ಷೇರುಪೇಟೆಯಲ್ಲಿ ಗೂಳಿಯಾಟ: ಸೆನ್ಸೆಕ್ಸ್, ನಿಫ್ಟಿ ಎಷ್ಟು ಏರಿಕೆ?

ಸೋಮವಾರ, ಡಿಸೆಂಬರ್ 19ರಂದು ಆರಂಭಿಕ ವಹಿವಾಟಿನಲ್ಲಿ ಕೊಂಚ ಇಳಿಕೆಯಾಗಿದ್ದ ಷೇರು ಮಾರುಕಟ್ಟೆ ವಹಿವಾಟಿನ ಕೊನೆಯಲ್ಲಿ ಕೊಂಚ ಜಿಗಿದಿದೆ. ವಹಿವಾಟಿನ ಅಂತ್ಯದಲ್ಲಿ ನಿಫ್ಟಿ 18,400ರ ಸಮೀಪಕ್ಕೆ ತಲುಪಿದ್ದರೆ, ಸೆನ್ಸೆಕ್ಸ್ 468 ಅಂಕ ಏರಿದೆ. ಪ್ರಮುಖವಾಗಿ ಆಟೋ, ಎಫ್‌ಎಂಸಿಜಿ, ಮೆಟಲ್ ಸ್ಟಾಕ್‌ಗಳು ಹೆಚ್ಚಳವಾಗಿದೆ.

ಸೋಮವಾರ ವಹಿವಾಟಿನ ಆರಂಭದಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 24.04 ಅಂಕ ಅಥವಾ ಶೇಕಡ 0.04ರಷ್ಟು ಇಳಿಕೆಯಾಗಿದ್ದು 61313.77ಕ್ಕೆ ತಲುಪಿದೆ. ಇನ್ನು ನಿಫ್ಟಿ 8.30 ಅಂಕ ಅಥವಾ ಶೇಕಡ 0.05ರಷ್ಟು ಏರಿ 18260.70ಕ್ಕೆ ವಹಿವಾಟು ಅಂತ್ಯ ಮಾಡಿದೆ. ಇನ್ನು 1624 ಷೇರುಗಳು ಏರಿಕೆಯಾಗಿದ್ದರೆ, 644 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 133 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿದೆ.

ಪ್ರಮುಖವಾಗಿ ಇನ್ಫೋಸಿಸ್, ಸನ್‌ಫಾರ್ಮಾ, ಟಾಟಾ ಮೋಟರ್ಸ್, ವಿಪ್ರೋ, ಟೆಕ್ ಮಹೀಂದ್ರಾ ಪ್ರಮುಖವಾಗಿ ನಿಫ್ಟಿ ಗೇನರ್‌ಗಳು ಆಗಿದೆ. ಇನ್ನು ಪವರ್ ಗ್ರಿಡ್ ಕಾಪೋರೇಷನ್, ಇಂಡಸ್‌ಇಂಡ್ ಬ್ಯಾಂಕ್, ಹಿಂಡಾಲ್ಕೊ ಇಂಡಸ್ಟ್ರೀಸ್, ಕೋಲ್ ಇಂಡಿಯಾ, ನೆಸ್ಲೆ ಇಂಡಿಯಾ ಸ್ಟಾಕ್ ಇಳಿಕೆಯಾಗಿದೆ. ಹಾಗಾದರೆ ವಹಿವಾಟಿನ ಅಂತ್ಯದಲ್ಲಿ ಸ್ಟಾಕ್ ಮಾರುಕಟ್ಟೆ ಹೇಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ವಹಿವಾಟಿನ ಅಂತ್ಯದಲ್ಲಿ ಷೇರುಪೇಟೆ

ವಹಿವಾಟಿನ ಅಂತ್ಯದಲ್ಲಿ ಷೇರುಪೇಟೆ

ವಹಿವಾಟಿನ ಅಂತ್ಯದಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 468.38 ಅಂಕ ಅಥವಾ ಶೇಕಡ 0.76ರಷ್ಟು ಏರಿಕೆಯಾಗಿದ್ದು 61,806.19ಕ್ಕೆ ತಲುಪಿದೆ. ಇನ್ನು ನಿಫ್ಟಿ 151.50 ಅಂಕ ಅಥವಾ ಶೇಕಡ 0.83ರಷ್ಟು ಏರಿ 18,420.50ಕ್ಕೆ ವಹಿವಾಟು ಅಂತ್ಯ ಮಾಡಿದೆ. ಇನ್ನು 2071 ಷೇರುಗಳು ಏರಿಕೆಯಾಗಿದ್ದರೆ, 1436 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 155 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿದೆ.

