ಆಟೋಮೊಬೈಲ್, ಟೆಕ್ನಾಲಜಿ ಹಾಗೂ ಫಾರ್ಮಾ ಸ್ಟಾಕ್‌ಗಳು ಷೇರು ಮಾರುಕಟ್ಟೆಗೆ ಬಲವನ್ನು ತುಂಬಿದ್ದು, ಗುರುವಾರ ವಹಿವಾಟಿನ ಅಂತ್ಯದಲ್ಲಿಯೂ ಷೇರು ಪೇಟೆ ಲಾಭವನ್ನು ಕಂಡಿದೆ. ಜಾಗತಿಕ ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿದ್ದಂತೆ ಷೇರು ಪೇಟೆ ಜಿಗಿತವನ್ನು ಕಂಡಿದೆ.
ಬ್ರೆಂಟ್ ಕಚ್ಚಾ ತೈಲ ದರವು ಇಂದು ಶೇಕಡ 1.91ರಷ್ಟು ಕುಸಿತ ಕಂಡು ಪ್ರತಿ ಬ್ಯಾರೆಲ್‌ಗೆ 109.61 ಡಾಲರ್‌ಗೆ ತಲುಪಿದೆ. ಈ ನಡುವೆ ಷೇರು ಮಾರುಕಟ್ಟೆಯಲ್ಲಿ ಪಾಸಿಟಿವ್ ಬೆಳವಣಿಗೆ ಕಂಡು ಬಂದಿದೆ. ಈ ಬಗ್ಗೆ ಮಾಹಿತಿ ನೀಡಿದ ತಜ್ಞರು ಜಾಗತಿಕ ಕಚ್ಚಾ ತೈಲ ದರವು ಇಳಿಕೆಯಾದರೆ ಭಾರತದ ಆಮದುದಾರರಿಗೆ ಸುಲಭವಾಗಲಿದೆ. ಇದು ಹಣದುಬ್ಬರದ ಮೇಲೆ ಉತ್ತಮ ಪರಿಣಾಮ ಉಂಟು ಮಾಡಲಿದೆ ಎಂದು ತಿಳಿಸಿದ್ದಾರೆ.
ಗುರುವಾರ ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ 443 ಅಂಕ ಅಥವಾ ಶೇಕಡ 0.86ರಷ್ಟು ಜಿಗಿದು, 52,266ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 143 ಅಂಕ ಅಥವಾ ಶೇಕಡ 0.93 ಏರಿ 15,557ರಲ್ಲಿ ವಹಿವಾಟು ಸ್ಥಗಿತ ಮಾಡಿದೆ. ಮಿಡ್ ಕ್ಯಾಪ್ ಶೇಕಡ 1.21ರಷ್ಟು ಇಳಿದಿದೆ. ಸ್ಮಾಲ್ ಕ್ಯಾಪ್ ಶೇಕಡ 1.31ರಷ್ಟು ಏರಿಕೆ ಕಂಡಿದೆ.

ಮಾರುತಿ ಟಾಪ್ ನಿಫ್ಟಿ ಗೇನರ್
ನಿಪ್ಟಿ ಆಟೋ, ನಿಫ್ಟಿ ಐಟಿ, ನಿಫ್ಟಿ ಫಾರ್ಮಾ ಕ್ರಮವಾಗಿ ಶೇಕಡ 4.39, ಶೇಕಡ 1.96, ಶೇಕಡ 1.58ರಷ್ಟು ಹೆಚ್ಚಳವಾಗಿದೆ. ನಿಫ್ಟಿ ಆಯಿಲ್ & ಗ್ಯಾಸ್ ಶೇಕಡ 0.43ರಷ್ಟು ಕುಸಿತ ಕಂಡಿದೆ. ಮಾರುತಿ ಟಾಪ್ ನಿಫ್ಟಿ ಗೇನರ್ ಆಗಿದೆ. ಶೇಕಡ 6.65ರಷ್ಟು ಹೆಚ್ಚಳವಾಗಿ 8,300.30ಕ್ಕ ತಲುಪಿದೆ.
ಬಿಎಸ್‌ಇಯಲ್ಲಿ 2,093 ಷೇರುಗಳು ಲಾಭವನ್ನು ಕಂಡಿದ್ದರೆ, 1,211 ಷೇರುಗಳು ನಷ್ಟವನ್ನು ಅನುಭವಿಸಿದೆ. ಹಿರೋ ಮೋಟೋಕಾರ್ಪ್, ಈಚರ್ ಮೋಟರ್ಸ್, ಎಂ&ಎಂ, ಬಜಾಜ್ ಆಟೋ ಕೂಡಾ ಭಾರೀ ಲಾಭವನ್ನು ಅನುಭವಿಸಿದೆ.
30 ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ ಮಾರುತಿ, ಎಂ&ಎಂ, ಏಷ್ಯನ್ ಪೇಂಟ್ಸ್, ಭಾರ್ತಿಕ ಏರ್‌ಟೆಲ್, ಟಿಸಿಎಸ್, ಸನ್ ಫಾರ್ಮಾ, ವಿಪ್ರೋ, ಹಿಂದೂಸ್ತಾನ್ ಯೂನಿಲಿವರ್, ಐಸಿಐಸಿಐ ಬ್ಯಾಂಕ್, ಎ&ಟಿ, ಬಜಾಜ್ ಫಿನ್‌ಸರ್ವ್, ಇನ್ಫೋಸಿಸ್ ಕೂಡಾ ಲಾಭವನ್ನು ಕಂಡಿದೆ. ಈ ನಡುವೆ ರಿಲಯನ್ಸ್ ಇಂಡಸ್ಟ್ರೀಸ್, ಎನ್‌ಟಿಪಿಸಿ, ಪವರ್ ಗ್ರೀಡ್, ಅಲ್ಟ್ರಾಟೆಕ್ ಸಿಮೆಂಟ್ ಕೆಳಕ್ಕೆ ಕುಸಿದಿದೆ.
ಈ ನಡುವೆ ಎಲ್‌ಐಸಿ ಷೇರುಗಳು ಮತ್ತೆ ಕೆಳಕ್ಕೆ ಇಳಿದಿದೆ. ಗುರುವಾರ ವಹಿವಾಟಿನ ಅಂತ್ಯದಲ್ಲಿ ಶೇಕಡ 0.55ರಷ್ಟು ಕುಸಿದು ರೂಪಾಯಿ 664.90ಕ್ಕೆ ತಲುಪಿದೆ. ಷೇರು ಪೇಟೆಗೆ ಎಲ್‌ಐಸಿ ಎಂಟ್ರಿ ನೀಡಿದ ಬಳಿಕ ಒಂದು ಮೂರ್ನಾಲ್ಕು ಸೆಷನ್‌ಗಳನ್ನು ಹೊರತುಪಡಿಸಿ ಉಳಿದೆಲ್ಲ ವಹಿವಾಟಿನಲ್ಲಿ ನಷ್ಟವನ್ನು ಕಂಡಿದೆ. ಒಂದು ಷೇರಿನ ವಿತರಣಾ ಬಲೆಯಿಂದ ಇನ್ನೂರು ರೂಪಾಯಿಗೂ ಅಧಿಕ ನಷ್ಟ ಕಂಡಿದೆ.


Click it and Unblock the Notifications