ಮೂರು ದಿನದ ಕುಸಿತಕ್ಕೆ ಬ್ರೇಕ್: ಸೆನ್ಸೆಕ್ಸ್, ನಿಫ್ಟಿ ಜಿಗಿತ

ನಿರಂತರವಾಗಿ ಮೂರು ದಿನಗಳಿಂದ ವಹಿವಾಟಿನ ಕೊನೆಯಲ್ಲಿ ನಷ್ಟವನ್ನು ಕಾಣುತ್ತಿದ್ದ ಷೇರು ಮಾರುಕಟ್ಟೆ ಗುರುವಾಗ ಲಾಭದೊಂದಿಗೆ ವಹಿವಾಟು ಅಂತ್ಯ ಮಾಡಿದೆ. ಬ್ಯಾಂಕಿಂಗ್ ಮತ್ತು ಲೋಹದ ಷೇರು ಖರೀದಿಯು ಹೆಚ್ಚಳವಾದ ಹಿನ್ನೆಲೆ ವಹಿವಾಟಿನ ಅಂತ್ಯದ ವೇಳೆಗೆ ಏರಿಳಿತ ಕಂಡು ಬಂದಿದೆ. ಆದರೆ ಕೊನೆಗೆ ಲಾಭದೊಂದಿಗೆ ಮಾರುಕಟ್ಟೆ ವಹಿವಾಟು ಸ್ಥಗಿತಮಾಡಿದೆ.

30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 503 ಪಾಯಿಂಟ್‌ಗಳು ಅಥವಾ ಶೇಕಡಾ 0.94 ರಷ್ಟು ಏರಿಕೆಯಾಗಿ 54,253 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 144 ಪಾಯಿಂಟ್ ಅಥವಾ 0.90 ರಷ್ಟು ಏರಿಕೆ ಕಂಡು 16,170 ಕ್ಕೆ ವಹಿವಾಟು ಅಂತ್ಯ ಮಾಡಿದೆ.

ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 1.35 ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 0.77 ರಷ್ಟು ಏರಿಕೆ ಕಂಡಿದೆ. ನಿಫ್ಟಿ ಬ್ಯಾಂಕ್ ಮತ್ತು ನಿಫ್ಟಿ ಮೆಟಲ್ ಕ್ರಮವಾಗಿ ಶೇಕಡಾ 2.20 ಮತ್ತು 2.67 ರಷ್ಟು ಏರಿಕೆ ಕಂಡಿದೆ.

 ಮೂರು ದಿನದ ಕುಸಿತಕ್ಕೆ ಬ್ರೇಕ್: ಸೆನ್ಸೆಕ್ಸ್, ನಿಫ್ಟಿ ಜಿಗಿತ

ಟಾಟಾ ಸ್ಟೀಲ್ ಟಾಪ್ ನಿಫ್ಟಿ ಗೇನರ್

ಟಾಟಾ ಸ್ಟೀಲ್ ಟಾಪ್ ನಿಫ್ಟಿ ಗೇನರ್ ಆಗಿದ್ದು, ಷೇರುಗಳು ಶೇಕಡಾ 5.08 ರಷ್ಟು ಏರಿಕೆಯಾಗಿ ರೂಪಾಯಿ 1,049.90ಕ್ಕೆ ವಹಿವಾಟು ಅಂತ್ಯ ಮಾಡಿದೆ. ಅಪೊಲೊ ಹಾಸ್ಪಿಟಲ್ಸ್, ಜೆಎಸ್‌ಡಬ್ಲ್ಯೂ ಸ್ಟೀಲ್, ಎಸ್‌ಬಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಕೂಡ ಲಾಭ ಗಳಿಸಿದೆ. 1,770 ಷೇರುಗಳು ಲಾಭ ಗಳಿಸಿದರೆ, ಬಿಎಸ್‌ಇಯಲ್ಲಿ 1,530 ಷೇರುಗಳು ನಷ್ಟ ಕಂಡಿದೆ.

30-ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ, ಟಾಟಾ ಸ್ಟೀಲ್, ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ನೆಸ್ಲೆ ಇಂಡಿಯಾ, ಎಚ್‌ಡಿಎಫ್‌ಸಿ, ವಿಪ್ರೋ, ಟಿಸಿಎಸ್, ಟೆಕ್ ಮಹೀಂದ್ರಾ, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಟೈಟಾನ್ ಷೇರುಗಳು ಏರಿಕೆಯಾಗಿದೆ. ಆದರೆ ಸನ್ ಫಾರ್ಮಾ, ರಿಲಯನ್ಸ್ ಇಂಡಸ್ಟ್ರೀಸ್, ಹಿಂದೂಸ್ತಾನ್ ಯೂನಿಲಿವರ್, ಎಲ್ & ಟಿ ಮತ್ತು ಡಾ ರೆಡ್ಡೀಸ್ ನಷ್ಟದೊಂದಿಗೆ ವಹಿವಾಟು ಅಂತ್ಯ ಮಾಡಿದೆ.

ಆರಂಭಿಕ ವಹಿವಾಟಿನಲ್ಲಿ 30-ಷೇರು ಬಿಎಸ್‌ಇ ಸೆನ್ಸೆಕ್ಸ್ 304 ಪಾಯಿಂಟ್‌ಗಳು ಅಥವಾ ಶೇಕಡಾ 0.57 ರಷ್ಟು ಏರಿಕೆಯಾಗಿ 54,053 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 85 ಪಾಯಿಂಟ್ ಅಥವಾ 0.53 ರಷ್ಟು ಏರಿಕೆಯಾಗಿ 16,111 ಕ್ಕೆ ವಹಿವಾಟು ನಡೆಸಿದೆ.

ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 0.43 ರಷ್ಟು ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 0.30 ರಷ್ಟು ಏರಿಕೆಯಾಗಿದೆ. ನಿಫ್ಟಿ ಬ್ಯಾಂಕ್, ನಿಫ್ಟಿ ಫೈನಾನ್ಷಿಯಲ್ ಸರ್ವಿಸಸ್ ಮತ್ತು ನಿಫ್ಟಿ ಐಟಿಗಳು ಕ್ರಮವಾಗಿ ಶೇಕಡಾ 0.95, 0.90 ಮತ್ತು 0.87 ರಷ್ಟು ಏರಿಕೆಯಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+