ಪುಟ್ಟಿದೆದ್ದ ಷೇರು ಪೇಟೆ: ಸನ್‌ ಫಾರ್ಮಾ ಸ್ಟಾಕ್ ಏರಿಕೆ

ಕಳೆದ ಎರಡು ಸೆಷನ್‌ನಿಂದ ಕುಸಿತ ಕಂಡಿದ್ದ ಷೇರು ಮಾರುಕಟ್ಟೆಯು ಬುಧವಾರ ವಹಿವಾಟಿನ ಅಂತ್ಯದಲ್ಲಿ ಏರಿಕೆಯನ್ನು ಕಂಡಿದೆ. ಯುಎಸ್ ಫೆಡರಲ್ ಸಭೆಯ ನಡುವೆ ಆರಂಭಿಕ ವಹಿವಾಟಿನಲ್ಲಿ ಷೇರು ಮಾರುಕಟ್ಟೆಯು ಕುಸಿದಿತ್ತು. ಆದರೆ ವಹಿವಾಟಿನ ಅಂತ್ಯದಲ್ಲಿ ಪುಟ್ಟಿದೆದ್ದಿದೆ.

ಬುಧವಾರ ಲಾಭ ಹಾಗೂ ನಷ್ಟವನ್ನು ಕಂಡು ವಹಿವಾಟಿನ ಅಂತ್ಯದಲ್ಲಿ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್, ಎನ್‌ಎಸ್‌ಇ ನಿಫ್ಟಿ ಲಾಭವನ್ನು ಕಂಡಿದೆ. ಸೋಮವಾರ, ಮಂಗಳವಾರ ಷೇರು ಪೇಟೆಯು ಕುಸಿತವನ್ನು ಕಂಡಿದೆ. ಬುಧವಾರ ಆರಂಭಿಕವಾಗಿಯೂ ಕುಸಿತವಾಗಿದೆ. ಆದರೆ ಬಳಿಕ ಏರಿಕೆಯಾಗಿದೆ.

ಬುಧವಾರ ಆರಂಭಿಕ ವಹಿವಾಟಿನಲ್ಲಿ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಸುಮಾರು 27 ಅಂಕ ಅಥವಾ ಶೇಕಡ 0.05ರಷ್ಟು ಕುಸಿದು 55,241ಕ್ಕೆ ತಲುಪಿದೆ. ಇನ್ನು ಎನ್‌ಎಸ್‌ಇಯಲ್ಲಿ ನಿಫ್ಟಿಯು 9 ಅಂಕ ಅಥವಾ ಶೇಕಡ 0.05ರಷ್ಟು ಕೆಳಕ್ಕೆ ಇಳಿದು 16,475ಕ್ಕೆ ವಹಿವಾಟು ಆರಂಭ ಮಾಡಿದೆ.

 ಪುಟ್ಟಿದೆದ್ದ ಷೇರು ಪೇಟೆ: ಸನ್‌ ಫಾರ್ಮಾ ಸ್ಟಾಕ್ ಏರಿಕೆ

ವಹಿವಾಟಿನ ಅಂತ್ಯದ ವೇಳೆಗೆ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 547.83 ಅಂಕ ಅಥವಾ ಶೇಕಡ 0.99ರಷ್ಟು ಏರಿಕೆಯಾಗಿ 55,816.32ಕ್ಕೆ ತಲುಪಿದೆ. ಇನ್ನು ನಿಫ್ಟಿ ಶೇಕಡ 0.96ರಷ್ಟು ಅಥವಾ 157.95 ಅಂಕ ಏರಿಕೆಯಾಗಿ 16,641.80ಕ್ಕೆ ವಹಿವಾಟು ಅಂತ್ಯ ಮಾಡಿದೆ.

ಯಾವೆಲ್ಲಾ ಷೇರುಗಳು ಏರಿಕೆ, ಯಾವೆಲ್ಲಾ ಷೇರುಗಳು ಇಳಿಕೆ

ಶಾಪರ್ಸ್ ಸ್ಟಾಪ್, ಎಸ್‌ ಬ್ಯಾಂಕ್, ಎಸ್‌ಬಿಐ, ಸನ್‌ಫಾರ್ಮಾ, ಎಲ್‌ಟಿ, ಬಜಾಜ್ ಫೈನಾನ್ಸ, ಏಷ್ಯನ್ ಪೇಂಟ್ಸ್, ಟಿಸಿಎಸ್, ಅಲ್ಟ್ರಾಟೆಕ್ ಸಿಮೆಂಟ್, ಡಾ ರೆಡ್ಡೀಸ್, ಆಕ್ಸಿಸ್ ಬ್ಯಾಂಕ್, ಎಚ್‌ಸಿಎಲ್ ಟೆಕ್, ಇಂಡಸ್‌ಇಂಡ್ ಬ್ಯಾಂಕ್, ಮಾರುತಿ, ಹಿಂದೂಸ್ತಾನ್ ಯೂನಿಲಿವರ್, ಟಾಟಾ ಸ್ಟೀಲ್ಸ್, ಇನ್ಫೋಸಿಸ್, ಪವರ್‌ಗ್ರಿಡ್, ಎಚ್‌ಡಿಎಫ್‌ಸಿ ಬ್ಯಾಂಕ್, ಟೆಕ್ ಎಂ, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ವಿಪ್ರೋ, ಐಟಿಸಿ, ನೆಸ್ಲೆ ಇಂಡಿಯಾ, ಟೈಟಾನ್, ಬಜಾಜ್‌ ಫಿನ್‌ಸರ್ವ್, ಎಂ&ಎಂ, ರಿಲಯನ್ಸ್ ಷೇರುಗಳು ಏರಿಕೆ ಕಂಡಿದೆ.

ಆದರೆ ಈ ಸಂದರ್ಭದಲ್ಲೇ ಎನ್‌ಟಿಪಿಸಿ, ಕೋಟಕ್ ಬ್ಯಾಂಕ್, ಭಾರ್ತಿ ಏರ್‌ಟೆಲ್, ಬಜಾಜ್ ಆಟೋ, ಮಹೀಂದ್ರಾ & ಮಹೀಂದ್ರಾ ಫಿನಾನ್ಶಿಯಲ್ ಸರ್ವಿಸಸ್, ಕರೂರ್ ವ್ಯಾಸ ಬ್ಯಾಂಕ್ ಷೇರುಗಳು ಕುಸಿತವನ್ನು ಕಂಡಿದೆ. ಭಾರ್ತಿ ಏರ್‌ಟೆಲ್ ಭಾರೀ ನಷ್ಟವನ್ನು ಕಂಡಿದೆ. 5ಜಿ ಸ್ಪೆಕ್ಟ್ರಮ್ ಹರಾಜಿನ ನಡುವೆಯೇ ಭಾರ್ತಿ ಏರ್‌ಟೆಲ್ ಷೇರುಗಳು ಕುಸಿತವಾಗಿರುವುದರಿಂದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಭಾರ್ತಿ ಏರ್‌ಟೆಲ್ ಷೇರುಗಳು ಶೇಕಡ 1.34ರಷ್ಟು ಕುಸಿದು ರೂಪಾಯಿ 674.90ಕ್ಕೆ ತಲುಪಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+