For Quick Alerts
ALLOW NOTIFICATIONS  
For Daily Alerts

ಷೇರುಪೇಟೆ ಏರಿಕೆ: ಐಟಿ, ಬ್ಯಾಂಕ್ ಪ್ರಮುಖ ಸ್ಟಾಕ್

|

ಆರಂಭಿಕ ವಹಿವಾಟಿನಲ್ಲಿ ಏರಿಕೆಯನ್ನು ಕಂಡಿದ್ದ ಷೇರು ಮಾರುಕಟ್ಟೆಯು ಗುರುವಾರ ವಹಿವಾಟಿನ ಅಂತ್ಯದಲ್ಲಿಯೂ ಲಾಭವನ್ನು ಗಳಿಸಿದೆ. ಪ್ರಮುಖವಾಗಿ ಐಟಿ, ಬ್ಯಾಂಕ್, ರಿಯಾಲಿಟಿ ಸ್ಟಾಕ್‌ಗಳು ಷೇರುಪೇಟೆಗೆ ಬಲತುಂಬಿದೆ. ನಿಫ್ಟಿ ಪಿಎಸ್‌ಯು ಬ್ಯಾಂಕ್ ಏರಿಕೆಯನ್ನು ಕಂಡಿದ್ದರೆ, ನಿಫ್ಟಿ ಎಫ್‌ಎಂಸಿಜಿ ಭಾರೀ ಇಳಿಕೆಯಾಗಿದೆ.

ಗುರುವಾರ ಆರಂಭಿಕ ವಹಿವಾಟಿನಲ್ಲಿ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 585.21 ಅಂಕ ಅಥವಾ ಶೇಕಡ 0.99ರಷ್ಟು ಏರಿಕೆಯಾಗಿ 59402.50ಕ್ಕೆ ತಲುಪಿದ್ದರೆ, ಎನ್‌ಎಸ್‌ಇ ನಿಫ್ಟಿ 161.40 ಅಂಕ ಅಥವಾ ಶೇಕಡ 0.92ರಷ್ಟು ಏರಿ 17696.20ಕ್ಕೆ ವಹಿವಾಟು ಆರಂಭ ಮಾಡಿದೆ.

ಷೇರುಪೇಟೆ ಚೇತರಿಕೆ: ಯಾವೆಲ್ಲಾ ಷೇರುಗಳು ಏರಿಕೆ?ಷೇರುಪೇಟೆ ಚೇತರಿಕೆ: ಯಾವೆಲ್ಲಾ ಷೇರುಗಳು ಏರಿಕೆ?

ವಹಿವಾಟಿನ ಅಂತ್ಯದ ವೇಳೆಗೆ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 515.31 ಅಂಕ ಅಥವಾ ಶೇಕಡ 0.88ರಷ್ಟು ಏರಿಕೆಯಾಗಿ 59,332.60ಕ್ಕೆ ತಲುಪಿದ್ದರೆ, ಎನ್‌ಎಸ್‌ಇ ನಿಫ್ಟಿ 124.20 ಅಂಕ ಅಥವಾ ಶೇಕಡ 0.71ರಷ್ಟು ಏರಿ 17,659.00ಕ್ಕೆ ಸ್ಥಿರವಾಗಿದೆ. 1772 ಷೇರುಗಳು ಏರಿಕೆಯಾದರೆ, 1530 ಷೇರುಗಳು ಕುಸಿದಿದೆ. 138 ಷೇರುಗಳು ಸ್ಥಿರವಾಗಿದೆ. ವಹಿವಾಟಿನ ಅಂತ್ಯದಲ್ಲಿ ಯಾವ ಷೇರು ಏರಿಕೆಯಾಗಿದೆ, ಯಾವ ಷೇರು ಇಳಿಕೆಯಾಗಿದೆ ಎಂದು ತಿಳಿಯೋಣ ಮುಂದೆ ಓದಿ....

