ಸತತ ನಾಲ್ಕು ದಿನಗಳಿಂದ ಪಾತಾಳಕ್ಕೆ ಕುಸಿತ ಕಾಣುತ್ತಿದ್ದ ಷೇರು ಪೇಟೆಯು ಗುರುವಾರ ವಹಿವಾಟಿನ ಅಂತ್ಯದ ವೇಳೆಗೆ ಚೇತರಿಕೆ ಕಂಡಿದೆ. ಬುಧವಾರವಷ್ಟೇ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದೆ. ಈ ಹಿನ್ನೆಲೆಯಿಂದಾಗಿ ಷೇರು ಪೇಟೆಯು ಕುಸಿತ ಕಂಡಿತ್ತು. ಆದರೆ ಮರುದಿನವ ವಹಿವಾಟಿನ ಅಂತ್ಯದಲ್ಲಿ ಲಾಭವನ್ನು ಕಂಡಿದೆ.
ಮುಖ್ಯವಾಗಿ ಫಾರ್ಮಾ, ತಾಂತ್ರಿಕ ಸ್ಟಾಕ್‌ಗಳು ಭಾರೀ ಲಾಭವನ್ನು ಕಂಡಿದೆ. ರಿಲಾಯನ್ಸ್ ಇಂಡಸ್ಟ್ರೀಸ್ ಕೂಡಾ ಈ ಷೇರು ಪೇಟೆ ಜಿಗಿತಕ್ಕೆ ಸಹಾಯ ಮಾಡಿದೆ. ಬಿಎಸ್‌ಇ ಸೆನ್ಸೆಕ್ಸ್ 428 ಅಂಕ ಅಥವಾ ಶೇಕಡ 0.78ರಷ್ಟು ಏರಿ 55,320ಕ್ಕೆ ತಲುಪಿದೆ. ಇನ್ನು ಎನ್‌ಎಸ್‌ಇ ನಿಫ್ಟಿ 122 ಅಂಕ ಅಥವಾ ಶೇಕಡ 0.74 ಏರಿ 16,478ಗೆ ತಲುಪಿದೆ.
ಇನ್ನು ಮಿಡ್ ಹಾಗೂ ಸ್ಮಾಲ ಕ್ಯಾಪ್ ಕ್ರಮವಾಗಿ ಶೇಕಡ 0.49, ಶೇಕಡ 0.49 ಏರಿಕೆ ಕಂಡಿದೆ. 15 ಸೆಕ್ಟರ್ ಗೇಜ್‌ನಲ್ಲಿ 13 ಲಾಭ ಕಂಡಿದೆ. ನಿಫ್ಟಿ ಆಯಿಲ್ ಆಂಡ್ ಗ್ಯಾಸ್, ನಿಫ್ಟಿ ಫಾರ್ಮಾ, ನಿಫ್ಟಿ ಐಟಿ ಕ್ರಮವಾಗಿ ಶೇಕಡ 1.96, ಶೇಕಡ 1.96, ಶೇಕಡ 0.98ಕ್ಕೆ ಹೆಚ್ಚಳವಾಗಿದೆ.

ನಿಫ್ಟಿಯಲ್ಲಿ ಡಾ ರೆಡ್ಡೀಸ್ ಟಾಪ್ ಗೇನರ್ ಆಗಿದೆ. ಡಾ ರೆಡ್ಡೀಸ್ ಷೇರು ಶೇಕಡ 3 ಏರಿಕೆ ಹೊಂದಿ ರೂಪಾಯಿ 4,324.95ಕ್ಕೆ ತಲುಪಿದೆ. ಬಿಪಿಸಿಎಲ್, ರಿಲಾಯನ್ಸ್ ಇಂಡಸ್ಟ್ರೀಸ್, ಈಚರ್ ಮೋಟರ್ಸ್, ಬಜಾಜಾ ಆಟೋ ಕೂಡಾ ಭಾರೀ ಲಾಭವನ್ನು ಕಂಡಿದೆ.
ಎಷ್ಟು ಷೇರಿಗೆ ಲಾಭ, ಎಷ್ಟಕ್ಕೆ ನಷ್ಟ?
ಒಟ್ಟಾರೆಯಾಗಿ ಮಾರುಕಟ್ಟೆಯಲ್ಲಿ 1,750 ಷೇರುಗಳು ಲಾಭ ಕಂಡಿದ್ದರೆ, 1,550 ಷೇರುಗಳು ನಷ್ಟವನ್ನು ಅನುಭವಿಸಿದೆ. ಬಿಎಸ್‌ಇಯಲ್ಲಿ ರಿಲಾಯನ್ಸ್, ಡಾ ರಡ್ಡೀಸ್, ಭಾರ್ತಿ ಏರ್‌ಟೇಲ್, ಟೆಕ್ ಮಹೀಂದ್ರಾ, ಸನ್ ಫಾರ್ಮಾ, ಕೋಟಕ್ ಮಹೀಂದ್ರಾ ಬ್ಯಾಂಕ್, ವಿಪ್ರೋ, ಐಟಿಸಿ, ಇನ್ಫೋಸಿಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಟಿಸಿಎಸ್, ಇಂಡಸ್‌ಇಂಡ್ ಬ್ಯಾಂಕ್ ಟಾಪ್ ಗೇನರ್ ಆಗಿದೆ.
ಆದರೆ ಇದಕ್ಕೆ ವ್ಯತಿರಿಕ್ತವಾಗಿ ಟಾಟಾ ಸ್ಟೀಲ್ಸ್, ಅಲ್ಟ್ರಾಟೆಕ್ ಸಿಮೆಂಟ್, ಎನ್‌ಟಿಪಿಸಿ, ಬಜಾಜ್ ಫಿನಾನ್ಸ್, ಎಸ್‌ಬಿಐ, ಏಷ್ಯನ್ ಪೇಂಟ್ಸ್, ಎಚ್‌ಸಿಎಲ್ ಟೆಕ್, ಬಜಾಜ್ ಫಿನ್‌ಸರ್ವ್, ಎಂ&ಎಂ ನಷ್ಟದೊಂದಿಗೆ ವಹಿವಾಟು ಅಂತ್ಯ ಮಾಡಿದೆ. ಈ ನಡುವೆ ಎಲ್‌ಐಸಿ ಷೇರು ಬಾರೀ ಕುಸಿತ ಕಂಡಿದೆ. ಮತ್ತೆ ಸಾರ್ವಕಾಲಿಕ ಕುಸಿತವನ್ನು ಕಂಡಿದೆ. ಶೇಕಡ 2.17ರಷ್ಟು ಕುಸಿದು ರೂಪಾಯಿ 721.95ಕ್ಕೆ ವಹಿವಾಟು ಅಂತ್ಯ ಮಾಡಿದೆ. ವಹಿವಾಟಿನ ಮಧ್ಯದಲ್ಲಿ ಎಲ್‌ಐಸಿ ಷೇರು ರೂಪಾಯಿ 720.05ಕ್ಕೆ ತಳ್ಳಲ್ಪಟ್ಟು ಬಳಿಕ ಕೊಂಚ ಚೇತರಿಸಿದರೂ ನಷ್ಟದೊಂದಿಗೆ ವಹಿವಾಟು ಅಂತ್ಯ ಮಾಡಿದೆ.


Click it and Unblock the Notifications