್ವ್, ಎನ್‌ಟಿಪಿಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಲ್‌&ಟಿ ಸ್ಟಾಕ್‌ಗಳು ಶೇಕಡ 2-3ರಷ್ಟು ಏರಿಕೆಯಾಗಿದೆ. ಆರಂಭಿಕ ವಹಿವಾಟಿನಲ್ಲಿ ಎಂ&ಎಂ, ಪವರ್ ಗ್ರಿಡ್, ಡಾ ರೆಡ್ಡೀಸ್, ಟೈಟಾನ್, ಭಾರ್ತಿ ಏರ್‌ಟೆಲ್, ಮಾರುತಿ, ರಿಲಯನ್ಸ್, ಎಲ್‌ಟಿ, ಆಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಇಂಡಸ್ ಇಂಡ್ ಬ್ಯಾಂಕ್, ವಿಪ್ರೋ ಷೇರುಗಳು ಏರಿಕೆಯನ್ನು ಕಂಡಿತ್ತು.

 ಯಾವೆಲ್ಲ ಸ್ಟಾಕ್‌ಗಳು ಇಳಿಕೆ

ಯಾವೆಲ್ಲ ಸ್ಟಾಕ್‌ಗಳು ಇಳಿಕೆ

ಎಸ್‌ಬಿಐ, ಅಲ್ಟ್ರಾಟೆಕ್ ಸಿಮೆಂಟ್, ನೆಸ್ಲೆ, ವಿಪ್ರೋ, ಪವರ್‌ಗ್ರಿಡ್, ಏಷ್ಯನ್ ಪೇಂಟ್ಸ್, ಸನ್ ಫಾರ್ಮಾ ಭಾರೀ ಇಳಿಕೆಯಾದ ಸ್ಟಾಕ್‌ಗಳು ಆಗಿದೆ. ಬಿಪಿಸಿಎಲ್, ಎಸ್‌ಬಿಐ, ಅಲ್ಟ್ರಾಟೆಕ್ ಸಿಮೆಂಟ್ ಬ್ರಿಟಾನಿಯಾ ಇಂಡಸ್ಟ್ರೀಸ್ ನೆಸ್ಲೆ ನಿಫ್ಟಿಯಲ್ಲಿ ಕುಸಿತವಾದ ಸ್ಟಾಕ್‌ಗಳು ಆಗಿದೆ. ಆರಂಭಿಕ ವಹಿವಾಟಿನಲ್ಲಿ ಹಿಂದೂಸ್ತಾನ್ ಯೂನಿಲಿವರ್, ಟಾಟಾ ಸ್ಟೀಲ್ಸ್, ಸನ್‌ ಫಾರ್ಮಾ, ಐಟಿಸಿ, ಎಚ್‌ಡಿಎಫ್‌ಸಿ, ನೆಸ್ಲೆ ಇಂಡಿಯಾ, ಹೆಚ್‌ಸಿಎಲ್ ಟೆಕ್, ಟಿಸಿಎಸ್, ಎನ್‌ಟಿಪಿಸಿ, ಬಜಾಜ್ ಫಿನ್‌ಸರ್ವ್, ಏಷ್ಯನ್ ಪೇಂಟ್ಸ್, ಇನ್ಫೋಸಿಸಿ, ಟೆಕ್ ಎಂ, ಐಸಿಐಸಿಐ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಕೋಟಕ್ ಮಹೀಂದ್ರಾ, ಎಸ್‌ಬಿಐ ಇನ್ಶೂರೆನ್ಸ್ ಸ್ಟಾಕ್‌ಗಳು ಕುಸಿತವನ್ನು ಕಂಡಿತ್ತು.

English summary

Closing Bell: Sensex Rises Over 400 Points, Nifty Trades Above 17,500

Sensex Rises Over 400 Points, Nifty Trades Above 17,500.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X