ಷೇರುಪೇಟೆ ಏರಿಕೆ: ಐಟಿ, ಬ್ಯಾಂಕ್ ಪ್ರಮುಖ ಸ್ಟಾಕ್

ಟಾಪ್ ಸ್ಟಾಕ್ ಇದೆ ನೋಡಿ

ಷೇರು ಮಾರುಕಟ್ಟೆಯಲ್ಲಿ ಆಕ್ಸಿಸ್ ಬ್ಯಾಂಕ್ ಪ್ರಮುಖ ಷೇರು ಆಗಿದೆ. ಆಕ್ಸಿಸ್ ಬ್ಯಾಂಕ್ ಸ್ಟಾಕ್ ಟಾಪ್ ಗೇನರ್ ಆಗಿದೆ. ಸ್ಟಾಕ್ ಸುಮಾರು ಶೇಕಡ 2.69ರಷ್ಟು ಏರಿಕೆಯಾಗಿ, ರೂಪಾಯಿ 758.85ಕ್ಕೆ ತಲುಪಿದೆ. ಟಾಟಾ ಕನ್ಸ್ಯೂಮರ್ ಪ್ರೋಡೆಕ್ಟ್ ಭಾರೀ ನಷ್ಟವನ್ನು ಅನುಭವಿಸಿದ ಸ್ಟಾಕ್ ಆಗಿದೆ. ಸ್ಟಾಕ್ ಶೇಕಡ 2.16ರಷ್ಟು ಕುಸಿದು, ರೂಪಾಯಿ 773.45ಕ್ಕೆ ಇಳಿದು ವಹಿವಾಟು ಅಂತ್ಯ ಮಾಡಿದೆ. ಆರಂಭಿಕ ವಹಿವಾಟಿನಲ್ಲೂ ಟಾಟಾ ಕನ್ಸ್ಯೂಮರ್ ಪ್ರೋಡೆಕ್ಟ್ ಭಾರೀ ನಷ್ಟ ಕಂಡಿದೆ. ಷೇರು ಶೇಕಡ 1.68ರಷ್ಟು ಕುಸಿದು, ರೂಪಾಯಿ 777.30ಕ್ಕೆ ತಲುಪಿತ್ತು.

ಸೆನ್ಸೆಕ್ಸ್ ಕುಸಿತ, ನಿಫ್ಟಿ ಏರಿಕೆ: ಬುಧವಾರ ವಹಿವಾಟಿನ ಅಂತ್ಯ ಹೀಗಿದೆಸೆನ್ಸೆಕ್ಸ್ ಕುಸಿತ, ನಿಫ್ಟಿ ಏರಿಕೆ: ಬುಧವಾರ ವಹಿವಾಟಿನ ಅಂತ್ಯ ಹೀಗಿದೆ

ಯಾವ ಸ್ಟಾಕ್‌ಗಳು ಏರಿಕೆ, ಇಳಿಕೆ?

ಆಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ, ಟೆಕ್ ಮಹೀಂದ್ರಾ, ವಿಪ್ರೋ, ಎಸ್‌ಬಿಐ, ಟಿಸಿಎಸ್ ಟಿಸಿಎಸ್ ಟಾಪ್ ನಿಫ್ಟಿ ಗೇನರ್ ಆಗಿದೆ. ಟಾಟಾ ಕನ್ಸ್ಯೂಮರ್ ಪ್ರೊಡೆಕ್ಟ್ಸ್, ಅಪೋಲೋ ಹಾಸ್ಪಿಟಲ್, ಐಟಿಸಿ, ಹಿಂಡಾಲ್ಕೊ ಇಂಡಸ್ಟ್ರೀಸ್, ಎನ್‌ಟಿಪಿಸಿ ಸ್ಟಾಕ್ ಇಳಿಕೆಯಾಗಿದೆ. ಎಫ್‌ಎಂಸಿಜಿ ಹೊರತುಪಡಿಸಿ ಉಳಿದೆಲ್ಲಾ ಸೆಕ್ಟರ್‌ಗಳು ಲಾಭ ಕಂಡಿದೆ. ಬ್ಯಾಂಕ್, ಕ್ಯಾಪಿಟಲ್ ಗೂಡ್ಸ್, ಇನ್ಫಾರ್ಮೆಷನ್ ಟೆಕ್ನಾಲಜಿ, ಪಿಎಸ್‌ಯು ಬ್ಯಾಂಕ್ ಶೇಕಡ 1-2ರಷ್ಟು ಏರಿಕೆಯಾಗಿದೆ. ಬಿಎಸ್‌ಇ ಮಿಡ್‌ಕ್ಯಾಪ್, ಸ್ಮಾಲ್ ಕ್ಯಾಪ್ ಶೇಕಡ 0.5ರಷ್ಟು ಏರಿಕೆಯಾಗಿದೆ. ಐಟಿಸಿ, ಎನ್‌ಟಿಪಿಸಿ, ಎಚ್‌ಯುಎಲ್, ಭಾರ್ತಿ ಏರ್‌ಟೆಲ್, ಮಾರುತಿ, ನೆಸ್ಲೆ ಇಂಡಿಯಾ ಶೇಕಡ 1.56ರಷ್ಟು ಕುಸಿದಿದೆ.

English summary

Closing Bell: Sensex Rises Over 500 Points, Nifty Trades Above 17,600

Sensex Rises Over 500 Points, Nifty Trades Above 17,600.
Story first published: Thursday, August 11, 2022, 18:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X