 ಯಾವೆಲ್ಲ ಸ್ಟಾಕ್‌ಗಳು ಏರಿಕೆ, ಇಳಿಕೆ?

ಯಾವೆಲ್ಲ ಸ್ಟಾಕ್‌ಗಳು ಏರಿಕೆ, ಇಳಿಕೆ?

ಅದಾನಿ ಪೋರ್ಟ್ಸ್, ಈಚರ್ ಮೋಟರ್ಸ್, ಎಂ&ಎಂ, ಪವರ್ ಗ್ರಿಡ್ ಕಾಪೋರೇಷನ್, ಅದಾನಿ ಎಂಟರ್‌ಪ್ರೈಸಸ್ ಇಂದಿನ ಪ್ರಮುಖ ನಿಫ್ಟಿ ಗೇನರ್‌ಗಳು ಆಗಿದೆ. ಟಿಸಿಎಸ್, ಒಎನ್‌ಜಿಸಿ, ಇನ್ಪೋಸಿಸ್, ಸನ್ ಫಾರ್ಮಾ, ಟಾಟಾ ಮೋಟರ್ಸ್ ಇಳಿಕೆಯಾದ ಸ್ಟಾಕ್‌ಗಳು ಆಗಿದೆ. ಐಟಿ ಹೊರತುಪಡಿಸಿ, ಉಳಿದ ಎಲ್ಲ ಸೆಕ್ಟರ್‌ಗಳು ಪಾಸಿಟಿವ್ ಆಗಿದೆ. ಆಟೋ, ಮೆಟಲ್, ಎಫ್‌ಎಂಸಿಜಿ ಶೇಕಡ 1ರಷ್ಟು ಏರಿಕೆಯಾಗಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಇಂಡೆಕ್ಸ್ ಶೇಕಡ 0.6ರಷ್ಟು ಹೆಚ್ಚಳವಾಗಿದ್ದರೆ, ಸ್ಮಾಲ್ ಕ್ಯಾಪ್ ಇಂಡೆಕ್ಸ್ ಶೇಕಡ 0.3ರಷ್ಟು ಏರಿದೆ.

 ಟಾಪ್ ಗೇನರ್, ಲೂಸರ್ ಸ್ಟಾಕ್‌ಗಳು

ಟಾಪ್ ಗೇನರ್, ಲೂಸರ್ ಸ್ಟಾಕ್‌ಗಳು

ಡಿಸೆಂಬರ್ 19ರಂದು ಅದಾನಿ ಪೋರ್ಟ್ಸ್‌ ಟಾಪ್ ಗೇನರ್ ಆಗಿದೆ. ಸ್ಟಾಕ್ ಸುಮಾರು ಶೇಕಡ 3.77ರಷ್ಟು ಏರಿ, 892.82 ರೂಪಾಯಿಗೆ ತಲುಪಿದೆ. ಇನ್ನು ಟಿಸಿಎಸ್ ಪ್ರಮುಖ ಲೂಸರ್ ಸ್ಟಾಕ್ ಆಗಿದೆ. ಶೇಕಡ 1.18ರಷ್ಟು ಇಳಿದು, 3,202.05 ರೂಪಾಯಿಗೆ ತಲುಪಿದೆ.ನಿಫ್ಟಿ ಆಟೋ ಬೆಸ್ಟ್ ಸೆಕ್ಟರ್ ಆಗಿದೆ. ಶೇಕಡ 1.59ರಷ್ಟು ಹೆಚ್ಚಳವಾಗಿ, 12,978 ರೂಪಾಯಿಗೆ ತಲುಪಿದೆ. ನಿಫ್ಟಿ ಐಟಿ ಸೆಕ್ಟರ್ ಭಾರೀ ನಷ್ಟವನ್ನು ಅನುಭವಿಸಿದೆ. ಶೇಕಡ 0.51ರಷ್ಟು ಇಳಿದು, 28556.50 ರೂಪಾಯಿಗೆ ತಲುಪಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+